ಬಂಟ್ವಾಳ: ಕೈಲಾರ್ ನಲ್ಲಿ ಬೃಹತ್ ರಕ್ತದಾನ ಶಿಬಿರ

ಬಂಟ್ವಾಳ: ತಾಲೂಕಿನ ಕಾವಳ ಪಡೂರು ಗ್ರಾಮದ ಶಂಸುಲ್ ಉಲಮಾ ಯಂಗ್ ಮೆನ್ಸ್ ಕೈಲಾರ್ - ಬರ್ಕಟ, ಎಸ್ಕೆಎಸೆಸ್ಸೆಫ್ ಮದ್ದ ಕೈಲಾರ್ ಹಾಗೂ ಎಸ್ಕೆಎಸೆಸ್ಸೆಫ್ ಬಾಂಬಿಲ ಘಟಕಗಳ ಸಂಯುಕ್ತ ಆಶ್ರಯದಲ್ಲಿ, ವಿಖಾಯ ರಕ್ತದಾನಿ ಬಳಗ ದ.ಕ ವೆಸ್ಟ್ ಜಿಲ್ಲೆ ಮತ್ತು ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆ ,ದೇರಳಕಟ್ಟೆ ಇದರ ಸಹಯೋಗದಲ್ಲಿ ಬೃಹತ್ ಸಾರ್ವಜನಿಕ ರಕ್ತದಾನ ಶಿಬಿರ ಕೈಲಾರ್ ದಾರುಸ್ಸಲಾಂ ಮದ್ರಸದಲ್ಲಿ ರವಿವಾರ ನಡೆಯಿತು.
ಕಾರ್ಯಕ್ರಮದಲ್ಲಿ ರೇಂಜ್ ಜಂ-ಇಯ್ಯತುಲ್ ಮುಅಲ್ಲಿಮೀನ್ ಬಾಂಬಿಲ ಇದರ ಅಧ್ಯಕ್ಷರಾದ ಆದಂ ಮುಸ್ಲಿಯಾರ್ ಸ್ವಾಗತಿಸಿದರು. ಇಝ್ಝತುಲ್ ಇಸ್ಲಾಮ್ ಮಸೀದಿ ಇಮಾಮ್ ಅಫ್ತಾಝ್ ಫೈಝಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕೇಂದ್ರ ಜುಮಾ ಮಸೀದಿ ಬಾಂಬಿಲ ಇಲ್ಲಿನ ಖತೀಬ್ ಅಬ್ದುಲ್ ರಶೀದ್ ಯಮಾನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಒಬ್ಬರ ಜೀವ ಉಳಿಸಲು ನೀವು ನೀಡುವ ಕೆಲ ನಿಮಿಷಗಳ ಸಮಯ ಅಮೂಲ್ಯವಾಗಿದೆ. ಪ್ರತಿಯೊಬ್ಬರೂ ವರ್ಷಕ್ಕೆ ಕನಿಷ್ಠ ಒಂದು ಬಾರಿಯದರೂ ರಕ್ತದಾನ ಮಾಡಬೇಕು ಎಂದು ಹೇಳಿದರು.
ಈ ಶಿಬಿರದಲ್ಲಿ ವಿವಿಧ ಭಾಗಗಳ ಸಾರ್ವಜನಿಕರು ಪಾಲ್ಗೊಂಡಿದ್ದರು. ತಜ್ಞ ವೈದ್ಯರ ಉಪಸ್ಥಿತಿಯಲ್ಲಿ ಕ್ರಮಗಳು ಯಶಸ್ವಿಯಾಗಿ ನೆರವೇರಿತು.
ಕಾರ್ಯಕ್ರಮದಲ್ಲಿ ಯೆನಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆ ಇದರ ವೈದ್ಯರಾದ ಡಾ.ಚೈತನ್ಯ, ಕೇಂದ್ರ ಜುಮಾ ಮಸೀದಿ ಅಧ್ಯಕ್ಷರಾದ ಅಬ್ದುಲ್ ರಝಾಕ್ ಗುಂಪಕಲ್ಲು, ಪ್ರಧಾನ ಕಾರ್ಯದರ್ಶಿ ಜಿ.ಎ. ಇಕ್ಬಾಲ್, ಮುಅಲ್ಲಿಮರಾದ ಶರೀಫ್ ಮದನಿ, ಮುನೀರ್ ಮುಸ್ಲಿಯಾರ್, ಅಕ್ಬರ್ ಮುಸ್ಲಿಯಾರ್, ಶರೀಫ್ ಮುಸ್ಲಿಯಾರ್ , ಆಸಿಫ್ ಯಮಾನಿ , ಶಂಸುಲ್ ಉಲಮಾ ಯಂಗ್ ಮೆನ್ಸ್ ಅಧ್ಯಕ್ಷರಾದ ಹನೀಫ್ ಖಂಡಿಗ,ಇಝ್ಝತುಲ್ ಇಸ್ಲಾಂ ಮಸೀದಿ ಅಧ್ಯಕ್ಷರಾದ ಅಬ್ದುಲ್ ಸಲಾಂ ಖಂಡಿಗ , ಗೌರವಾಧ್ಯಕ್ಷರಾದ ಉಸ್ಮಾನ್ ಕೈಲಾರ್, ದಾರುಸ್ಸಲಾಂ ಮಸೀದಿ ಮದ್ದ ಅಧ್ಯಕ್ಷರಾದ ಸಾದಿಕ್ ಮದ್ದ ಇತರ ಅತಿಥಿಗಳು ಉಪಸ್ಥಿತರಿದ್ದರು.







