ಮನಪಾ | ಪರವಾನಿಗೆ ಉಲ್ಲಂಘಿಸಿ ಕಟ್ಟಡ ನಿರ್ಮಾಣ ಪ್ರಕರಣ: ದಂಡ ಪಾವತಿಸಿ ಪರಿಷ್ಕೃತ ನಕ್ಷೆ ಅನುಮೋದನೆಗೆ ಅವಕಾಶ

ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಟ್ಟಡ ಇರ್ಮಾಣ ಮಾಡಲು ಪಡೆದ ಪರವಾನಿಗೆಯನ್ನು ಉಲ್ಲಂಘಿಸಿ ನಿರ್ಮಿಸಲಾದ ಪ್ರಕರಣಗಳಿಗೆ ಸಂಬಂಧಿಸಿ ದಂಡ ಪಾವತಿಸಿ ಪರಿಷ್ಕೃತ ನಕ್ಷೆ ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದು ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ ಮಹಾನಗರ ಪಾಲಿಕೆ ಕಾಯ್ದೆ 2025ರಲ್ಲಿ ಕಟ್ಟಡ ನಕ್ಷೆ ಉಲ್ಲಂಘನೆಗಳಿಗೆ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಅದರಂತೆ ನಗರ ಪಾಲಿಕೆಗಳ ಕಟ್ಟಡ ಮಾದರಿ ಉಪವಿಧಿ 2017ಕ್ಕೆ ತಿದ್ದುಪಡಿ ಮಾಡಿ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಕಟ್ಟಡಗಳ ನಕ್ಷೆ ಉಲ್ಲಂಘನೆ ಪ್ರಕರಣಗಳಲ್ಲಿ ದಂಡ ಪಾವತಿಸಿ ಪರಿಷ್ಕೃತ ಕಟ್ಟಡ ನಕ್ಷೆಗಳಿಗೆ ಅನುಮೋದನೆ ನೀಡಲು ಪ್ರಮಾಣವನ್ನು ಸರಕಾರ ನಿಗದಿಪಡಿಸಿದೆ. ಅದರಂತೆ ಮಂಗಳೂರು ಮಹಾನಗರ ಪಾಲಿಕೆಯಲ್ಲಿಯೂ ಕ್ರಮ ವಹಿಸಲಾಗುತ್ತದೆ. *ಕಟ್ಟಡ ಪರವಾನಿಗೆ ಪಡೆದು ಸೆಟ್‌ಬ್ಯಾಕ್, ಕವರೇಜ್‌ಗಳಲ್ಲಿ ಶೇ. 15ರ ಮಿತಿಯೊಳಗೆ ಉಲ್ಲಂಘನೆ ಮಾಡಿದ್ದಲ್ಲಿ ಪ್ತಿ ಚದರ ಮೀಟರ್‌ಗೆ ವಸತಿ/ಕೈಗಾರಿಕೆ/ ಇತರ ಉದದೇಶದ ಕಟ್ಟಡಕ್ಕೆ ತಲಾ 2000 ರೂ. ವಾಣಿಜ್ಯದ ಉದ್ದೇಶದ ಕಟ್ಟಡಕ್ಕೆ 3000 ರೂ. ದಂಡ ಪಾವತಿಸಬೇಕಾಗಿದೆ.
ಕಟ್ಟಡ ಪರವಾನಿಗೆ ಪಡೆದು ಶೇ. 5ರ ಮಿತಿಯೊಳಗೆ ಉಲ್ಲಂಘನೆ ಮಾಡಿದ್ದಲ್ಲಿ ಉಲ್ಲಂಘನೆ ಮಾಡಿ ನಿರ್ಮಾಣ ಮಾಡಲಾದ ಕಾರ್ ಪಾರ್ಕಿಂಗ್ ಒಂದಕ್ಕೆ 5000 ರೂ. ಪಾವತಿಸಬೇಕಾಗಿದೆ. ಎಫ್.ಎ.ಆರ್. ಉಲ್ಲಂಘನೆಗೆ ಪ್ರ.ಚ. ಮೀಟರ್‌ಗೆ ವಸತಿ/ಕೈಗಾರಿಕೆ/ ಇತರೆ ಉದ್ದೇಶದ ಕಟ್ಟಡಕ್ಕೆ 2000 ರೂ. ಹಾಗೂ ವಾಣಿಜ್ಯ ಕಟ್ಟಡಕ್ಕೆ 3000 ರೂ.ಗಳನ್ನು ಪಾವತಿಸಬೇಕಾಗುತ್ತದೆ ಎಂದು ಪಾಲಿಕೆ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.





