ತಾಯಿ - ಮಗ ನಾಪತ್ತೆ

ಮಂಗಳೂರು: ಶಕ್ತಿನಗರದ ರಾಜೀವ ನಗರದಲ್ಲಿ ವಾಸವಾಗಿದ್ದ ಲಾವಣ್ಯ (24) ಮತ್ತು ಆಕೆಯ ಪುತ್ರ ತನಿಷ್ಕ್ (3.5) ಎಂಬವರು ಜು.19ರಂದು ನಾಪತ್ತೆಯಾಗಿದ್ದಾರೆ ಎಂದು ಪತಿ ಶಿವಮೊಗ್ಗ ಜಿಲ್ಲೆ ಹಾಗರದ ಹಳ್ಳಿ ನಿವಾಸಿ ಸೋಮಶೇಖರ್ ಅವರು ಈ ಬಗ್ಗೆ ಕಂಕನಾಡಿ ನಗರ ಠಾಣೆಗೆ ದೂರು ನೀಡಿದ್ದಾರೆ.
ಕೆಲಸ ಮುಗಿಸಿ ರಾತ್ರಿ 8:30ರ ವೇಳೆಗೆ ಮನೆಗೆ ಬಂದು ನೋಡಿದಾಗ ಪತ್ನಿ ಮತ್ತು ಮಗ ಮನೆಯಲ್ಲಿ ಇರಲಿಲ್ಲ. ಅಕ್ಕಪಕ್ಕದ ಮನೆಯವರಲ್ಲಿ ವಿಚಾರಿಸಿದಾಗ ಮಧ್ಯಾಹ್ನ 2ಗಂಟೆಗೆ ಮನೆಯಿಂದ ಹೋಗಿರುವು ದಾಗಿ ತಿಳಿಸಿದ್ದಾರೆ. ಊರಿನಲ್ಲಿ ಸಂಬಂಧಿಕರಲ್ಲಿ ವಿಚಾರಿಸಿದರೂ, ಈ ವರೆಗೆ ಪತ್ತೆಯಾಗಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಲಾವಣ್ಯ 5.5 ಅಡಿ ಎತ್ತರ, ಬಿಳಿ ಮೈಬಣ್ಣ, ದಪ್ಪ ಶರೀರ, ದುಂಡು ಮುಖ ಹೊಂದಿದ್ದು, ತುಳು, ಕನ್ನಡ ಭಾಷೆ ಬಲ್ಲವರಾಗಿದ್ದಾರೆ. ತನಿಷ್ಕ್ 2 ಅಡಿ ಎತ್ತರ ಎಣ್ಣೆ ಕಪ್ಪು ಮೈಬಣ್ಣ, ದಪ್ಪ ಶರೀರ ಮತ್ತು ದುಂಡು ಮುಖ ಹೊಂದಿದ್ದಾನೆ. ತಾಯಿ ಮಗು ಪತ್ತೆಯಾದಲ್ಲಿ ಕಂಕನಾಡಿ ನಗರ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸರು ತಿಳಿಸಿದ್ದಾರೆ.
Next Story





