ಸ್ಕೂಟರ್‌ನಲ್ಲಿಟ್ಟಿದ್ದ ನಗದು ಕಳವು: ಪ್ರಕರಣ ದಾಖಲು

ಮಂಗಳೂರು: ನಗರದ ಪಾಂಡೇಶ್ವರ ಸಮೀಪದ ರಸ್ತೆ ಬದಿ ನಿಲ್ಲಿಸಿದ ಸ್ಕೂಟರ್‌ನ ಡಿಕ್ಕಿಯಲ್ಲಿರಿಸಿದ್ದ 50 ಸಾವಿರ ರೂ. ನಗದು ಕಳವಾದ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾನು ಬಂದರ್ ದಕ್ಕೆಯಲ್ಲಿ ಬೋಟ್‌ನ ಕಲೆಕ್ಷನ್‌ನಿಂದ ಬಂದ ೫೦ ಸಾವಿರ ರೂ.ವನ್ನು ಸ್ಕೂಟರ್‌ನ ಡಿಕ್ಕಿ ಯಲ್ಲಿರಿಸಿ ಪಾಂಡೇಶ್ವರ ಮಾಲ್‌ನ ಬಳಿ ಪಾರ್ಕ್ ಮಾಡಿದ್ದೆ. ನಂತರ ಗೆಳೆಯ ಇಬ್ರಾಹಿಂ ಜೊತೆ ಮನೆಗೆ ಬೇಕಾದ ಸಾಮಾಗ್ರಿಗಳನ್ನು ಖರೀದಿಸಲು ಮಾಲ್‌ಗೆ ಹೋಗಿದ್ದೆ. ಅಲ್ಲಿಂದ ಮರಳಿ ಬರುತ್ತಿದ್ದಾಗ ಹೆಲ್ಮೆಟ್ ಹಾಕಿದ, ಕಪ್ಪು ಬಣ್ಣದ ಜಾಕೆಟ್ ಧರಸಿದ್ದ, ನೀಲಿ ಬಣ್ಣದ ದಪ್ಪ ಶರೀರದ ಅಪರಿಚಿತ ವ್ಯಕ್ತಿ ಸ್ಕೂಟರ್ ಡಿಕ್ಕಿ ತೆರೆಯುತ್ತಿರುವುದು ಕಂಡೆ. ತಕ್ಷಣ ತಾನು ಸ್ಕೂಟರ್ ಬಳಿ ಓಡಿ ಬಂದಾಗ ಆರೋಪಿಯು 50 ಸಾವಿರ ರೂ.ನೊಂದಿಗೆ ಮತ್ತೊಂದು ಸ್ಕೂಟರ್‌ನಲ್ಲಿ ಪರಾರಿಯಾಗಿದ್ದಾನೆ ಎಂದು ಹೈದರ್ ಎಂಬವರು ದೂರು ನೀಡಿದ್ದಾರೆ.
Next Story





