ಬಹುಕೋಟಿ ವಂಚನೆ ಪ್ರಕರಣ: ಬ್ಯಾಂಕ್ ಖಾತೆ ಸ್ತಬ್ಧಕ್ಕೆ ತನಿಖಾಧಿಕಾರಿಗಳು ಸೂಚನೆ

ರೋಶನ್ ಸಲ್ಡಾನ
ಮಂಗಳೂರು, ಜು.19: ಶ್ರೀಮಂತ ಉದ್ಯಮಿಗಳಿಗೆ ಬಹುಕೋಟಿ ರೂ.ವಂಚನೆಗೈದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಬಜಾಲ್ ಬೊಲ್ಲಗುಡ್ಡ ನಿವಾಸಿ ರೋಶನ್ ಸಲ್ಡಾನ (43)ನ ಬ್ಯಾಂಕ್ ಖಾತೆಯನ್ನು ಸ್ತಬ್ಧಗೊಳಿಸಲು ತನಿಖಾಧಿಕಾರಿಗಳು ಸೂಚನೆ ನೀಡಿದ್ದಾರೆ.
ಮಹಾರಾಷ್ಟ್ರದ ಉದ್ಯಮಿಯೊಬ್ಬರು ಜು.18ರಂದು ನಗರ ಸೆನ್ ಕ್ರ್ತ್ರೈಂ ಪೊಲೀಸ್ ಠಾಣೆಗೆ ತೆರಳಿ 5 ಕೋ.ರೂ. ಹಾಗೂ ಅಸ್ಸಾಮಿನ ವ್ಯಕ್ತಿಯೊಬ್ಬರು 20 ಲಕ್ಷ ರೂ.ವನ್ನು ಜು.16 ಮತ್ತು 17ರಂದು ವರ್ಗಾಯಿಸಿರುವುದಾಗಿ ದೂರು ನೀಡಿದ್ದರು. ಅದರಂತೆ ಸಂಬಂಧಪಟ್ಟ ಬ್ಯಾಂಕ್ಗಳನ್ನು ಸಂಪರ್ಕಿಸಿ ಮಹಾರಾಷ್ಟ್ರದ ಉದ್ಯಮಿಗೆ ಸಂಬಂಧಿಸಿದ 3.5 ಕೋ.ರೂ ಹಾಗೂ ಅಸ್ಸಾಮಿನ ವ್ಯಕ್ತಿಗೆ ಸಂಬಂಧಿಸಿದ 20 ಲಕ್ಷ ರೂ.ವನ್ನು ಸ್ಥಗಿತಗೊಳಿಸಲು ಸೂಚಿಸಲಾಗಿದೆ.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಿದೆ. ಹೆಚ್ಚಿನ ವಿಚಾರಣೆಗೆ ಆರೋಪಿತನನ್ನು ಪೊಲೀಸ್ ಕಸ್ಟಡಿಗೆ ತನಿಖಾಧಿಕಾರಿಗಳು ಕೇಳಿದ್ದಾರೆಂದು ಮೂಲಗಳು ತಿಳಿಸಿವೆ.
Next Story





