ಪಾವೂರು: ತಗ್ಗು ಪ್ರದೇಶ ಜಲಾವೃತ

ಕೊಣಾಜೆ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನೇತ್ರಾವತಿ ನದಿಯ ನೀರಿನ ಮಟ್ಟ ಹೆಚ್ಚಾಗಿದ್ದು, ನದಿ ತಟದ ಜನರು ಆತಂಕಕೀಡಾಗಿದ್ದಾರೆ.
ಹರೇಕಳ ಹಾಗೂ ಪಾವೂರು ಗ್ರಾಮದ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಪಾವೂರು ಗ್ರಾಮದ ಅಜೆರುಳಿಯ ಎಂಬಲ್ಲಿ ಸುಮಾರು 20 ಮನೆಗಳ ಸುತ್ತ ನದಿ ನೀರು ಆವೃತ್ತವಾಗಿದ್ದು, ಉಳ್ಳಾಲ ತಾಲೂಕು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಮುನ್ನಚ್ಚೆರಿಕೆಯ ವ್ಯವಸ್ಥೆಯ ಬಗ್ಗೆ ಕ್ರಮ ಕೈಗೊಂಡಿದ್ದಾರೆ.
Next Story