‘ವ್ಯಸನ ಮುಕ್ತ ಕಡೆಗೆ ನಮ್ಮ ನಡಿಗೆ’ ವಾಕಥಾನ್

ಮಂಗಳೂರು : ವ್ಯಸನ ಮುಕ್ತ ಸಮಾಜ -ನಶೆ ಮುಕ್ತ ಮಂಗಳೂರು ಎಂಬ ಗುರಿಯೊಂದಿಗೆ ಸಿಒಡಿಪಿ ಬಾಂಧವ್ಯ, ಪಾದುವ ಕಾಲೇಜು ,ಕಥೋಲಿಕ್ ಸಭಾ ಮಂಗ್ಳುರ್ ಪ್ರದೇಶ್(ರಿ), ವೈಟ್ ಡವ್ಸ್ ಮಂಗಳೂರು ಜಂಟಿ ಸಂಯೋಜಕತ್ವದಲ್ಲಿ, ರೋಶನಿ ನಿಲಯ, ಸಂತ ಆಗ್ನೇಸ್ ಮಹಾ ವಿದ್ಯಾಲಯ, ಸಹಜೀವನ ಜಿಲ್ಲಾ ಒಕ್ಕೂಟದ ಸಹಕಾರದಿಂದ ಪಾದುವ ಸಿಒಡಿಪಿಯಿಂದ ಬೆಂದೂರ್ ಚರ್ಚ್‌ವರೆಗೆ ವಾಕಥಾನ್ ನಡೆಯಿತು.
ಬೆಂದೂರ್ ಚರ್ಚ್ ಧರ್ಮಗುರು ವಿನ್ಸೆಂಟ್ ಮೊಂತೇರೊ ಕಾಲ್ನಡಿಗೆ ಜಾಥಾ ಸಂಪನ್ನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಯುವಕರಿಗೆ ಸ್ಫೂರ್ತಿ ನೀಡಿದರು. ಸುಮಾರು 600 ಮಂದಿ ಯುವಕ, ಯುವತಿಯರು ವಾಕಥಾನ್‌ನಲ್ಲಿ ಪಾಲ್ಗೊಂಡಿದ್ದರು.
ಕರ್ನಾಟಕ ಲೋಕಾಯುಕ್ತ ದಕ್ಷಿಣ ಕನ್ನಡ ಜಿಲ್ಲಾ ವರಿಷ್ಠಾಧಿಕಾರಿ ಸಿ.ಎ. ಸೈಮನ್ ಅವರು ಮಾದಕ ವಸ್ತುಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆಯ ಬಗ್ಗೆ ವಿವರ ನೀಡಿದರು. ಕಣಚೂರು ಆಸ್ಪತ್ರೆಯ ಮುಖ್ಯ ಆಡಳಿತಾಧಿಕಾರಿ ವಿಕ್ಟರ್ ರೋಹನ್ ಮೊನಿಸ್ ಡ್ರಗ್ಸ್ ಪರಿಣಾಮದ ಬಗ್ಗೆ ವಿವರಿಸಿದರು.
ಸಿಒಡಿಪಿ ನಿರ್ದೇಶಕ ವಿನ್ಸೆಂಟ್ ಡಿಸೋಜ ಸ್ವಾಗತಿಸಿದರು. ಪಾದುವ ಕಾಲೇಜು ಪ್ರಾಂಶುಪಾಲ ವಂದನೀಯ ಅರುಣ್ ಲೋಬೊ ವಂದಿಸಿದರು. ಉಪನ್ಯಾಸಕ ರೋಹನ್ ಕಾರ್ಯಕ್ರಮ ನಿರೂಪಿಸಿದರು.





