ಬಜ್ಪೆ: ಹಣ ಪಡೆದು ವಂಚಿಸಿದ ಆರೋಪ; ದಂಪತಿಯ ವಿರುದ್ಧ ಪ್ರಕರಣ ದಾಖಲು

ಬಜ್ಪೆ: ವಿದೇಶಕ್ಕೆ ಹೋಗಲು ವಿಸಾ ವ್ಯವಸ್ಥೆ ಮಾಡುವುದಾಗಿ ನಂಬಿಸಿ ಹಣ ಪಡೆದು ವಂಚಿಸಿರುವ ದಂಪತಿಯ ವಿರುದ್ಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳನ್ನು ಮಂಗಳೂರು ಶಿವಭಾಗ್ ಕದ್ರಿ 4ನೇ ರಿಂಗ್ ಕ್ರಾಸ್ ನಿವಾಸಿಗಳಾದ ಮರಿಯಾ ಜೋಸೆಫ್(54) ಮತ್ತು ಅವರ ಗಂಡ ಜೋಸೆಫ್ (59 ) ತಿಳಿದು ಬಂದಿದೆ.
ಬಜ್ಪೆ ನಿವಾಸಿಯಾಗಿರುವ ವಿರಾಜ್ ಎಂಬವರು ಉರ್ವಾದಲ್ಲಿ ಪಿ.ಜಿ ನಡೆಸುತ್ತಿದ್ದರು. ಮರಿಯ ಜೋಸೆಫ್ ಮತ್ತು ಅವರ ಗಂಡ ಜೋಸೆಫ್ ತರಕಾರಿ ಖರೀದಿಸಲು ಬರುತ್ತಿದ್ದರು.
ಅಂಗಡಿಯಲ್ಲಿ ವಿರಾಜ್ ಅವರ ಮಗ ಆಶಿಶ್ ಎಂ.ಆರ್.ನನ್ನು ಕಂಡು ಆತನಿಗೆ ವಿಸಾ ಕೊಡಿಸುವುದಾಗಿ ತಿಳಿಸಿದ್ದರು. ವಿಸಾ ಹೊಂದಿಸಲು ಹಣ ಬೇಕಾಗಿದೆ ಎಂದು 2024 ಆಗಸ್ಟ್ ನಿಂದ 2024ರ ಸೆಪ್ಟಂಬರ್ ನಡುವೆ ಸುಮಾರು 1.97 ಲಕ್ಷ ರೂ. ನೀಡಿದ್ದು, ಜೋಸೆಫ್ ದಂಪತಿ ಈ ವರೆಗೆ ವಿಸಾವನ್ನೂ ಹೊಂದಿಸದೇ ಹಣವನ್ನೂ ಹಿಂದಿರುಗಿಸದೇ ವಂಚಿಸುತ್ತಿದ್ದಾರೆ ಎಂದು ವಿರಾಜ್ ಅವರು ಬಜ್ಪೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಅವರ ದೂರು ಆಧರಿಸಿ ಬಜ್ಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.





