ಮಂಗಳೂರು: ಕೊಂಕಣಿ ಸಾಹಿತ್ಯ ಕಾರ್ಯಾಗಾರ

ಮಂಗಳೂರು, ಜು.21: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ, ಐಸಿವೈಎಮ್ ಹೊಸಬೆಟ್ಟು ಘಟಕ ಇವುಗಳ ಸಹಯೋಗದಲ್ಲಿ
ಮೂಡುಬಿದ್ರೆ ಹೊಸಬೆಟ್ಟು ಹೋಲಿ ಕ್ರಾಸ್ ಚರ್ಚ್ ಸಭಾಂಗಣದಲ್ಲಿ ಕೊಂಕಣಿ ಸಾಹಿತ್ಯ ಕಾರ್ಯಗಾರವನ್ನು ಆಯೋಜಿಸಲಾಗಿತ್ತು. ಕಾರ್ಯಾಗಾರವನ್ನು ಉದ್ಘಾಟಿಸಿದ ಚರ್ಚ್‌ನ ಧರ್ಮಗುರು ವಂ. ಗ್ರೆಗೊರಿ ಡಿಸೋಜ ಕೊಂಕಣಿ ಅಕಾಡೆಮಿಯು ಇಂತಹ ಕಾರ್ಯಾಗಾರ ಹಮ್ಮಿಕೊಳ್ಳುವ ಮೂಲಕ ಹೊಸ ಸಾಹಿತಿಗಳನ್ನು ಪ್ರೋತ್ಸಾಹಿಸು ತ್ತಿದೆ ಎಂದರು.
ಕಾರ್ಯಾಗಾರದಲ್ಲಿ ಫೆಲ್ಸಿ ಲೋಬೊ, ದೆರೆಬೈಲ್ ಇವರು ಕವನ ಬರೆಯುವ ಬಗ್ಗೆ ತರಬೇತಿ ನೀಡಿದರು.
ರೊನಿ ಕ್ರಾಸ್ತಾ ಕೆಲರಾಯ್ ಹಾಗೂ ವಿನೋದ್ ಪಿಂಟೊ ತಾಕೊಡೆ ಸಹಾಯ ಮಾಡಿದರು. ರೊನಿ ಕ್ರಾಸ್ತಾ, ಕೆಲರಾಯ್ ಕೊಂಕಣಿ ಭಾಷೆ ಮತ್ತು ಸಂಸ್ಕೃತಿ ಡಾ.ಜೊಯರ್ ರುಡೋಲ್ಪ್ ನೊರೊನ್ಹಾ ಕೊಂಕಣಿ ಇತಿಹಾಸ ಮತ್ತು ಸಾಹಿತ್ಯದ ಬಗ್ಗೆ ಉಪನ್ಯಾಸವನ್ನು ನೀಡಿದರು.
ಸಂಜೆ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ಅವರು ಅಕಡೆಮಿಯು ಕೊಂಕಣಿ ಸಾಹಿತ್ಯ ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯಕ್ರಮವನ್ನು ನಡೆಸುತ್ತದೆ. ಜನರು ಇದರ ಪ್ರಯೋಜನವನ್ನು ಪಡೆಯಬೇಕು ಎಂದು ಹೇಳಿದರು.
ಕಾರ್ಯಗಾರದಲ್ಲಿ ಭಾಗವಹಿಸಿದವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಅಕಾಡೆಮಿ ಸದಸ್ಯ ನವೀನ್ ಲೋಬೊ, ಸಿ.ಎಸ್.ಸಿ.ಎ ಅಧ್ಯಕ್ಷ ವಿನೋದ್ ಪಿಂಟೊ, ಐಸಿವೈಎಮ್ ಅಧ್ಯಕ್ಷ ರೊಲ್ಸ್ಟನ್ ಫ್ಲೆಮಿಂಗ್ ಡಿ ಸೋಜ, ಐಸಿವೈಎಮ್ ಸಂಘಟನೆಯ ಪ್ರೇರಕರಾದ
ಸೆಲ್ವಿನ್ ಜ್ಯೂಡ್ ಕುಲಾಸೊ ಹಾಗೂ ಡೆನಿಸ್ ಫೆರ್ನಾಂಡಿಸ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.







