ಮಂಗಳೂರು - ಅಯೋಧ್ಯೆ ನೇರ ರೈಲು ಆರಂಭಿಸಲು ಸಂಸದ ಚೌಟ ಆಗ್ರಹ

ಮಂಗಳೂರು: ಮಂಗಳೂರು - ಅಯೋಧ್ಯೆ ನಡುವೆ ನೇರ ರೈಲನ್ನು ಆರಂಭಿಸುವಂತೆ ಮತ್ತು ಬೆಂಗಳೂರು-ಮಂಗಳೂರು-ಕಣ್ಣೂರು ಎಕ್ಸ್‌ಪ್ರೆಸ್‌ಗೆ ರಾಣಿ ರಾಣಿ ಅಬ್ಬಕ್ಕ ಹೆಸರಿಡುವಂತೆ ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಅವರು ಕೇಂದ್ರ ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಅವರಿಗೆ ಮನವಿ ಮಾಡಿದ್ದಾರೆ.
ಜುಲೈ 18 ರಂದು ಕೇಂದ್ರ ಸಚಿವರಿಗೆ ಬರೆದ ಪತ್ರದಲ್ಲಿ, ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಪ್ರದೇಶಗಳ ಜನರಿಂದ ನೇರ ರೈಲಿಗಾಗಿ ಹೆಚ್ಚುತ್ತಿರುವ ಬೇಡಿಕೆಯ ಬಗ್ಗೆ ಚೌಟ ಗಮನ ಸೆಳೆದಿದ್ದಾರೆ.
ಈ ಎರಡು ನಗರಗಳ ನಡುವಿನ ನೇರ ರೈಲು ಬೆಳೆಯುತ್ತಿರುವ ಪ್ರಯಾಣದ ಅಗತ್ಯಗಳನ್ನು ಪೂರೈಸುವು ದಲ್ಲದೆ, ಸಾಂಸ್ಕೃತಿಕ ಕಾರಿಡಾರ್ ಆಗಿ ಹೊರಹೊಮ್ಮುಲಿದೆ. ಎರಡು ನಗರಗಳ ನಡುವೆ ನೇರ ರೈಲು ಇಲ್ಲದ ಕಾರಣದಿಂದಾಗಿ ಪ್ರಯಾಣಿಕರು ದೀರ್ಘ ಮತ್ತು ಅನಾನುಕೂಲ ಪ್ರಯಾಣಗಳನ್ನು ಕೈಗೊಳ್ಳಬೇಕಾ ಗುತ್ತದೆ, ಆಗಾಗ್ಗೆ ಬೆಂಗಳೂರು ಅಥವಾ ಇತರ ಜಂಕ್ಷನ್‌ಗಳ ಮೂಲಕ ಪ್ರಯಾಣಿಸಲು 40 ಗಂಟೆಗಳಿ ಗಿಂತ ಹೆಚ್ಚು ಸಮಯ ಬೇಕಾಗುತ್ತದೆ ಎಂದು ಚೌಟ ಹೇಳಿದ್ದಾರೆ
ಹಾಸನ, ಅರಸಿಕೆರೆ ಮತ್ತು ಬಳ್ಳಾರಿ ಮೂಲಕ ಅಥವಾ ಕೊಂಕಣ ರೈಲ್ವೆ ಮಾರ್ಗ ಮಡಗಾಂವ್, ಕಲ್ಯಾಣ್, ನಾಗ್ಪುರ ಮೂಲಕ ಮಂಗಳೂರು - ಅಯೋಧ್ಯೆ ನಡುವೆ ವಾರಕ್ಕೊಮ್ಮೆ ಅಥವಾ ಎರಡು ವಾರಗಳಿಗೊಮ್ಮೆ ನೇರ ರೈಲು ಸಂಚಾರ ಆರಂಭಿಸಬೇಕು. ಇದರಿಂದ ಆಧ್ಯಾತ್ಮಿಕ ಪ್ರವಾಸೋದ್ಯಮ, ಸಾಂಸ್ಕೃತಿಕ ಬದಲಾವಣೆ ಮತ್ತು ಸುಲಭ ಪ್ರಯಾಣಕ್ಕೆ ಹೆಚ್ಚು ಉತ್ತೇಜನ ನೀಡಿದಂತಾಗುತ್ತದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಸಚಿವರಿಗೆ ಬರೆದ ಮತ್ತೊಂದು ಪತ್ರದಲ್ಲಿ ಚೌಟ ಅವರು ಸಚಿವ ವೈಷ್ಣವ್ ಅವರನ್ನು ಬೆಂಗಳೂರು-ಮಂಗಳೂರು- ಕಣ್ಣೂರು(ನಂ.16511/16512) ರೈಲಿಗೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ್ದ ಉಳ್ಳಾಲದ ರಾಣಿ ಅಬ್ಬಕ್ಕ ಅವರ ಗೌರವಾರ್ಥವಾಗಿ ‘ರಾಣಿ ಅಬ್ಬಕ್ಕ ಎಕ್ಸ್‌ಪ್ರೆಸ್’ ಆಗಿ ಮರುನಾಮಕರಣ ಮಾಡುವಂತೆ ಆಗ್ರಹಿಸಿದ್ದಾರೆ.
ಈ ವರ್ಷ ರಾಣಿ ಅಬ್ಬಕ್ಕರ 500ನೇ ಜನ್ಮ ದಿನಾಚರಣೆಯಾಗಿದ್ದು, ಅವರ ಅದಮ್ಯ ಧೈರ್ಯ ಮತ್ತು ದೇಶಭಕ್ತಿಗೆ ಗೌರವ ಸಲ್ಲಿಸಲು ಮತ್ತು ಅವರ ಅಪ್ರತಿಮ ಧೈರ್ಯ ಮತ್ತು ದೇಶಭಕ್ತಿಗೆ ಗೌರವ ಸಲ್ಲಿಸಲು ಇದು ಸೂಕ್ತ ಕ್ಷಣವಾಗಿದೆ. ರಾಣಿ ಅಬ್ಬಕ್ಕ ವಿದೇಶಿ ಆಕ್ರಮಣಕಾರರ ವಿರುದ್ಧ ಹೋರಾಡಿದ ಮೊದಲ ಭಾರತೀಯ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿಯರಲ್ಲಿ ಒಬ್ಬರಾಗಿ ಪರಿಗಣಿಸಲ್ಪಟ್ಟಿದ್ದಾರೆ
ಬೆಂಗಳೂರು-ಮಂಗಳೂರು -ಕಣ್ಣೂರು ಎಕ್ಸ್‌ಪ್ರೆಸ್ ಅನ್ನು ಮರುನಾಮಕರಣ ಮಾಡುವುದರಿಂದ ಅವರ ಪರಂಪರೆಗೆ ಅರ್ಥಪೂರ್ಣ ಮತ್ತು ಸಾಂಕೇತಿಕ ಗೌರವ ನೀಡಿದಂತಾಗುತ್ತದೆ ಎಂದು ಚೌಟ ತಿಳಿಸಿದ್ದಾರೆ.







