ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಮಂಗಳೂರು : ಮುಡಾರೆ ಫೌಂಡೇಷನ್ ಹಾಗೂ ಸ್ಪಂದನ ಫ್ರೆಂಡ್ಸ್ ಅಶೋಕನಗರ ಇದರ ವತಿಯಿಂದ ಸರೋಳ್ಯ ಆನಂದ ಆಳ್ವ ಮತ್ತು ಬೈಲುಮೂಡುಕೆರೆ ಸುಮತಿ ಆಳ್ವ ಸ್ಮರಣಾರ್ಥ 2022-23ನೇ ಸಾಲಿನ ಎಸೆಸೆಲ್ಸಿ, ಪಿಯುಸಿ ಸಾಧಕ ವಿದ್ಯಾರ್ಥಿ ಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಉರ್ವ ಅಶೋಕನಗರ ಹಿ.ಪ್ರಾ ಶಾಲೆಯ ವಠಾರದಲ್ಲಿ ನಡೆಯಿತು.
ಈ ಸಂದರ್ಭ ಶಾಸಕ ವೇದವ್ಯಾಸ ಕಾಮತ್, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಟಿ.ಪ್ರವೀಣ್‌ಚಂದ್ರ ಆಳ್ವ ಅವರನ್ನು ಸನ್ಮಾನಿಸಲಾಯಿತು.
ಸೈಬರ್ ವಿಭಾಗದ ತಜ್ಞ ಅನಂತಪ್ರಭು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮನಪಾ ಸದಸ್ಯೆ ಜಯಲಕ್ಷ್ಮೆ ಶೆಟ್ಟಿ, ಸ್ಪಂದನ ಫ್ರೆಂಡ್ಸ್‌ನ ಅಧ್ಯಕ್ಷ ಜೊಸ್ಸಿ ಸೋನ್ಸ್, ಮುಡಾರೆ ಫೌಂಡೇಷನ್‌ನ ಅಧ್ಯಕ್ಷ ಸತೀಶ್ ಆಳ್ವ ಮತ್ತಿತರರು ಉಪಸ್ಥಿತರಿದ್ದರು.
Next Story





