ಸ್ಫೂರ್ತಿಯಿಂದ ಸಕಾರಾತ್ಮಕ ಬದಲಾವಣೆ: ವಿವೇಕ್ ಆಳ್ವ

ಮಂಗಳೂರು, ಸೆ.12: ಸ್ಫೂರ್ತಿ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರುತ್ತದೆ. ಸಮಾಜದ ಪ್ರಸಿದ್ಧ ವ್ಯಕ್ತಿ ಗಳಿಂದ ನಾವು ಸ್ಫೂರ್ತಿಗೊಳ್ಳಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಟಾನದ ಆಡಳಿತ ವಿಶ್ವಸ್ಥರಾದ ವಿವೇಕ್ ಆಳ್ವ ಅಭಿಪ್ರಾಯಪಟ್ಟರು.
ಮಂಗಳೂರು ರಾಮಕೃಷ್ಣ ಮಿಷನ್ ವತಿಯಿಂದ ಮಂಗಳವಾರ ಆಯೋಜಿಸಲಾದ ‘ಸ್ಫೂರ್ತಿ’ ಎಂಬ ಒಂದು ದಿನದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಭಾರತ 2047- ಭಾರತದ ಪುನರ್ ನಿರ್ಮಾಣಕ್ಕಾಗಿಯುವಕರಿಗೆ ಮಾರ್ಗ’ ಎಂಬ ಪರಿಕಲ್ಪನೆಯ ಆಧಾರದಲ್ಲಿ ಕಾರ್ಯ ಕ್ರಮ ನಡೆಯಿತು. ಮಂಗಳೂರು ರಾಮಕೃಷ್ಣ ಮಠದಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿ ಅವರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕೋಝೀಕೋಡ್ ರಾಮಕೃಷ್ಣ ಮಿಷನ್ ಮುಖ್ಯಸ್ಥರಾದ ಸ್ವಾಮಿ ನರಸಿಂಹಾನಂದಜಿ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮೂಡಬಿದ್ರೆಯ ಎಸ್. ಕೆ. ಎಫ್. ಎಲಿಕ್ಸರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಚೇರ್ಮನ್ ಡಾ. ಜಿ ರಾಮಕೃಷ್ಣ ಆಚಾರ್ ಆಗಮಿಸಿದ್ದರು. ಬೆಂಗಳೂರಿನ ವಾಗ್ಮಿ, ಲೇಖಕ ಚಕ್ರವರ್ತಿ ಸೂಲಿಬೆಲೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಆಶ್ರಮದ ವತಿಯಿಂದ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಮೊದಲ ಅವಧಿಯಲ್ಲಿ ಕೋಝೀಕೋಡ್ ರಾಮಕೃಷ್ಣ ಮಿಷನ್‌ನ ಮುಖ್ಯಸ್ಥರಾದ ಸ್ವಾಮಿ ನರಸಿಂಹಾನಂದಜಿ ರಾಷ್ಟ್ರೀಯ ನಿರ್ಮಾಣಕ್ಕಾಗಿ ವ್ಯಕ್ತಿ ನಿರ್ಮಾಣ ಎಂಬ ವಿಷಯದ ಬಗ್ಗೆ ಮಾತನಾಡಿದರು.
ಎರಡನೇ ಅವಧಿಯಲ್ಲಿ ಚಕ್ರವರ್ತಿ ಸೂಲಿಬೆಲೆಯವರು ಭಾರತ 2047- ವಿವೇಕ ಪಥ ಎಂಬ ವಿಷಯದ ಬಗ್ಗೆ ಮಾತನಾಡಿದರು. ಮೂರನೇ ಅವಧಿಯಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಂಗಳೂರಿನ ಆದಾಯ ತೆರಿಗೆ ಇಲಾಖೆಯ ಉಪ ಆಯುಕ್ತರಾದ ರಮಿತ್ ಚೆನ್ನಿತ್ತಲ, ಮಂಗಳೂರಿನ ದಿಶಾ-ಕೆರಿಯಾರ್ ಟವರ್ಡ್ಸ್‌ಎಕ್ಸಲೆನ್ಸ್ ಇದರ ನಿರ್ದೇಶಕರಾದ ರಾಜೇಶ್ವರಿ ಡಿ ಶೆಟ್ಟಿ ಹಾಗೂ ಮಂಗಳೂರಿನ ಪೇಪರ್ ಸೀಡ್ ಕಂಪನಿ ಇದರ ಸಂಸ್ಥಾಪಕರಾದ ನಿತಿನ್ ವಾಸ್ ಅವರು ಭಾಗವಹಿಸಿದರು.
ಈ ಸಂವಾದವನ್ನು ಪುತ್ತೂರಿನ ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ಆಡಳಿತ ನಿರ್ದೇಶಕರಾದ ಡಾ. ಶ್ರೀಶಾ ಭಟ್ ನಡೆಸಿಕೊಟ್ಟರು. ಕ್ಯಾಪ್ಟನ್‌ಗಣೇಶ್‌ಕಾರ್ಣಿಕ್ ಸ್ವಾಗತಿಸಿ, ರಾಮಕೃಷ್ಣ ಮಿಷನ್ ಮಂಗಳೂರು ಇದರ ಮುಖ್ಯ ಸಂಯೋಜಕರಾದ ರಂಜನ್ ಬೆಳ್ಳರ್ಪ್ಪಾಡಿ ವಂದಿಸಿದರು. ಉಜಿರೆಯ ಎಸ್.ಡಿ. ಎಮ್. ಶಿಕ್ಷಣ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಸಂತೋಷ್ ಆಳ್ವ ಕಾರ್ಯಕ್ರಮವನ್ನು ನಿರ್ವಹಿಸಿದರು.







