ಉಳ್ಳಾಲ: ಹಡಿಲು ಭೂಮಿ ಕೃಷಿಗೆ ಚಾಲನೆ, ಮಹಿಳಾ ಸ್ವಾವಲಂಬಿ ಉದ್ಯೋಗ ತರಬೇತಿ ಕಾರ್ಯಕ್ರಮ

ಉಳ್ಳಾಲ: ಕೃಷಿಗೆ ಒತ್ತು ಕೊಟ್ಟು ಕಾರ್ಯ ನಿರ್ವಹಿಸುವ ಉದ್ದೇಶ ದಿಂದಲೇ ನಾವು ಸೊಸೈಟಿ ಯನ್ನು ಆರಂಭಿಸಿದ್ದೇವೆ. ಒಂದು ಎಕರೆ ಭತ್ತದ ಕೃಷಿಗೆ 5000, ಅಡಿಕೆ ಕೃಷಿ ಗೆ ಒಂದು ಕೆಜಿ ಮೈಲ್ ತುತ್ತು ಸಿಂಪಡಣೆ ಗೆ 100 ರೂ. ಪ್ರೋತ್ಸಾಹ ಧನ ನೀಡಲಾಗುತ್ತಿದೆ ಎಂದು ಕೋಟೆಕಾರು ವ್ಯ.ಸೇ.ಸ.ಸಂಘದ ಅಧ್ಯಕ್ಷ ಕೃಷ್ಣ ಶೆಟ್ಟಿ ಕೆಳಗಿನ ಕೋಟೆಕಾರುಗುತ್ತು ಹೇಳಿದರು.
ಅವರು ಕೋಟೆಕಾರು ವ್ಯವಸಾಯ ಸೇವಾ ಸಹಕಾರ ಸಂಘದ ವತಿಯಿಂದ ಮಾಧ್ಯಮ ಕೇಂದ್ರ ಮತ್ತು ಉಳ್ಳಾಲ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ, ಕೃಷಿ ವಿಜ್ನಾನ ಕೇಂದ್ರ ಮಂಗಳೂರು, ತೋಟಗಾರಿಕಾ ಇಲಾಖೆ ಮಂಗಳೂರು, ಕೃಷಿ ಇಲಾಖೆ ಮಂಗಳೂರು , ದ.ಕ.ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘ, ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಇವರ ಸಹಯೋಗದೊಂದಿಗೆ ಕೋಟೆಕಾರು ಬೀರಿ ಜಂಕ್ಷನ್‌ನಲ್ಲಿರುವ ಕೆ. ಸುಬ್ಬಣ್ಣಯ್ಯ ಸ್ಮಾರಕ ಕೋಟೆಕಾರು ಸಹಕಾರ ಸೌಧದಲ್ಲಿ ಗ್ರಾಮ ಸಂಪರ್ಕ ಅಭಿಯಾನ, ಹಡಿಲು ಭೂಮಿ ಕೃಷಿಗೆ ಚಾಲನೆ, ಮಹಿಳಾ ಸ್ವಾವಲಂಬಿ ಉದ್ಯೋಗ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅತ್ಯಂತ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಗೌರವಿಸುವ ಮೂಲಕ ಶಿಕ್ಷಣ ಕ್ಕೆ ಪ್ರೋತ್ಸಾಹ ನೀಡುತ್ತಾ ಬಂದಿದ್ದೇವೆ. ಈ ಬಾರಿ ಹಡಿಲು ಭೂಮಿ ಯಲ್ಲಿ ಪತ್ರಕರ್ತರ ಜೊತೆ ಸೇರಿ ಭತ್ತದ ಕೃಷಿ ಮಾಡಲು ನಿರ್ಧರಿ ಸಿದ್ದೇವೆ. ಕೃಷಿಕರಿಗೆ ಕೃಷಿ ಯ ಬಗೆ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾ ಗಿದೆ ಎಂದರು.
ಮಂಗಳೂರು ವಿಶ್ವವಿದ್ಯಾನಿಲಯದ ಯುಜಿಸಿ ಮಹಿಳಾ ಅಧ್ಯಯನ ಕೇಂದ್ರದ ನಿರ್ದೇಶಕಿ ಹಾಗೂ ರಸಾಯನ ಶಾಸ್ತ್ರ ಪ್ರಾಧ್ಯಾಪಕಿ ಪ್ರೊ.ಬಿ.ಕೆ.ಸರೋಜಿನಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳನ್ನು ಮಹಿಳಾ ಸಬಲಿಕರಣದತ್ತ ತೊಡಗಿಸಿಕೊಳ್ಳುವ ಮೂಲ ಉದ್ಧೇಶದಿಂದ ಯುಜಿಸಿ ಮಹಿಳಾ ಅಧ್ಯಯನ ಕೇಂದ್ರ ಕಾರ್ಯ ನಿರ್ವಹಿಸುತ್ತಿದ್ದು, ಸಮುದಾಯ ಪಾಲ್ಗೊಳ್ಳುವಿಕೆಯೊಂದಿಗೆ ಮಹಿಳೆಯರು ಸ್ವಾವಲಂಬಿ ಉದ್ಯೋಗದ ಮೂಲಕ ಆರ್ಥಿಕ ಸಬಲೀಕರಣಕ್ಕೆ ಗ್ರಾಮಸಂಪರ್ಕ ಅಭಿ ಯಾನ ಪೂರಕವಾಗಿದ್ದು ಇದರ ಸದುಪಯೋಗವನ್ನು ಗ್ರಾಮೀಣ ಮಹಿಳೆಯರು ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಹೇಳಿದರು.
ಪದವಿಪೂರ್ವ ಕಾಲೇಜು ಪ್ರಾಂಶುಪಾಲರ ಸಂಘದ ಜಿಲ್ಲಾಧ್ಯಕ್ಷ ಜಯಾನಂದ ಎನ್. ಸುವರ್ಣ ಮಾತ ನಾಡಿ, ಕೃಷಿ ಸಂಸ್ಕೃತಿ ಉಳಿಸುವ ಕಾರ್ಯ ಆಗಬೇಕಾಗಿದ್ದು, ಯುವ ಜನತೆ ಅದರಲ್ಲೂ ಮಹಿಳೆಯರಿಗೆ ಸ್ವಾಭಿಮಾನದ ಬದುಕು ಕಟ್ಟಲು ಗ್ರಾಮ ಸಂಪರ್ಕ ಅಭಿಯಾನದಂತಹ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಕಾರ್ಯ ಆಗಬೇಕು. ಗ್ರಾಮ ಸಂಪರ್ಕ ಅಭಿಯಾನದಲ್ಲಿ ನಡೆಯುವ ಹಡಿಲು ಭೂಮಿ ಕೃಷಿ ಕಾರ್ಯದಲ್ಲಿ ಸಂಘ ವ್ಯಾಪ್ತಿಯ ಎಲ್ಲಾ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.
ಡಾ ರಶ್ಮಿ ಲಾಭದಾಯಕ ಕೃಷಿ ಹಾಗೂ ಜೇನು ಕೃಷಿ ಬಗ್ಗೆ ಮಾಹಿತಿ ನೀಡಿದರು.
ಈ ಕಾರ್ಯಕ್ರಮ ದಲ್ಲಿ ಈ ಸಂದರ್ಭದಲ್ಲಿ ಕೋಟೆಕಾರ್ ಪಟ್ಟಣ ಪಂಚಾಯತ್ ಅಧ್ಯಕ್ಷ ದಿವ್ಯ ಸತೀಶ್, ಸ್ಥಾಯಿ ಸಮಿತಿ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜ್ಯೋತಿ ರಾಜ್,ಸೊಸೈಟಿಯ ಉಪಾಧ್ಯಕ್ಷ ಅಬುಸಾಲಿ ಕಿನ್ಯ,ನಿರ್ದೇಶಕ ಕೃಷ್ಣಪ್ಪ ಸಾಲ್ಯಾನ್, ಸುರೇಖ ಉದಯಕುಮಾರ್ ಶೆಟ್ಟಿ, ಅರುಣ್ ಕುಮಾರ್ ಯು.,ರಾಘವ ಆರ್ ಉಚ್ಚಿಲ, ಸುನಿತಾ ಲೋಬೋ ಪಾವೂರು, ಕೃಷ್ಣಪ್ಪ ಬೆಳ್ವ,ಬಾಬು ನಾಯ್ಕ, ಕಿರಣ್ ಕುಮಾರ್ ಶೆಟ್ಟಿ , ಸುರೇಖ ಚಂದ್ರ ಹಾಸ್ ಉಪಸ್ಥಿತರಿದ್ದರು.
ಕೋಟೆಕಾರು ವ್ಯವಸಾಯ ಸೇವಾ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರ್ಷವರ್ಧನ ಉಳ್ಳಾಲ್ ಸ್ವಾಗತಿಸಿದರು. ಮಣಿಪಾಲದ ಭಾರತ್ ವಿಕಾಸ್ ಟ್ರಸ್ಟ್ ನ ಕಾರ್ಯಕ್ರಮ ವ್ಯವಸ್ಥಾಪಕ ಜೀವನ್ ಕೊಲ್ಯ
ಕಾರ್ಯಕ್ರಮ ನಿರೂಪಿಸಿದರು.ಉಳ್ಳಾಲ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಸಂತ್ ಎನ್. ಕೊಣಾಜೆ ಪ್ರಸ್ತಾವನೆಗೈದರು. ಉಪನ್ಯಾಸಕಿ ಸುಮಲತಾ ಕೊಣಾಜೆ ವಂದಿಸಿದರು.







