Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ಸುರತ್ಕಲ್| ಕಳ್ಳತನ, ವಂಚನೆ ಪ್ರಕರಣ...

ಸುರತ್ಕಲ್| ಕಳ್ಳತನ, ವಂಚನೆ ಪ್ರಕರಣ ಸತ್ಯಕ್ಕೆ ದೂರವಾದ ಸಂಗತಿ: ದೈವಸ್ಥಾನದ ಆಡಳಿತ ಮಂಡಳಿ

ವಾರ್ತಾಭಾರತಿವಾರ್ತಾಭಾರತಿ28 July 2025 6:49 PM IST
share
ಸುರತ್ಕಲ್| ಕಳ್ಳತನ, ವಂಚನೆ ಪ್ರಕರಣ ಸತ್ಯಕ್ಕೆ ದೂರವಾದ ಸಂಗತಿ: ದೈವಸ್ಥಾನದ ಆಡಳಿತ ಮಂಡಳಿ

ಸುರತ್ಕಲ್: ಪಡ್ರೆ ಧೂಮಾವತಿ ಕ್ಷೇತ್ರದ 6 ಲಕ್ಷ ರೂ. ಮತ್ತು ಸುಮಾರು 14-15 ಪವನ್ ಚಿನ್ನ, ಬೆಳ್ಳಿ, ಹಿತ್ತಾಳೆಯನ್ನು ಆಡಳಿತ ಸಮಿತಿಗೆ ಹಸ್ತಾಂತರಿಸದೆ ಕೊಂಡು ಹೋಗಿದ್ದಾರೆ ಎಂದು ಕಳ್ಳತನ, ವಂಚನೆ ಪ್ರಕರಣ ದಾಖಲಿಸಲಾಗಿದೆ. ಈ ದೂರು ಸತ್ಯಕ್ಕೆ ದೂರವಾದ ಸಂಗತಿ ಎಂದು ದೈವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

ಸುರತ್ಕಲ್‌ನ ಖಾಸಗಿ ಹೊಟೇಲ್‌ ನ ಸಭಾಂಗಣದಲ್ಲಿ ಸೋಮವಾರ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಂಡಳಿಯ ಪರವಾಗಿ ಸ್ಪಷ್ಟನೆ ನೀಡಿದ ರೂಪೇಶ್ ರೈ ತಡಂಬೈಲ್ ಅವರು, ಜಾತ್ರೆಯ ಸಮಯ ಭಕ್ತಾದಿಗಳಿಂದ ಸಂಗ್ರಹವಾದ ಸುಮಾರು 6 ಲಕ್ಷ ರೂ. ಮತ್ತು ಸುಮಾರು 14-15 ಪವನ್ ಚಿನ್ನ, ಬೆಳ್ಳಿ, ಹಿತ್ತಾಳೆ ಆಡಳಿತ ಸಮಿತಿಗೆ ಹಸ್ತಾಂತರಿಸದೆ ಕೊಂಡು ಹೋಗಿರುತ್ತಾರೆ ಎಂದು ಆರೋಪಿಸಿ ಪದ್ಮನಾಭ ಶೆಟ್ಟಿಯವರು ಕಳ್ಳತನ, ವಂಚನೆ ಪ್ರಕರಣ ದಾಖಲಿಸಿದ್ದಾರೆ. ಇದು ಸತ್ಯಕ್ಕೆ ದೂರವಾಗಿರುವ ಅಪವಾದವಾಗಿದ್ದು, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಮಿತಿಯ ಸದಸ್ಯರ ಘನತೆ ಮತ್ತು ಹೆಸರು ಕೆಡಿಸುವ ಹಯನ್ನಾರವಾಗಿದೆ ಎಂದ ಅವರು, ಸುಳ್ಳು ಆರೋಪ ಮಾಡಿರುವ ಪದ್ಮನಾಭ ಶೆಟ್ಟಿಯನ್ನು ಗ್ರಾಮದ ದೈವ ಜುಮಾದಿಯೇ ನೋಡಿಕೊಳ್ಳಲಿ ಎಂದು ನುಡಿದರು.

”ಪಡ್ರೆ ದೈವಸ್ಥಾನದಲ್ಲಿ ವರ್ಷಂಪ್ರತಿ ಫೆಬ್ರವರಿ/ ಮಾರ್ಚ್ ತಿಂಗಳಲ್ಲಿ ಜಾತ್ರಾ ಮಹೋತ್ಸವ ನಡೆಯುತ್ತದೆ. ಈ ಜಾತ್ರಾ ಮಹೋತ್ಸವವನ್ನು ಸುಲಲಿತವಾಗಿ ನಡೆಸಲು ತಮಗೆ ಸಹಕಾರಿಯಾಗಲೆಂದು ಪಡ್ರೆಯ ಭಂಡ್ರಿಯಾಲ್ ಅವರು ಸುಮಾರು 1974ರಿಂದ ದೈವಸ್ಥಾನಕ್ಕೆ ಸಂಬಂಧಪಟ್ಟ ಸುತ್ತಮುತ್ತಲಿನ ಗ್ರಾಮಸ್ಥರಿಂದ ಸಹಕಾರವನ್ನು ಪಡೆದು ಖರ್ಚು ವೆಚ್ಚಗಳನ್ನು ಭರಿಸುವ ಸಂಬಂಧ ಒಂದು ಸಮಿತಿಯನ್ನು ರಚನೆ ಮಾಡಿದ್ದು ಈ ಸಮಿತಿಗೆ ಯಾವುದೇ ರೀತಿಯ ನೋಂದಾವಣೆಯಾಗಲಿ, ನಿರ್ಧಿಷ್ಟವಾದ ಬೈಲಾ ಆಗಲಿ ಇಲ್ಲದೆ, ಕಾಲಕಾಲಕ್ಕೆ ಅನುಕೂಲಕ್ಕೆ ತಕ್ಕಂತೆ ಸಮಿತಿಯನ್ನು ರಚಿಸಿಕೊಂಡು ಪ್ರತಿ ವರ್ಷ ಗ್ರಾಮಸ್ಥರ ಸಭೆಯನ್ನು ನಡೆಸಿ ಅದರಲ್ಲಿ ಜಾತ್ರಾ ಮಹೋತ್ಸವದ ಚರ್ಚೆ ಮತ್ತು ಸಮಿತಿಯಲ್ಲಿ ಬದಲಾವಣೆ ಮಾಡುವ ಅವಶ್ಯಕತೆ ಇದ್ದಲ್ಲಿ ಭಂಡ್ರಿಯಾಲ್ ರವರ ನೇತೃತ್ವದಲ್ಲಿ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳುತ್ತಿದ್ದರು. ಇಲ್ಲಿಯ ಸಮಿತಿಗೆ ಯಾವುದೇ ನೋಂದಾಯಿತ ಪ್ರಕ್ರಿಯೆ ಇಲ್ಲದೆ ಮೌಖಿಕ ಚರ್ಚೆಯಲ್ಲಿಯೇ ಬಹಳಷ್ಟು ಕೆಲಸಗಳನ್ನು ಮಾಡಿಸಿಕೊಂಡು ಬಂದಿರುತ್ತದೆ. ಸುಮಾರು 12 ವರ್ಷಗಳಿಂದ ಗ್ರಾಮಸ್ಥರ ಸಭೆ ನಡೆಸದೇ ಇದ್ದುದರಿಂದ ಗಡಿ ಪ್ರಧಾನರಾದ ಶ್ರೀ ಬಾಬು ಭಂಡ್ರಿಯಾಲ್ ರವರು ಈ ವರ್ಷ ಗ್ರಾಮಸ್ಥರ ಸಭೆ ಕರೆದು ದೈವಸ್ಥಾನದ ಸುಗಮ ಆಡಳಿತಕ್ಕೆ ಸಮಿತಿಯನ್ನು ರಚಿಸಲಾಯಿತು. ಈ ಸಮಿತಿ ರಚಿಸುವ ಮುನ್ನ ಗ್ರಾಮದ ಸಭೆ ಕರೆಯದಂತೆ ಕೆಲವೊಂದು ವ್ಯಕ್ತಿಗಳು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯವು ಸಭೆ ನಡೆಸಲು ಅನುಮತಿ ಕೊಟ್ಟ ಬಳಿಕವೇ ಗ್ರಾಮದ ಸಭೆ ಕರೆದು ನೂತನ ಸಮಿತಿಯನ್ನು ರಚಿಸಲಾಗಿದೆ ಎಂದರು.

ದೈವಸ್ಥಾನದ ಸಮಿತಿಯ ಸಭೆಯಲ್ಲಿ ಪಾರದರ್ಶಕವಾಗಿ ಗಡಿಪ್ರಧಾನರು ಮತ್ತು ಸದಸ್ಯರ ಮುಂದೆ ಲೆಕ್ಕಪತ್ರವನ್ನು ನೀಡಲಾಗಿದೆ. ದೈವಸ್ಥಾನಕ್ಕೆ ಹೊಸದಾಗಿ ಧೂಮಾವತಿ ಮತ್ತು ಬಂಟ ದೈವಗಳಿಗೆ ಪಾತ್ರಿಗಳನ್ನು ನೇಮಿಸಿದ್ದು ಸಂಪ್ರದಾಯದಂತೆ ಅವರಿಗೆ ಗಡಿಪ್ರಧಾನರು ಮತ್ತು ಗ್ರಾಮಸ್ಥರ ನಿರ್ಣಯದಂತೆ ಚಿನ್ನದ ಬಳೆಗಳನ್ನು ಹಾಕಲಿರುತ್ತದೆ. ಸಮಿತಿಯ ಬಗ್ಗೆ ನ್ಯಾಯಾಲಯ ಮತ್ತು ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ಬಾಕಿ ಇರುವುದರಿಂದ ನಾವು ತನಿಖೆಗೆ ಸಂಪೂರ್ಣ ಸಹಕಾರ ನೀಡುವುದರೊಂದಿಗೆ ನ್ಯಾಯಾಲಯದ ಆದೇಶಕ್ಕೆ ಬದ್ಧವಾಗಿರುತ್ತೇವೆ. ತನಿಖೆಯಿಂದ ಯಾವುದೇ ರೀತಿಯ ಅಪರಾಧ ಸಾಬೀತಾಗದೆ ಸಾಮಾಜಿಕ ಮಾಧ್ಯಮಗಳಲ್ಲಿ ಅಪಪ್ರಚಾರ ಮಾಡುವ ಮೂಲಕ ಗ್ರಾಮಸ್ಥರ ತೇಜೋವಧೆ ಮಾಡಿರುವುದು ಸರಿಯಲ್ಲ ಎಂದು ಹೇಳಿದರು.

ಬಳಿಕ ಮಾತಾಡಿದ ಗಡಿಪ್ರಧಾನರಾದ ಬಾಬು ಭಂಡ್ರಿಯಾಲ್ ಅವರು, ನಾನು 33 ವರ್ಷಗಳಿಂದ ಗಡಿ ಪ್ರಧಾನರಾಗಿದ್ದೇನೆ. ಇಲ್ಲಿಯವರೆಗೆ ನನ್ನ ಮೇಲೆ ಇಂತಹ ಆರೋಪ ಬಂದಿಲ್ಲ. ಕೋರ್ಟ್ ನಲ್ಲಿ ವಕೀಲರು ರಾಜಿ ಪಂಚಾಯ್ತಿಗೆ ನಡೆಸೋಣ ಎಂದು ಕರೆದ ಹಿನ್ನೆಲೆಯಲ್ಲಿ ನಾವೆಲ್ಲರೂ ನ್ಯಾಯಾಲಯಕ್ಕೆ ಹೋಗಿದ್ದೆವು. ಅಲ್ಲಿ ಪದ್ಮನಾಭ ಶೆಟ್ಟಿ ಈಗಿರುವ ಸಮಿತಿ ಬರ್ಕಾಸ್ತುಗೊಳಿಸಿ ಹೊಸ ಸಮಿತಿ ರಚಿಸುವಂತೆ ಮತ್ತು ತನ್ನನ್ನು ಅದರಲ್ಲಿ ಸೇರಿಸುವಂತೆ ಕೇಳಿದ್ದ. ಆಗ ನಾನು ಹೊಸ ಸಮಿತಿ ರಚಿಸಿಯಾಗಿದೆ ಈಗ ಸಾಧ್ಯವಿಲ್ಲ. ಸಮಿತಿಯ ಅವಧಿ ಮುಗಿದ ಬಳಿಕ ಅಂದರೆ ಮೂರು ವರ್ಷಗಳ ಬಳಿಕವಷ್ಟೇ ಹೊಸ ಸಮಿತಿ ರಚಿಸಲಾಗು ವುದು ಎಂದಿದ್ದೆ. ಅದಕ್ಕೆ ಆತ ನಾನು ಗಡಿ ಪ್ರಧಾನನೆಂದೂ ಲೆಕ್ಕಿಸದೇ ನಮ್ಮನ್ನು ಕೆಟ್ಟ ಭಾಷೆಗಳಲ್ಲಿ ನಿಂದಿಸಿದ್ದಾನೆ. ಆತ ನಿಂಧಿಸಿರುವುದು ನನ್ನನ್ನಾಗಲೀ ಗ್ರಾಮಸ್ಥರನ್ನಾಗಲೀ ಅಲ್ಲ, ಪಡ್ರೆ ಜುಮಾದಿಯನ್ನು ನಿಂದಿಸಿರುವುದು. ಆತನ ಅಹಂಕಾರವನ್ನು ದೈವವೇ ನೋಡಿಕೊಳ್ಳಲಿ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಗಡಿಪ್ರಧಾನರಾದ ಜಗನ್ನಾಥ್ ಅತ್ತಾರ್, ಗೌರವಾಧ್ಯಕ್ಷ ದೇವಣ್ಣ ಶೆಟ್ಟಿ, ಉಪಾಧ್ಯಕ್ಷ ಲೋಕಯ್ಯ ಶೆಟ್ಟಿ ಮುಂಚೂರು, ಉಪಾಧ್ಯಕ್ಷ ಸತೀಶ್ ಮುಂಚೂರು, ಗಡಿಪ್ರಧಾನರಾದ ದೇವೇಂದ್ರ ಪೂಜಾರಿ, ಯೋಗೀಶ್ ಕೊಂಕಣಬೈಲ್, ಶ್ರೀನಿವಾಸ್ ಗುತ್ತಿನಾರ್, ಬೀರಣ್ಣ ಶೆಟ್ಟಿ ಮುಕ್ಕ, ಸುನೀಲ್, ಜುಮಾದಿ ಪೂಜಾರಿ ಸಂಜಯ, ಬಂಟ ಪೂಜಾರಿ ಧೀರಜ್ ಮತ್ತಿತರರು ಉಪಸ್ಥಿತರಿದ್ದರು.‌

share
ವಾರ್ತಾಭಾರತಿ
ವಾರ್ತಾಭಾರತಿ
Next Story
X