ಸಖಿ ಒನ್ ಸ್ಟಾಪ್: ಜಾಗೃತಿ ಶಿಬಿರ

ಮಂಗಳೂರು: ಸಖಿ ಒನ್ ಸ್ಟಾಪ್ ಸೆಂಟರ್ ದಕ್ಷಿಣ ಕನ್ನಡ ಮತ್ತು ಸರಕಾರಿ ಲೇಡಿಗೋಷನ್ ಆಸ್ಪತ್ರೆ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಮಹಿಳಾ ರಕ್ಷಣಾ ಕಾನೂನು ಮತ್ತು ನಿಯಮಗಳು ಹಾಗೂ ಇದರ ಪಾಲನೆಯಲ್ಲಿ ಆಸ್ಪತ್ರೆಗಳ ಪಾತ್ರ ಎಂಬ ವಿಚಾರದ ಬಗ್ಗೆ ವಿಶೇಷ ಜಾಗೃತಿ ಶಿಬಿರ ಸರಕಾರಿ ಲೇಡಿಗೋಷನ್ ಆಸ್ಪತ್ರೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಸಖಿ ಒನ್ ಸ್ಟಾಪ್ ಸೆಂಟರ್ ಇದರ ಸೆಂಟರ್ ಆಡಳಿತಾಧಿಕಾರಿ ಪ್ರಿಯಾ ಕೆ.ಸಿ. ಇವರು ಆಸ್ಪತ್ರೆ ಸಿಬ್ಬಂದಿಗಳಿಗೆ ವಿಶೇಷ ಮಾಹಿತಿ ಉಪನ್ಯಾಸವನ್ನು ನೀಡಿದರು. ಸ್ವಯಂ ಜ್ಞಾನಾಭಿವೃದ್ಧಿಯನ್ನು ಪ್ರತೀ ಸಿಬ್ಬಂದಿ ಅನುಸರಣೆ ಮಾಡಿದಾಗ ಮಾತ್ರ ಮಹಿಳೆಯರ ಸರ್ವಾಂಗೀಣ ಪ್ರಗತಿ ಸಾಧ್ಯ ಎಂದರು.
ಸಖಿ ಅಡ್ವೋಕೇಟ್ ಅಮೃತಾ ಅವರು ಪೊಕ್ಸೋ ಕಾಯಿದೆ ಬಗ್ಗೆ ತಿಳುವಳಿಕೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಲೇಡಿಗೋಷನ್ ಅಧೀಕ್ಷಕ ಡಾ.ದುರ್ಗಾಪ್ರಸಾದ್.ಎಂ.ಆರ್ ಮಾತನಾಡಿ, ಹೆಣ್ಣೆಂದರೆ ಈ ಪ್ರಕೃತಿಯ ಸುಂದರ ಮತ್ತು ಪವಿತ್ರ ಸೃಷ್ಟಿ ಹಾಗೂ ಇದರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.
ಕಾರ್ಯಕ್ರಮದಲ್ಲಿ ಡಾ.ಜಗದೀಶ್, ಶಂಕರ್, ಅನಿತಾ ಸತ್ಯನ್, ತ್ರೇಸಿಯಮ್ಮ, ಮಲ್ಲಿಕಾ, ಸಖಿ ಒನ್ ಸ್ಟಾಪ್ ಸೆಂಟರ್ ಆಪ್ತ ಸಮಾಲೋಚಕಿ ಹರ್ಷಿತಾ ಅವರು ಉಪಸ್ಥಿತರಿದ್ದರು.
ಅಂಬಿಕಾ ಕಾರ್ಯಕ್ರಮ ನಿರೂಪಿಸಿದರು. ಸವಿತಾ ಸ್ವಾಗತಿಸಿ, ಕಲ್ಪನಾ ವಂದಿಸಿದರು.







