ʼಬ್ಯಾರಿ ಎಲ್ತ್‌ಗಾರ್ತಿಮಾರೊʼ ಕೂಟದಿಂದ ʼಒರ್ಮೆಪ್ಪಾಡ್-3ʼ ಸಮ್ಮಿಲನ ಕಾರ್ಯಕ್ರಮ

ಮಂಗಳೂರು: ಬ್ಯಾರಿ ಎಲ್ತ್‌ಗಾರ್ತಿಮಾರೊ ಕೂಟದ ಮೂರನೇ ಸಮ್ಮಿಲನ ʼಒರ್ಮೆಪ್ಪಾಡ್ʼ ಕಾರ್ಯಕ್ರಮವು ಅಶೋಕ ನಗರದ ಸ್ಕೇಟ್ ಸಿಟಿಯಲ್ಲಿ ರವಿವಾರ ನಡೆಯಿತು.
ಶಮೀಮಾ ಕುತ್ತಾರ್ ಅಧ್ಯಕ್ಷತೆ ವಹಿಸಿದ್ದರು. ಝುಲೈಕಾ ಮುಮ್ತಾಝ್ ಕಾರ್ಯಕ್ರಮ ಉದ್ಘಾಟಿಸಿದರು.
ರಮೀಝಾ ಎಂ.ಬಿ, ರಹ್ಮತ್ ಪುತ್ತೂರು, ಹಸೀನಾ ಮಲ್ನಾಡ್, ಅಸ್ಮತ್ ವಗ್ಗ, ನಸೀಮಾ ಸಿಧ್ದಕಟ್ಟೆ, ನಸೀಬಾ ಗಡಿಯಾರ್, ಮುನೀರಾ ತೊಕ್ಕೊಟ್ಟು, ಕಲಂದರ್ ಬೀವಿ, ಸಲ್ಮಾ ಮೈಕಾಲ ಕವನ ವಾಚಿಸಿದರು. ಡಾ.ಜುವೇರಿಯ ಮುಫೀದ ಕವಿಗೋಷ್ಠಿಯನ್ನು ಸಂಯೋಜಿಸಿದರು.
ಮರ್ಯಂ ಇಸ್ಮಾಯಿಲ್, ಝುಲೇಖಾ ಮುಮ್ತಾಝ್, ಮಿಸ್ರಿಯ ಪಜೀರ್, ಸಾರಾ ಅಲಿ ಪರ್ಲಡ್ಕ ಹಾಸ್ಯ ಲೇಖನಗಳನ್ನು ವಾಚಿಸಿದರು. ಹಸೀನಾ ಮಲ್ನಾಡ್ ರಸಪ್ರಶ್ನೆ ಸ್ಪರ್ಧೆ ನಡೆಸಿಕೊಟ್ಟರು. ಆಯಿಶಾ ಪೆರ್ನೆ ಗಿಫ್ಟ್ ಎಕ್ಸ್‌ಚೇಂಜ್ ಮನೋರಂಜನೆ ಆಟ ಸಂಯೋಜಿಸಿದರು. ಪುರಾತನ ವಸ್ತುಗಳ ಪ್ರದರ್ಶನ ಏರ್ಪಾಡು ಮಾಡಲಾಗಿತ್ತು.
ಕಲಂದರ್ ಬೀವಿ ಕೈಕಂಬ ಕಿರಾಅತ್ ಪಠಿಸಿದರು. ಆಯಿಶಾ ಯುಕೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರೇಶ್ಮಾ ಎಸ್.ಐ. ವಂದಿಸಿದರು. ಅಸ್ಮತ್ ವಗ್ಗ ಕಾರ್ಯಕ್ರಮ ನಿರೂಪಿಸಿದರು.





