ಗೂಡಿನಬಳಿ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ವಿದ್ಯಾರ್ಥಿವೇತನ ವಿತರಣೆ

ಮಂಗಳೂರು: ಗೂಡಿನಬಳಿ ವೆಲ್ಫೇರ್ ಅಸೋಸಿಯೇಷನ್ (ಜಿಡಬ್ಲ್ಯುಎ) ಕೇಂದ್ರ ಸಮಿತಿ, ಸೌದಿ ಅರೇಬಿಯಾ ಹಾಗೂ ಸಮನ್ವಯ ಸಮಿತಿ ಗೂಡಿನಬಳಿ ಇದರ ವತಿಯಿಂದ ವಿದ್ಯಾರ್ಥಿ, ವಿದ್ಯಾರ್ಥಿ ನಿಯರಿಗೆ ತರಬೇತಿ ಶಿಬಿರ ಹಾಗೂ ವಿದ್ಯಾರ್ಥಿ ವೇತನ ಕಾರ್ಯಕ್ರಮ ಇತ್ತೀಚೆಗೆ ಗೂಡಿನಬಳಿಯ ಜಿಎಂ ರೆಸಿಡೆನ್ಸಿಯಲ್ಲಿ ನಡೆಯಿತು.
ಕಲಿಕಾ ತರಬೇತಿ ಶಿಬಿರವನ್ನು ಜಿಡಬ್ಲ್ಯುಎ ಶೈಕ್ಷಣಿಕ ಸಲಹೆ ಗಾರ ಖಮರುದ್ದೀನ್ ಗೂಡಿನಬಳಿ ನಡೆಸಿಕೊಟ್ಟರು.
ಗೂಡಿನಬಳಿ ಮಸ್ಜಿದ್ ಎ ಮುತ್ತಲಿಬ್ ಇದರ ಖತೀಬ್ ವಿ. ಎಂ ಉನೈಸ್ ಫೈಝಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಇಸ್ಲಾಂ ಧರ್ಮವು ಶಿಕ್ಷಣಕ್ಕೆ ಮಹತ್ವದ ಸ್ಥಾನವನ್ನು ಕೊಟ್ಟಿದೆ. ಖುರ್ ಆನ್‌ನ ಪ್ರಥಮ ವಾಕ್ಯವೇ ಓದು ಎಂಬುದಾಗಿದೆ ಎನ್ನುತ್ತಾ ಕಾರ್ಯಕ್ರಮವನ್ನು ಶ್ಲಾಘಿಸಿದರು.
ಖಮರುದ್ದೀನ್ ಗೂಡಿನಬಳಿಯವರು ಜಿಡಬ್ಲ್ಯುಎ ಸ್ಥಾಪಿಸಿದ ಉದ್ದೇಶ, ಬೆಳೆದು ಬಂದಿರುವ ಹಾದಿ ಹಾಗೂ ಸಂಸ್ಥೆಯ ಮುಂದಿನ ಯೋಜನೆ ಗಳನ್ನು ತಿಳಿಸಿದರು.
ಮುಖ್ಯ ಅತಿಥಿ ಬಂಟ್ವಾಳ ಕ್ಷೇತ್ರ ಮುಖ್ಯಶಿಕ್ಷಣಾಧಿಕಾರಿ ಮಂಜುನಾಥ್ ಎಂ ಜಿ ಅವರು ಶಿಕ್ಷಣವು ಜೀವನದ ಅವಿಭಾಜ್ಯ ಅಂಗವಾಗಿದೆ. ಜಗತ್ತಿನ ಆಸೆ, ಮೋಹದ ಬದುಕಿನ ಹಿಂದೆ ಓಡದೆ ಶಿಕ್ಷಣಕ್ಕಾಗಿ ತಮ್ಮ ಸಮಯವನ್ನು ವ್ಯಯಿಸಿದರೆ ಮುಂದೆ ಸಮಾಜದಲ್ಲಿ ಸಿಗುವ ಗೌರವ, ಸ್ಥಾನಮಾನದ ಬಗ್ಗೆ ವಿವರವಾಗಿ ತಿಳಿಸಿದರು.
ಗೂಡಿನಬಳಿ ಹಯಾತುಲ್ ಇಸ್ಲಾಂ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ಬಿ. ರಾಮಚಂದ್ರ ರಾವ್ , ಮೆಲ್ಕಾರ್ ಎಸ್‌ಎಂಆರ್ ಕಾಲೇಜಿನ ಮಾಜಿ ಪ್ರಾಂಶುಪಾಲ ಫಯಾಜ್ ದೊಡ್ಡಮನೆ ಮುಖ್ಯ ಅತಿಥಿಯಾಗಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ಜಿಡಬ್ಲ್ಯುಎ ಕೇಂದ್ರ ಸಮಿತಿಯ ಅಧ್ಯಕ್ಷರಾದ ಆಸೀಫ್ ಗೂಡಿನಬಳಿ ವಹಿಸಿದ್ದರು.
2024-25 ನೇ ಶೈಕ್ಷಣಿಕ ಸಾಲಿನಲ್ಲಿ ಕರ್ನಾಟಕ ರಾಜ್ಯ ಪದವಿ ಪೂರ್ವ ಶಿಕ್ಷಣ ಮಂಡಳಿ ನಡೆಸಿದ ವಾರ್ಷಿಕ ಪರೀಕ್ಷೆಯಲ್ಲಿ 568/600 (94.67%) ಅಂಕ ಗಳಿಸಿದ ಯೆನೆಪೋಯ ಪದವಿಪೂರ್ವ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಆಯಿಷಾ ರಶಾರನ್ನು ಈ ಸಮಾರಂಭದಲ್ಲಿ ಅಭಿನಂದಿಸಲಾಯಿತು.
ಸಮಾರಂಭದಲ್ಲಿ ಸುಮಾರು 73 ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾ ಯಿತು. ಬಂಟ್ವಾಳ ಮೂಡ ಸರಕಾರಿ ಪದವಿ ಪೂರ್ವ ಕಾಲೇಜಿನ 2024-25ನೇ ವರ್ಷದ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದಲ್ಲಿ ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿ , ವಿದ್ಯಾರ್ಥಿನಿ ಯರನ್ನು ಈ ಸಮಾರಂಭದಲ್ಲಿ ಅಭಿನಂದಿಸಲಾಯಿತು.
ಜಿಡಬ್ಲ್ಯುಎ ಕೇಂದ್ರ ಹಾಗೂ ಸಮನ್ವಯ ಸಮಿತಿಯ ಚೆಯರ್ ಮ್ಯಾನ್ ಮುಹಮ್ಮದ್ ಸಲೀಂ ಜಿ ಕೆ, ಗೂಡಿನಬಳಿ ಮಸ್ಜಿದ್ ಎ ಮುತ್ತಲಿಬ್ ಇದರ ಅಧ್ಯಕ್ಷ ಉಬೈದುಲ್ಲಾ ಹಾಜಿ, ಹಯಾತುಲ್ ಇಸ್ಲಾಂ ಆಂಗ್ಲ ಮಾಧ್ಯಮ ಶಾಲಾ ಸಂಚಾಲಕ ಇಕ್ಬಾಲ್ ಐಎಂಆರ್, ಜಿಡಬ್ಲ್ಯುಎ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಜೌಹರ್ ಜಿ.ಕೆ., ಕೋಶಾಧಿಕಾರಿ ಅಮೀರ್ ಜಿ. ಎಂ. ಉಪಾಧ್ಯಕ್ಷ ರಿಜ್ವ್ವಾನ್ ಜಿ. ಕೆ., ಜಿಡಬ್ಲ್ಯುಎ ರಿಯಾಧ್ ಘಟಕದ ಅಧ್ಯಕ್ಷ ಜಾವೇದ್ ಎ ನ್‌ಎ., ಕೇಂದ್ರ ಸಮಿತಿಯ ಸದಸ್ಯರುಗಳಾದ ಹಮೀದ್ ಜಿ. ಕೆ., ಜಾಫರ್ ಜಿ. ಕೆ., ಮುಹಮ್ಮದ್ ಶಾನಿದ್ ಜಿ. ಕೆ ಸಮಾರಂಭದಲ್ಲಿ ಹಾಜರಿದ್ದರು.
ಮಾಸ್ಟರ್ ಅಲಿ ರಿಜ್ವ್ವಾನ್ ಖುರ್‌ಆನ್ ಕಿರಾಅತ್ ಪಠಿಸಿದರು.
ಜಿಡಬ್ಲ್ಯುಎ ಸಮನ್ವಯ ಸಮಿತಿ ಅಧ್ಯಕ್ಷ ಅನ್ವರ್ ಹುಸೇನ್ ಸ್ವಾಗತಿಸಿದರು. ಕೇಂದ್ರ ಸಮಿತಿಯ ಉಪಾಧ್ಯಕ್ಷ ಶಫಿಯುಲ್ಲಾ ಜಿ. ಕೆ ವಂದಿಸಿದರು. ಸಮನ್ವಯ ಸಮಿತಿಯ ಜತೆ ಕಾರ್ಯದರ್ಶಿ ಅತಾವುಲ್ಲಾ ಜಿ. ಕೆ. ಕಾರ್ಯಕ್ರಮ ನಿರೂಪಿಸಿದರು.







