ಪಾಲ್ದನೆ ಚರ್ಚ್: ಐಸಿವೈಎಂ ಸಿಟಿ ವಲಯ ಅಧ್ಯಕ್ಷರಾಗಿ ರಾಯನ್ ಮಾರ್ಸೆಲ್ ನೊರೊನ್ಹ ಆಯ್ಕೆ

ಮಂಗಳೂರು: ಪಾಲ್ದನೆ ಸಂತ ತೆರೆಸಾ ಚರ್ಚಿನ ಐಸಿವೈಎಂ ಘಟಕದ ಸದಸ್ಯ ರಾಯನ್ ಮಾರ್ಸೆಲ್ ನೊರೊನ್ಹ 12 ಚರ್ಚ್ ಗಳನ್ನು ಒಳಗೊಂಡ ಸಿಟಿ ವಲಯದ ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ. ಆ ಪ್ರಯುಕ್ತ ಅವರನ್ನು ಪಾಲ್ದನೆ ಚರ್ಚ್ ವತಿಯಿಂದ ಬಲಿಪೂಜೆಯ ಬಳಿಕ ಸನ್ಮಾನಿಸಲಾಯಿತು.
ಚರ್ಚಿನ ಧರ್ಮಗುರು ಫಾ.ರಿಚರ್ಡ್ ಅಲೋಶಿಯಸ್ ಕುವೆಲ್ಲೊ ಸನ್ಮಾನ ನೆರವೇರಿಸಿ ಈ ಸನ್ಮಾನವನ್ನು ಚರ್ಚಿನ ಸಮಸ್ತ ಭಕ್ತ ವೃಂದದ ಪರವಾಗಿ ಮಾಡಲಾಗುತ್ತಿದೆ. ಈ ಹುದ್ದೆಯು ಚರ್ಚಿಗೆ ಗೌರವ ತಂದಿದೆ ಎಂದರು.
ಈ ಸಂದರ್ಭದಲ್ಲಿ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್, ಕಾರ್ಯದರ್ಶಿ ಆಸ್ಟಿನ್ ಮೊಂತೇರೊ, ಐಸಿವೈಎಂ ಸಚೇತಕ ರೋಶನ್ ಮೊತೇರೊ, ಘಟಕದ ಅಧ್ಯಕ್ಷೆ ವಿಲೀಶಾ ಬ್ರ್ಯಾಗ್ಸ್, ಕಾರ್ಯದರ್ಶಿ ಆ್ಯಶೆಲ್ ಲೋಬೊ ಉಪಸ್ಥಿತರಿದ್ದರು.
ಮಂಗಳೂರು ಧರ್ಮಪ್ರಾಂತದ ಸಿಟಿ ವಲಯವು ಆಂಜೆಲೋರ್, ಬಜಾಲ್, ಬಜ್ಜೋಡಿ, ಬೋಂದೆಲ್, ಕುಲಶೇಖರ(ಕೋರ್ಡೆಲ್), ದೇರೆಬೈಲ್, ಫೆರ್ಮಾಯ್, ಕೆಲರಾಯ್, ನೀರುಮಾರ್ಗ, ಪಾಲ್ದನೆ, ಶಕ್ತಿನಗರ, ಮತ್ತು ವಾಮಂಜೂರು ಚರ್ಚ್ ಗಳನ್ನು ಒಳಗೊಂಡಿರುತ್ತದೆ.





