ದ.ಕ. ಜಿಲ್ಲಾ ಪಾಣಾರ ಯಾನೆ ನಲಿಕೆ ಸಮಾಜಸೇವಾ ಸಂಘದ ಸ್ಥಾಪಕಾಧ್ಯಕ್ಷ ಪೋಂಕು ನಿಧನ

ಮೂಡುಬಿದಿರೆ, ಜ.16: ದಕ್ಷಿಣ ಕನ್ನಡ ಜಿಲ್ಲಾ ಪಾಣಾರ ಯಾನೆ ನಲಿಕೆ ಸಮಾಜಸೇವಾ ಸಂಘದ ಸ್ಥಾಪಕಾಧ್ಯಕ್ಷ, ಮೂಡುಬಿದಿರೆ ಸರಕಾರಿ ಆರೋಗ್ಯ ಕೇಂದ್ರದ ನಿವ್ರತ್ತ ಫಾರ್ಮಾಸಿಸ್ಟ್ ಬಿ.ಪೋಂಕು (86) ಗುರುವಾರ ಮುಂಜಾನೆ ನಿಧನರಾಗಿದ್ದಾರೆ.
ಮೃತರು ಇಬ್ಬರು ಪುತ್ರರು, ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಕೆಲ್ಲ ಪುತಿಗೆಯಲ್ಲಿರುವ ಸ್ವಗೃಹದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
Next Story





