ಕಲ್ಲಡ್ಕ: ಅನುಗ್ರಹ ಮಹಿಳಾ ಕಾಲೇಜಿನಲ್ಲಿ ಬಿಸಿಎ ವಿಭಾಗ ಉದ್ಘಾಟನೆ

ಬಂಟ್ವಾಳ : ಕಲ್ಲಡ್ಕದ ಅನುಗ್ರಹ ಮಹಿಳಾ ಕಾಲೇಜಿನಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯಕ್ಕೆ ಒಳಪಟ್ಟ ಹಾಗೂ ಎಐಸಿಟಿಇ ಮಾನ್ಯತೆ ಪಡೆದ ಬಿಸಿಎ ವಿಭಾಗದ ಉದ್ಘಾಟನಾ ಕಾರ್ಯಕ್ರಮ ಸೋಮವಾರ ನಡೆಯಿತು.
ನೂತನ ಬಿಸಿಎ ವಿಭಾಗವನ್ನು ಉದ್ಘಾಟಿಸಿದ ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಸರಕಾರ ಶಿಕ್ಷಣವನ್ನು ಸಾರ್ವತ್ರಿಕಗೊಳಿಸುವ ಶಿಕ್ಷಣ ಕಾಯ್ದೆಯನ್ನು ಜಾರಿಗೆ ತಂದಿದ್ದು, ಪ್ರತಿಯೋರ್ವ ತಂದೆ ತಾಯಿಯು ತಮ್ಮ ಮಕ್ಕಳಿಗೆ ಶಿಕ್ಷಣ ನೀಡುವುದು ಅವರ ಆದ್ಯ ಕರ್ತವ್ಯವಾಗಿದೆ ಎಂದರು.
ಅನುಗ್ರಹ ಆಡಳಿತ ಮಂಡಳಿಯ ಚಯರ್'ಮೆನ್ ಯಾಸೀನ್ ಬೇಗ್ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಭಾಗವಹಿಸಿದ್ದ ಬೋಳಂಗಡಿ ಹವ್ವಾ ಜುಮ್ಮಾ ಮಸೀದಿ ಖತೀಬ್ ಮೌಲಾನಾ ಯಹ್ಯಾತಂಗಳ್ ಮದನಿ ಮಾತನಾಡಿ, ವಿದ್ಯಾರ್ಥಿನಿಯರು ಆತ್ಮವಿಶ್ವಾಸ ಹಾಗೂ ದೃಢ ನಿರ್ಧಾರದಿಂದ ಹೆಜ್ಜೆ ಇಟ್ಟರೆ ಯಶಸ್ಸು ಗ್ಯಾರಂಟಿ ಎಂದರು.
ವೇದಿಕೆಯಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಉಪಾಧ್ಯಕ್ಷ ಮುಹಮ್ಮದ್ ಇಸಾಕ್, ಪ್ರಧಾನ ಕಾರ್ಯ ದರ್ಶಿ ಇಮರತ್ ಅಲಿ, ಪ್ರಾಂಶುಪಾಲೆಯಾದ ಡಾ. ಹೇಮಲತ ಬಿ. ಡಿ ಉಪಸ್ಥಿತರಿದ್ದರು.
ಕಾಲೇಜಿನ ಸಂಚಾಲಕರ ಅಮಾನುಲ್ಲಾ ಖಾನ್ ಪ್ರಾಸ್ತಾವನೆಗೈದರು. ದ್ವಿತೀಯ ವಾಣಿಜ್ಯ ವಿಭಾಗದ ಸಲ್ಮಾ ನವಾಲ್ ಕಿರಾತ್ ಪಠಿಸಿದರು, ಪ್ರಥಮ ವಿಜ್ಞಾನ ವಿಭಾಗದ ರಿಲಾ ಮರಿಯಂ ಬಸ್ತಿಕಾರ್ ಸ್ವಾಗತಿಸಿ, ಅಂತಿಮ ಬಿಎ ವಿಭಾಗದ ಯು.ಕೆ ಸಂಶೀರ ವಂದಿಸಿದರು.
ದ್ವಿತೀಯ ವಾಣಿಜ್ಯ ವಿಭಾಗದ ಆಸೀಯ ಅಫ್ಸನ ಕಾರ್ಯಕ್ರಮ ನಿರೂಪಿಸಿದರು.







