ಇನಾಯತ್ ಅಲಿ ಶಿಫಾರಸ್ಸಿನ ಮೇರೆಗೆ 12ಮಂದಿ ರೋಗಿಗಳಿಗೆ 9,26,824 ರೂ. ಪರಿಹಾರ ಧನ ಬಿಡುಗಡೆ

ಇನಾಯತ್ ಅಲಿ
ಸುರತ್ಕಲ್ : ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರ ಶಿಫಾರಸ್ಸಿನ ಮೇರೆಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಒಟ್ಟು 12 ಮಂದಿ ರೋಗಿಗಳಿಗೆ 9,26,824 ರೂ. ಪರಿಹಾರ ಧನ ಬಿಡುಗಡೆಗೊಂಡಿದೆ.
ಮಾರಕ ಬೋನ್ ಮ್ಯಾರೊ ಕ್ಯಾನ್ಸರ್ ರೋಗಕ್ಕೆ ತುತ್ತಾಗಿರುವ ಕೃಷ್ಣಾಪುರ ನಿವಾಸಿ 24 ವರ್ಷದ ಅಬೂಬಕರ್ ಫರ್ವೀಝ್ ಅವರಿಗೆ 4,00,000 ರೂ. ಹಾಗೂ ಇತರ 11 ಮಂದಿಗೆ ಪರಿಹಾರ ಬಿಡುಗಡೆಯಾಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





