ಜಮೀಯ್ಯತುಲ್ ಫಲಾಹ್ ಉಳ್ಳಾಲ ತಾಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

ಮಂಗಳೂರು: ಜಮೀಯ್ಯತುಲ್ ಫಲಾಹ್ ಕೇಂದ್ರ ಸಮಿತಿ ಇದರ ಅಧೀನದಲ್ಲಿರುವ ಉಳ್ಳಾಲ ತಾಲೂಕು ಘಟಕಕ್ಕೆ 2025 - 2027 ನೇ ಸಾಲಿನ ನೂತನ ಕಾರ್ಯಕಾರಿಣಿ ಸಮಿತಿ ರಚಿಸಿದ್ದು, ಅಧ್ಯಕ್ಷರಾಗಿ ಅಬ್ದುಲ್ ರಹಿಮಾನ್ ಕೋಡಿಜಾಲ್ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ಕಂಕನಾಡಿಯಲ್ಲಿರುವ ಜಮೀಯ್ಯತುಲ್ ಫಲಾಹ್ ಕೇಂದ್ರ ಕಚೇರಿಯಲ್ಲಿ ಸಮಿತಿಯ ಉಳ್ಳಾಲ ಘಟಕದ ಮಹಾಸಭೆಯು ನಿಕಟಪೂರ್ವ ಅಧ್ಯಕ್ಷ ಅಬ್ದುನಾಸಿರ್ ಕೆ.ಕೆ. ಅಧ್ಯಕ್ಷತೆಯಲ್ಲಿ ನಡೆಯಿತು. ಸಮಿತಿಯ ಜಿಲ್ಲಾಧ್ಯಕ್ಷ ಶಾಹುಲ್ ಹಮೀದ್ ಕೆ ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕೇಂದ್ರ ಸಮಿತಿಯಿಂದ ವೀಕ್ಷಕರಾಗಿ ಆಗಮಿಸಿದ್ದ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಶೇಕ್ ಅಬ್ದುಲ್ ಗಪೂರ್ ಹಾಗೂ ಮಂಗಳೂರು ತಾಲೂಕು ಘಟಕದ ಅಧ್ಯಕ್ಷ ಮುಹಮ್ಮದ್ ಬಪ್ಪಳಿಗೆ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.
2025 -27 ಸಾಲಿನ ನೂತನ ಸಮಿತಿಯನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಅಬ್ದುಲ್ ರಹಿಮಾನ್ ಕೋಡಿಜಾಲ್, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುನ್ನಾಸಿರ್ ಕೆಕೆ ಹಾಗೂ ಕೋಶಾಧಿಕಾರಿಯಾಗಿ ಇಬ್ರಾಹೀಂ ನಡುಪದವು ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಕೆಎಂಕೆ ಮಂಜನಾಡಿ, ಎ.ಕೆ.ಅಬ್ದುಲ್ ರಹಿಮಾನ್ ಕೋಡಿಜಾಲ್, ಜೊತೆ ಕಾರ್ಯದರ್ಶಿಯಾಗಿ ನಾಸಿರ್ ಸಾಮಣಿಗೆ, ಸಂಘಟನಾ ಕಾರ್ಯದರ್ಶಿಯಾಗಿ ಮುಸ್ತಫ ಅಡ್ಕರೆ, ಮಾಧ್ಯಮ ಕಾರ್ಯದರ್ಶಿಯಾಗಿ ಸಿಎಂ ಶರೀಫ್ ಪಟ್ಟೋರಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಇಬ್ರಾಹೀಂ ಕೋಡಿಜಾಲ್, ಹಸನ್ ಕುಂಞಿ ಕೋಡಿಜಾಲ್, ಅಬುಬಕರ್ ಹಾಜಿ ನಾಟೆಕಲ್, ಉಸ್ಮಾನ್ ಕೊಳ, ಅಹ್ಮದ್ ಕುಂಞಿ ಮಾಸ್ಟರ್, ಅಬ್ದುಲ್ ರಹಿಮಾನ್ ಪನೀರ್, ಅಮೀರ್ ಕೋಡಿಜಾಲ್, ಮಿಫ್ತಾಹುಸ್ಸಲಾಮ್, ಬಿಎಸ್ ಹಸನಬ್ಬ, ಮುಹಮ್ಮದ್ ನಿಶರತ್, ಇಕ್ಬಾಲ್ ಸಾಮಣಿಗೆ, ಅಬ್ಬಾಸ್ ಉಚ್ಚಿಲ್, ಎಂ ಎಚ್ ಮಲಾರ್ ಆಯ್ಕೆಯಾದರು.







