ನ.27-30: ಮಂಗಳೂರಿನಲ್ಲಿ ಅಂತರರಾಷ್ಟ್ರೀಯ ನಾಟಕೋತ್ಸವ

ಸಾಂದರ್ಭಿಕ ಚಿತ್ರ PC | freepik
ಮಂಗಳೂರು, ನ.26: ಅಸ್ತಿತ್ವ (ರಿ.) ಮಂಗಳೂರು ವತಿಯಿಂದ ರಂಗ ಅಧ್ಯಯನ ಕೇಂದ್ರ, ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾನಿಲಯ) ಹಾಗೂ ಅರೆಹೊಳೆ ಪ್ರತಿಷ್ಠಾನದ ಸಹಯೋಗದಲ್ಲಿ ನ.27ರಿಂದ 30ರವರೆಗೆ ನಗರದ ಅಲೋಶಿಯಸ್ ಕಾಲೇಜಿನ ಎಲ್ಸಿಆರ್ಐ ಆಡಿಟೋರಿಯಂನಲ್ಲಿ ಸಂಜೆ 6:30ರಿಂದ ನಡೆಯಲಿದೆ.
ನ.27ರಂದು ಸೈರನ್ (ಕನ್ನಡ), ನ.28ರಂದು ಪೊಲಿಟಿಕಲ್ ಪ್ರಿಸನರ್ಸ್ (ಕನ್ನಡ), ನ.29ರಂದು ಯೇನಾ ಜಾಲ್ಯಾರ್ ವಚಾನಾ (ಕೊಂಕಣಿ), ನ.30ರಂದು ಚಿರಿ... (ತೀಸ್ ನಾಣ್ಯಾಂಚಿ) (ಕೊಂಕಣಿ) ನಾಟಕ ಪ್ರದರ್ಶನಗೊಳ್ಳಲಿದೆ. ಎಲ್ಲಾ ನಾಟಕಗಳಿಗೆ ಪ್ರವೇಶ ಉಚಿತವಾಗಿರುತ್ತದೆ ಎಂದು ಪ್ರಕಟನೆ ತಿಳಿಸಿದೆ.
Next Story





