ಅಡ್ಡೂರು| ರಕ್ಷಕ - ಶಿಕ್ಷಕ ಅಸೋಸಿಯೇಶನ್‌ನ ನೂತನ ಪದಾಧಿಕಾರಿಗಳ ಆಯ್ಕೆ, ಉಪನ್ಯಾಸ ಕಾರ್ಯಕ್ರಮ

ಮಂಗಳೂರು, ಜು.26: ಅಡ್ಡೂರಿನ ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್(ರಿ) ಮತ್ತು ಸಹರಾ ಆಂಗ್ಲ ಮಾಧ್ಯಮ ಶಾಲೆ ಇದರ ಜಂಟಿ ಆಶ್ರಯದಲ್ಲಿ ಶಾಲೆಯ ರಕ್ಷಕ ಶಿಕ್ಷಕ ಅಸೋಸಿಯೇಶನ್‌ನ (ಪಿಟಿಎ) ನೂತನ ಪದಾಧಿಕಾರಿಗಳ ಆಯ್ಕೆ ಹಾಗೂ ಶೈಕ್ಷಣಿಕ ಕ್ಷೇತ್ರಕ್ಕೆ ಸಂಬಂಧಿಸಿ ಉಪನ್ಯಾಸ ಕಾರ್ಯಕ್ರಮ ಶನಿವಾರ ನಡೆಯಿತು.
ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ ಡಾ. ಅನಂತ ಪ್ರಭು ಗುರುಪುರ ಮಾತನಾಡಿ, ಸಮಸ್ಯೆಗಳಿಗೆ ಪರಿಹಾರ ಇದ್ದೇ ಇದೆ. ವಿದ್ಯಾರ್ಥಿಗಳು ಅದಕ್ಕೆ ಧೈರ್ಯ ತೋರಿಸಬೇಕು. ಆಧುನಿಕ ಯುಗಕ್ಕೆ ಸಂಬಂಧಿಸಿದ ಶಿಕ್ಷಣ ನೀತಿಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಇಂತಹ ಕುತೂಹಲ ಅತ್ಯಗತ್ಯ. ಆವಾಗಲೇ ಓದು ಮತ್ತು ಸಾಧನೆ ಸುಲಭವಾಗುತ್ತದೆ ಎಂದರು.
ಈಗ ಅತ್ಯಾಧುನಿಕ ತಂತ್ರಜ್ಞಾನ ಯುಗ. ಮೊಬೈಲ್ ಬಳಕೆ ಬಗ್ಗೆ ಎಚ್ಚರ ವಹಿಸಬೇಕು. ಹೊಸ ಕಾನೂನಿನ ಪ್ರಕಾರ ಸಾಮಾಜಿಕ ಜಾಲತಾಣಗಳಲ್ಲಿ ಅನುಚಿತ ಸಂದೇಶ ಕಳುಹಿಸುವ ವ್ಯಕ್ತಿಯಲ್ಲದೆ ಅದನ್ನು ಫಾರ್ವರ್ಡ್ ಮಾಡಿದವರೂ ಅಪರಾಧಿಗಳಾಗುತ್ತಾರೆ. ಅವರಾಧಿಗಳಿಗೆ 3 ವರ್ಷ ಜೈಲು ಶಿಕ್ಷೆ ತಪ್ಪಿದ್ದಲ್ಲ. ಮೊಬೈಲ್‌ನಲ್ಲಿ ಪೋಟೊ ಲೋಡ್ ಮಾಡುವಾಗ ಎಚ್ಚರವಹಿಸಿ. ಪ್ರತಿದಿನವೂ ಹೊಸಹೊಸ ಸೈಬರ್ ಸ್ಕ್ಯಾಮ್ (ಫ್ರಾಡ್‌ಗಳು) ನಡೆಯುತ್ತವೆ. ಎಪಿಕೆ ಫೈಲ್‌ಗಳ ಲಿಂಕ್ ಅದುಮಬೇಡಿ. ನಿಮ್ಮ ಮೊಬೈಲ್ ಅಪರಿಚಿತರಿಗೆ ಕೊಡಬೇಡಿ ಎಂದು ಡಾ. ಅನಂತ ಪ್ರಭು ಎಚ್ಚರಿಸಿದರು.
ಉಪನ್ಯಾಸಕ ಹಾಗೂ ಲೇಖಕ ಟಿ.ಎ.ಎನ್. ಖಂಡಿಗೆ ಮಾತನಾಡಿ ಶಿಸ್ತು ಅಂತರಂಗದಲ್ಲಿ ಜಾಗೃತವಾ ಗುತ್ತದೆ. ಪಾಲಕರಿಂದ ಮಕ್ಕಳಿಗೆ ಶಿಸ್ತು ಬರುತ್ತದೆ. ಶಾಲೆಯಲ್ಲಿ ಸಂಸ್ಕಾರದೊಂದಿಗಿನ ಶಿಸ್ತು ಮುಂದು ವರಿಯುತ್ತದೆ. ಯಾವ ಕಾರಣಕ್ಕೂ ಮಕ್ಕಳೊಂದಿಗೆ ಹೋಲಿಕೆ ಬೇಡ. ಇಂದಿನ ಪಾಲಕರು ಮಗು ಹುಟ್ಟಿದ ತಕ್ಷಣ ಎದ್ದೋಡಿ, ಇತರ ಮಕ್ಕಳಿಗಿಂತ ಮುಂದೆ ಓಡಿ ಸಾಧನೆ ಮಾಡಬೇಕು ಎಂದು ಬಯಸುತ್ತಾರೆ. ಮಕ್ಕಳ ಪ್ರಗತಿಯಲ್ಲಿ ಪಾಲಕರ ಜವಾಬ್ದಾರಿ ಹೆಚ್ಚಿದೆ. ಶಿಕ್ಷಕರು ಅಥವಾ ಶಾಲಾ ಆಡಳಿತ ಮಂಡಳಿ ಮೇಲೆ ಗೂಬೆ ಕೂರಿಸಿವುದು ಸಮಂಜಸವಲ್ಲ ಎಂದರು.
ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್‌ನ ಅಧ್ಯಕ್ಷ ಯು.ಪಿ.ಇಬ್ರಾಹಿಂ, ಸಹರಾ ಶಿಕ್ಷಣ ಸಂಸ್ಥೆಯ ಸಂಚಾಲಕ ಎ.ಕೆ. ಇಸ್ಮಾಯಿಲ್, ಎಂಡಬ್ಲ್ಯೂಎ ಗೌರವಾಧ್ಯಕ್ಷ ಹಾಜಿ ಎಂ.ಎಚ್.ಮೈಯೆದ್ದಿ, ಪಿಟಿಎ ಅಧ್ಯಕ್ಷ ವಿಶ್ವಾಂಭರ, ಶಾಲಾ ಪ್ರಾಂಶುಪಾಲ ಕೇಶವ ಎಚ್, ಎಂಡಬ್ಲ್ಯೂಎ ಉಪಾಧ್ಯಕ್ಷ ಎನ್.ಇ. ಮುಹಮ್ಮದ್, ಅಹಮ್ಮದ್ ಬಾವ ಅಂಗಡಿಮನೆ, ಎಂಡಬ್ಲ್ಯೂಎ ಜೊತೆ ಕಾರ್ಯದರ್ಶಿ ನೂರುಲ್ಲ ಅಮೀನ್, ಖಜಾಂಚಿ ಎ.ಕೆ.ಅಶ್ರಫ್, ಪಿಟಿಎ ಉಪಾಧ್ಯಕ್ಷೆ ಪ್ರಮೀಳಾ ಡಿ. ಮಾರ್ಲ, ಉಪ ಪ್ರಾಂಶುಪಾಲ ದೇವಿಪ್ರಸಾದ್, ಎಂಡಬ್ಲ್ಯೂಎ ಸದಸ್ಯರಾದ ಹಸನ್ ಬಾವ, ಎ.ಕೆ.ಮುಹಮ್ಮದ್, ಅಬ್ದುಲ್ ಅಝೀಝ್, ಎ.ಜಿ. ಅಬ್ದುಲ್ ಖಾದರ್, ಸಮಾಜ ಸೇವಕ ಮುಝಮ್ಮಿಲ್ ಉಪಸ್ಥಿತರಿದ್ದರು.
ಪ್ರಾಂಶುಪಾಲ ಕೇಶವ್ ಎಚ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿಯರಾದ ದಿಲ್ಪಾಸೀನ್ ಸ್ವಾಗತಿಸಿದರು. ಅಶ್ರಫುನ್ನೀಸಾ ಹಾಗೂ ಹೇಮಾಶ್ರೀ ಕಾರ್ಯಕ್ರಮ ನಿರೂಪಿಸಿದರು. ಮಂಜವ್ವ ವಂದಿಸಿದರು.
ಪಿಟಿಎ ಪದಾಧಿಕಾರಿಗಳು : ಸಹರಾ ಆಂಗ್ಲ ಮಾಧ್ಯಮ ಶಾಲೆಯ 2025-26ನೇ ಸಾಲಿನ ರಕ್ಷಕ ಶಿಕ್ಷಕ ಅಸೋಸಿಯೇಶನ್‌ಗೆ ಅಧ್ಯಕ್ಷರಾಗಿ ವಿಶ್ವಾಂಭರ, ಉಪಾಧ್ಯಕ್ಷರಾಗಿ ಪ್ರಮೀಳಾ ಡಿ. ಮಾರ್ಲ, ಸದಕತ್ತುಲ್ಲ ಆಯ್ಕೆಯಾದರು.







