ಮಾದಕ ವಸ್ತು ಸೇವನೆ ಪ್ರಕರಣ: ಆರೋಪಿ ಸೆರೆ

ಮಂಗಳೂರು, ಜು.18: ನಗರದ ಕಾವೂರು ಜಂಕ್ಷನ್ ಬಳಿ ಮಾದಕ ವಸ್ತು ಸೇವನೆ ಮಾಡಿದ ಆರೋಪದಲ್ಲಿ ತೋಟಬೆಂಗ್ರೆ ನಿವಾಸಿ ಸುಹಾಲ್ ಸಿ. ಪುತ್ರನ್ (19) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಜು.17ರಂದು ಸಂಜೆ 5:50ರ ವೇಳೆಗೆ ಆರೋಪಿಯು ಕಾವೂರು ಜಂಕ್ಷನ್ ಬಳಿ ಮಾದಕ ವಸ್ತು ಸೇವಿಸಿ ತಿರುಗಾಡುತ್ತಿದ್ದ ಮಾಹಿತಿಯ ಮೇರೆಗೆ ಕಾವೂರು ಪೊಲೀಸರು ಬಂಧಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.
Next Story





