ಪಣಂಬೂರು: ನವ ಮಂಗಳೂರು ಬಂದರು ಪ್ರಾಧಿಕಾರಕ್ಕೆ ರಾಷ್ಟ್ರೀಯ ಪ್ರಶಸ್ತಿ

ಪಣಂಬೂರು: ಬಂದರು ಮತ್ತು ಸಾಗಣೆಯಲ್ಲಿನ ಶ್ರೇಷ್ಠತೆಗಾಗಿ ಪಣಂಬೂರು ನವ ಮಂಗಳೂರು ಬಂದರು ಪ್ರಾಧಿಕಾರ 2025ನೇ ಸಾಲಿನ ವರ್ಷದ ಬಂದರು ಮತ್ತು "ವರ್ಷದ ಸಿಇಒ" ಅವಳಿ ರಾಷ್ಟ್ರೀಯ ಪ್ರಶಸ್ತಿಗಳಿಗೆ ಬಾಜನವಾಗಿದೆ.
ವರ್ಷದ ಬಂದರು ಪ್ರಶಸ್ತಿ ಮತ್ತು ವರ್ಷದ ಸಿಇಒ ಆಗಿ ಆಯ್ಕೆಯಾಗಿರುವ ನವ ಮಂಗಳೂರು ಬಂದರು ಪ್ರಾಧಿಕಾರ (ಎನ್‌ಎಂಪಿಎ) ಅಧ್ಯಕ್ಷ ಡಾ. ಎ. ವಿ. ರಮಣ ಅವರು ಬೆಂಗಳೂರಿನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾಭದಲ್ಲಿ ಅವಳಿ ಪ್ರಶಸ್ತಿಗಳನ್ನು ಸ್ವೀಕರಿಸಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ "ವರ್ಷದ ಸಿಇಒ" ಪ್ರಶಸ್ತಿ ಪುರಸ್ಕೃತ ಎನ್‌ಎಂಪಿಎ) ಅಧ್ಯಕ್ಷ ಡಾ. ಎ. ವಿ. ರಮಣ ಅವರು, ಎನ್‌ಎಂಪಿಎಯನ್ನು ವರ್ಷದ ಪ್ರಮುಖ ಬಂದರು ಎಂದು ಗುರುತಿಸಿದ್ದಕ್ಕೆ ಮತ್ತು ತಮ್ಮನ್ನು ವರ್ಷದ ಸಿಇಒ ಎಂದು ಗುರುತಿಸಿದ್ದಕ್ಕೆ ಸಂತೋಷ ವ್ಯಕ್ತಪಡಿಸಿದರು. ಬಂದರಿನ ಯಶಸ್ಸಿಗೆ ಸಾಮೂಹಿಕ ಕೊಡುಗೆಯನ್ನು ನೀಡಿರುವ ಇಡೀ ಬಂದರು ಬಂಧುತ್ವ, ನೌಕರರು, ಸ್ಟೀವರ್‌ಗಳು ಮತ್ತು ಪಿಪಿಪಿ ನಿರ್ವಾಹಕರಿಗೆ ಈ ಪ್ರಶಸ್ತಿಗಳನ್ನು ಅರ್ಪಿಸುವು ದಾಗಿ ನುಡಿದರು.
2019ರಲ್ಲಿ ರೂ.110 ಕೋಟಿ ತೆರಿಗೆ ನಂತರದ ಲಾಭದಿಂದ 2025 ರಲ್ಲಿ ರೂ.550 ಕೋಟಿಗೆ ಎಂಎಂಪಿಎ ಯ ಗಮನಾರ್ಹ ಬೆಳವಣಿಗೆಯನ್ನು ಎತ್ತಿ ತೋರಿಸಿದ ಅವರು, ಬಂದರು ತಂತ್ರಜ್ಞಾನ-ಚಾಲಿತ ಮತ್ತು ಯಾಂತ್ರೀಕೃತ ಗೊಂಡ ಕಾರ್ಯಾಚರಣೆಗಳಲ್ಲಿ ಮುಂಚೂಣಿಯಲ್ಲಿದೆ ಎಂದು ಹೇಳಿದರು.
ಬಿಟ್ಸ್ ಪಿಲಾನಿಯಿಂದ ಎಂ.ಇ. ಮೆಕ್ಯಾನಿಕಲ್ ಮತ್ತು ನಾಗಾರ್ಜುನ ವಿಶ್ವವಿದ್ಯಾಲಯದಿಂದ ಬಿ.ಇ. ಮೆಕ್ಯಾನಿಕಲ್ ಜೊತೆಗೆ ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಪಿಎಚ್‌ಡಿ ಪದವಿ ಪಡೆದಿರುವ ಡಾ. ಎ. ವಿ. ರಮಣ ಅವರು, ಭಾರತೀಯ ಕಡಲ ವಲಯದಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದಾರೆ, ಮುಂಬೈ, ವಿಶಾಖ ಪಟ್ಟಣಂ, ಕೋಲ್ಕತ್ತಾ, ಕೊಚ್ಚಿನ್ ಮತ್ತು ಮೊರ್ಮುಗಾವೊ ಬಂದರುಗಳಲ್ಲಿ ಹಿರಿಯ ನಾಯಕತ್ವದ ಪಾತ್ರಗಳನ್ನು ನಿರ್ವಹಿಸಿದ್ದಾರೆ, ಜೊತೆಗೆ ಭಾರತೀಯ ಕಡಲ ವಿಶ್ವವಿದ್ಯಾಲಯದಲ್ಲಿಯೂ ಸೇವೆ ಸಲ್ಲಿಸಿದ್ದಾರೆ. ಜೂನ್ 2019ರಲ್ಲಿ ಎನ್‌ಎಂಪಿಎ ಅಧಿಕಾರ ವಹಿಸಿಕೊಂಡರು.







