ದ.ಕ. ಜಿಲ್ಲೆಗೆ ಮೇ 23-24 ರಂದು ಆರೆಂಜ್ ಅಲರ್ಟ್ ಘೋಷಣೆ

ಸಾಂದರ್ಭಿಕ ಚಿತ್ರ
ಮಂಗಳೂರು: ದ.ಕ. ಜಿಲ್ಲೆಯಲ್ಲಿ ಗುರುವಾರ ಭಾರೀ ಮಳೆ ಸುರಿಯುವ ರೆಡ್ ಅಲರ್ಟ್ ಹವಾಮಾನ ಇಲಾಖೆ ನೀಡಿದ್ದರೂ ಕೂಡ ಮಳೆ ಕಣ್ಮರೆಯಾಗಿತ್ತು. ಬಹುತೇಕ ಹಗಲಿಡೀ ಬಿಸಿಲು ಆವರಿಸಿತ್ತು. ಮುಂಜಾನೆ ಅಲ್ಲಲ್ಲಿ ಸಾಧಾರಣ ಮಳೆ ಸುರಿದಿದೆ. ಸುಮಾರು 10ಕ್ಕೆ ವೇಳೆಗೆ ಬಿಸಿಲು ಕಾಣಿಸಿಕೊಂಡಿತ್ತು. ನಡು ಮಧ್ಯಾಹ್ನ ವೇಳೆಗೆ ಬಿಸಿಲಿನ ತೀವ್ರತೆ ಜೋರಾಗಿತ್ತು.
ಹವಾಮಾನ ಇಲಾಖೆಯು ದ.ಕ. ಜಿಲ್ಲೆಗೆ ಮೇ 23-24ರಂದು ಆರೇಂಜ್ ಅಲರ್ಟ್ ಮತ್ತು ಮೇ 25ರಿಂದ 27ರವರೆಗೆ ರೆಡ್ ಅಲರ್ಟ್ ಘೋಷಿಸಿದೆ.
Next Story





