ಒತ್ತಡಕ್ಕೆ ಮಣಿದು ಸಿಎಂ ಜಾತಿ ಗಣತಿ ವರದಿ ತಿರಸ್ಕಾರ: ಲೀಗ್ ರಾಷ್ಟ್ರೀಯ ಉಪಾಧ್ಯಕ್ಷ ದಸ್ತಗೀರ್ ಸಾಹೇಬ್

ಮಂಗಳೂರು: ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ನೇತೃತ್ವದಲ್ಲಿ ಮಂಡಿಸಲಾದ ಜಾತಿಗಣತಿ ವರದಿಯು ಸೋರಿಕೆಯಾಗಲು ರಾಜ್ಯ ಸರಕಾರದ ವೈಫಲ್ಯವೇ ಕಾರಣವಾಗಿದೆ. ಇದೀಗ ಅಹಿಂದ ವರ್ಗದ ಈ ವರದಿ ಯನ್ನು ತಿರಸ್ಕರಿಸಿ ಇತರ ರಾಜ್ಯದ ಮಾದರಿ ಮೂಲಕ ಜಾತಿಗಣತಿ ಮಾಡಲಾಗುವುದೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಹೇಳಿಕೆಯು ಖಂಡನೀಯ ಎಂದು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ರಾಷ್ಟ್ರೀಯ ಉಪಾಧ್ಯಕ್ಷ ಹಾಜಿ ದಸ್ತಗೀರ್ ಆಗಾ ಸಾಹೇಬ್ ಹೇಳಿದ್ದಾರೆ.
ಅವರು ನಗರದಲ್ಲಿ ಮುಸ್ಲಿಂ ಲೀಗ್ ಮುಖಂಡರ ಜೊತೆ ಚರ್ಚೆ ನಡೆಸಿ ಮಾತನಾಡಿದರು.
ಯಾವುದೇ ಒತ್ತಡಗಳಿಗೆ ಮಣಿಯದೆ ಎಲ್ಲಾ ವರ್ಗದವರ ಪರವಾಗಿರುವ ಕಾಂತರಾಜು ವರದಿಯೇ ಸೂಕ್ತ ವಾಗಿದೆ. ಈ ವರದಿಯ ಜಾರಿಗಾಗಿ ಮುಸ್ಲಿಂ ಲೀಗ್ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವು ದೆಂದು ಹಾಜಿ ದಸ್ತಗೀರ್ ಆಗಾ ಸಾಹೇಬ್ ಎಚ್ಚರಿಕೆ ನೀಡಿದರು.
ದ.ಕ.ಜಿಲ್ಲಾಧ್ಯಕ್ಷ ಸಿ. ಅಬ್ದುರ‌್ರಹ್ಮಾನ್, ಹಾಜಿ ಅಬ್ದುಲ್ ರೆಹ್ಮಾನ್, ಸಯ್ಯದ್ ಶಾಹುಲ್ ಹಮೀದ್ ತಂಳ್, ರಿಯಾಝ್ ಹರೇಕಳ, ಶಬೀರ್ ಅಬ್ಬಾಸ್ ತಲಪಾಡಿ, ಎಚ್. ಮುಹಮ್ಮದ್ ಇಸ್ಮಾಯಿಲ್ ಬಂದರ್, ನೌಶಾದ್ ಮಲಾರ್ ಉಪಸ್ಥಿತರಿದ್ದರು.





