ಪಣಂಬೂರು: ಸೆ.29ರಿಂದ ಲಾರಿ ಮುಷ್ಕರ

ಮಂಗಳೂರು, ಸೆ.28: ಬಾಡಿಗೆ ಏರಿಕೆ ಸಹಿತ ವಿವಿಧ ಬೇಡಿಕೆಗಳನ್ನು ಮುಂದಿರಿಸಿ ನವ ಮಂಗಳೂರು ಬಂದರ್ ನಿಂದ ಸರಕು ಸಾಗಾಟ ಮಾಡುವ ಲಾರಿಗಳು ಸೆ.29ರಿಂದ ನಡೆಸಲು ನಿರ್ಧರಿಸಿವೆ.
ಈ ಸಂಬಂಧ ಪಣಂಬೂರು ಪೊಲೀಸ್ ಉಪ ಆಯುಕ್ತರ ಕಚೇರಿಯಲ್ಲಿ ಸೆ.27ರಂದು ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಲಾರಿ ಮಾಲಕರು ಹಾಗೂ ಟ್ರಾನ್ಸ್ಪೋರ್ಟರ್ಸ್ ಮಧ್ಯೆ ಸಂಧಾನ ಸಭೆ ನಡೆದಿತ್ತು. ಆದರೆ ಸಂಧಾನ ಸಭೆ ಸಭೆ ವಿಫಲಗೊಂಡಿದ್ದು, ಸೆ.29ರಿಂದ ಲಾರಿ ಮುಷ್ಕರಕ್ಕೆ ಲಾರಿ ನಡೆಸುವುದಾಗಿ ಲಾರಿ ಮಾಲಕರ ಸಂಘ ಹೇಳಿದೆ.
ಸಭೆಯ ಬಳಿಕ ಲಾರಿ ಮಾಲಕರ ಸಂಘದ ಅಧ್ಯಕ್ಷ ಸುಶಾಂತ್ ಶೆಟ್ಟಿ ಮಾತನಾಡಿ, 'ಲಾರಿ ಮಾಲಕರ ಬೇಡಿಕೆಯಂತೆ ಬಾಡಿಗೆ ಏರಿಸಲಾಗಿಲ್ಲ. ಈಗಿರುವ ಕನಿಷ್ಠ ಬಾಡಿಗೆ ದರದ ಮೇಲೆ ಟನ್ ಗೆ 100 ರೂ. ಏರಿಕೆ ಸಾಕಾಗದು, ಹೀಗಾಗಿ ಸೆ.29ರಿಂದ ಬೇಡಿಕೆ ಈಡೇರುವ ತನಕ ಮುಷ್ಕರ ಮುಂದುವರಿಯಲಿದೆ' ಎಂದರು.
Next Story





