ಎದುರುಪದವು: ವಾರ್ಷಿಕ ಸ್ವಲಾತ್ ಕಾರ್ಯಕ್ರಮ

ಮಂಗಳೂರು: ಹಯತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿ ಮತ್ತು ಮದ್ರಸ ಎದುರುಪದವು ಮೂಡುಶೆಡ್ಡೆ ಇದರ 22ನೇ ವಾರ್ಷಿಕ ಸ್ವಲಾತ್ ಕಾರ್ಯಕ್ರಮವು ಹಯತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿ ಮತ್ತು ಮದ್ರಸದ ಮರ್ಹೂಂ ಶಂಸುಲ್ ಉಲಮಾ ವೇದಿಕೆಯಲ್ಲಿ ನೆರವೇರಿತು.
ಅಸ್ಸಯ್ಯದ್ ನಜ್ಮುದ್ದೀನ್ ಪೂಕೋಯ ತಂಙಳ್ ಅಲ್ ಹೈದ್ರೋಸಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಹಯತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿ ಮತ್ತು ಮದ್ರಸದ ಖತೀಬ್ ಸಫ್ವಾನ್ ಇರ್ಫಾನಿ ಮುಂಡೋಳೆ ಕಾರ್ಯಕ್ರಮ ಉದ್ಘಾಟಿಸಿದರು. ಈ ವೇಳೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಆಲಿ, ಎಸ್‌ಡಿಪಿಐ ರಾಷ್ಟ್ರೀಯ ಕಾರ್ಯ ದರ್ಶಿ ರಿಯಾಝ್ ಪರಂಗಿಪೇಟೆ, ಕರ್ನಾಟಕ ರಾಜ್ಯ ವಕ್ಫ್ ಕೌನ್ಸಿಲ್‌ನ ಉಪಾಧ್ಯಕ್ಷ ಮೌಲಾನಾ ಎನ್‌ಕೆಎಂ ಶಾಫಿ ಸಅದಿ, ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ನಸೀರ್ ಲಕ್ಕಿ ಸ್ಟಾರ್, ಉದ್ಯಮಿಗಳಾದ ಶಾಫಿ ಮುಲ್ಲರಪಟ್ಟಣ, ಖಾಲಿದ್ ಪರಾರಿ, ಇಸ್ಲಾಹುಲ್ ಇಸ್ಲಾಂ ಮಸೀದಿಯ ಅಧ್ಯಕ್ಷ ಇಕ್ಬಾಲ್ ಜಿ.ಪಿ., ವಕೀಲ ಅಬ್ದುಲ್ ನಝೀರ್, ಹಾಜಿ ಮುಹಮ್ಮದ್ ಹನೀಫ್ ಮತ್ತಿತರ ಗಣ್ಯರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ವಾಮಂಜೂರು ಇಸ್ಲಾಹುಲ್ ಇಸ್ಲಾಂ ಜುಮ್ಮಾ ಮಸೀದಿಯ ಖತೀಬ್ ಮುಹಮ್ಮದ್ ಫಾಯಿಝ್ ಅಲ್ ಫಾಳಿಲಿ, ಜಮಾಲಿಯ ಜುಮ್ಮಾ ಮಸೀದಿ ಬೈಲುಪೇಟೆಯ ಖತೀಬ್ ಶಫೀಕ್ ಜಲಾಲಿ ಇರ್ಫಾನಿ, ಹಿದಾಯತುಲ್ ಇಸ್ಲಾಂ ಮಸೀದಿಯ ಖತೀಬ್ ಹಾಫಿಲ್ ಸುಲೈಮಾನ್ ಹನೀಫಿ, ಹಯತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿ ಮತ್ತು ಮದ್ರಸದ ಅಧ್ಯಕ್ಷ ಮುಹಮ್ಮದ್ ಇಕ್ಬಾಲ್ ಎ.ಪಿ, ಉಪಾಧ್ಯಕ್ಷ ಅಬ್ದುಲ್ ರಝಾಕ್ ಎ.ಆರ್., ಕಾರ್ಯದರ್ಶಿ ಸಾಜುದ್ದೀನ್, ಸದರ್ ಉಸ್ತಾದ್ ಝುಬೈರ್ ಯಮಾನಿ, ಮುಅಲ್ಲಿಂ ಜಾಬಿರ್ ಜೌಹರಿ, ಬದ್ರಿಯಾ ಯಂಗ್‌ಮೆನ್ಸ್ ಅಸೋಸಿಯೇಶನ್ ಅಧ್ಯಕ್ಷ ನೌಶಾದ್, ಇಸ್ಲಾಮಿಕ್ ಸೋಶಿಯಲ್ ಗ್ರೂಪ್ ಕಾರ್ಯದರ್ಶಿ ಅಬ್ದುಲ್ ಜಲೀಲ್ ಮತ್ತಿತರರು ಉಪಸ್ಥಿತರಿದ್ದರು.







