ಕವಯತ್ರಿ ಸಿಹಾನ ಬಿ.ಎಂ.ಗೆ ಪಯಸ್ವಿನಿ ಪ್ರಶಸ್ತಿ

ಕಾಸರಗೋಡು, ಜ.4: ಕಾಸರಗೋಡು ಕನ್ನಡ ಭವನದ ಅಂತರ್ ರಾಜ್ಯ ಪ್ರಶಸ್ತಿಯಾದ ಕನ್ನಡ ಪಯಸ್ವಿನಿ ಅಚೀವ್ಮೆಂಟ್ ಅವಾರ್ಟ್ 2026ಕ್ಕೆ ಕವಯತ್ರಿ, ಸಂಘಟಕಿ ಸಿಹಾನ ಬಿ. ಎಂ. ಆಯ್ಕೆಯಾಗಿದ್ದಾರೆ.
ತನ್ನ ಪ್ರಥಮ ಕವನ ಸಂಕಲನ ಶ್ವೇತ ಪಾರಿವಾಳಕ್ಕೆ ಕನ್ನಡ ಭವನದಿಂದ ಕಾವ್ಯ ಪ್ರಶಸ್ತಿ ಪಡೆದಿದ್ದ ಸಿಹಾನ ಅವರಿಗೆ ಕನ್ನಡ ಭವನದ ಕನ್ನಡ ಪಯಸ್ವಿನಿ ಪ್ರಶಸ್ತಿಯನ್ನು ಜ.18ರಂದು ನುಳ್ಳಿಪ್ಪಾಡಿಯ ಕನ್ನಡ ಭವನ ರಜತ ಸಂಭ್ರಮ-ನಾಡುನುಡಿ ಹಬ್ಬ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವುದು ಎಂದು ಕನ್ನಡ ಭವನ ಸ್ಥಾಪಕ ಅಧ್ಯಕ್ಷ ಡಾ.ವಾಮನ್ ರಾವ್ ಬೇಕಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





