ಮಲ್ಲೂರು ಟುಡೇ ಮಿಡಿಯಾ ಸೆಂಟರ್‌ನಿಂದ ಪ್ರತಿಭಾ ಪುರಸ್ಕಾರ

ಮಂಗಳೂರು: ಮಲ್ಲೂರು ಟುಡೇ ಮಿಡಿಯಾ ಸೆಂಟರ್ ವತಿಯಿಂದ ೨ನೇ ವಾರ್ಷಿಕೋತ್ಸವದ ಪ್ರಯುಕ್ತ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಗೌರವ ಪುರಸ್ಕಾರ ಹಾಗೂ ನೂತನ ಗ್ರಾಪಂ ಅಧ್ಯಕ್ಷರು ಗಳಿಗೆ ಅಭಿನಂದನಾ ಕಾರ್ಯಕ್ರಮವು ಪೆರ್ಮಂಕಿಯ ಬದ್ರಿಯಾನಗರದ ಬಂಟರ ಭವನದಲ್ಲಿ ಇತ್ತೀಚೆಗೆ ಜರುಗಿತು.
ಅಡ್ಡೂರಿನ ಸಹರಾ ವಿದ್ಯಾಸಂಸ್ಥೆಯ ಅಧ್ಯಕ್ಷ ಯು.ಪಿ ಇಬ್ರಾಹಿಂ ಕಾರ್ಯಕ್ರಮ ಉದ್ಘಾಟಿಸಿದರು. ರಾಜ್ಯ ಧಾರ್ಮಿಕ ದತ್ತಿ ಪರಿಷತ್ ಮಾಜಿ ಸದಸ್ಯ ಪದ್ಮನಾಭ ಕೋಟ್ಯಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಉಳಾಯಿಬೆಟ್ಟು ಗ್ರಾಪಂ ನೂತನ ಅಧ್ಯಕ್ಷ ಹರಿಕೇಷ್ ಶೆಟ್ಟಿ ಮತ್ತು ನೀರುಮಾರ್ಗ ಗ್ರಾಪಂ ಅಧ್ಯಕ್ಷ ಶ್ರೀಧರ್ ಚಿಕ್ಕಬೆಟ್ಟು ಅವರನ್ನು ಅಭಿನಂದಿಸಲಾಯಿತು.
ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಾದ ಡಿಯೋನ್ ಪಿಂಟೋ ಬೊಂಡಂತಿಲ, ಹರ್ಷಿಯಾ ಉದ್ದಬೆಟ್ಟು, ನಸೀಫಾ ಕಲಾಯಿ, ನಿಹಾಲ್ ಅಹಮ್ಮದ್ ಬದ್ರಿಯಾನಗರ, ಫಾತಿಮಾ ಸಲ್ವಾ ದೆಮ್ಮಲೆ, ಫಾತಿಮಾ ಸಹನಾ ದೆಮ್ಮಲೆ, ರಕ್ಷಾ ಉದ್ದಬೆಟ್ಟು, ಫಾತಿಮಾ ರಿಝಾ ಅಮ್ಮುಂಜೆ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಮದ್ರಸ ಕಲಿಕೆಯಲ್ಲಿ ಸಾಧನೆಗೈದವರನ್ನೂ ಗೌರವ ಪುರಸ್ಕಾರ ನೀಡಲಾಯಿತು. ಈ ಸಂದರ್ಭ ಕುಂಬಾರ ವೃತ್ತಿಯ ಹಿರಿಯ ಸಾಧಕ ಗಣಪ ಮೂಲ್ಯ ಅವರನ್ನು ಸನ್ಮಾನಿಸಲಾಯಿತು.
ಅತಿಥಿಗಳಾಗಿ ಮಾಜಿ ಸಚಿವ ರಮಾನಾಥ ರೈ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್, ಪತ್ರಕರ್ತ ಶಂಶೀರ್ ಬುಡೋಳಿ, ಲೇಖಕಿ ಆಯಿಷಾ ಪೆರ್ನೆ, ಉದ್ದಬೆಟ್ಟು ಮಸ್ಜಿದ್ ಅಧ್ಯಕ್ಷ ಹನೀಫ್ ಬೊಲ್ಲಂಕಿಣಿ, ಬದ್ರಿಯಾನಗರ ಮಸ್ಜಿದ್ ಅಧ್ಯಕ್ಷ ಅಶ್ರಫ್, ಗ್ರಾಪಂ ಮಾಜಿ ಸದಸ್ಯ ಹಸನ್ ಬಾವಾ ಮಲ್ಲೂರು ಭಾಗವಹಿಸಿದ್ದರು.
ಮುಸ್ತಫಾ ಬದ್ರಿಯಾನಗರ ಕಿರಾಅತ್ ಪಠಿಸಿದರು. ಅಧ್ಯಕ್ಷ ಜಬ್ಬಾರ್ ಮಲ್ಲೂರು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರಿಯಾಝ್ ಕಲಾಯಿ ವಂದಿಸಿದರು. ಅಲ್ತಾಫ್ ದೆಮ್ಮಲೆ ಕಾರ್ಯಕ್ರಮ ನಿರೂಪಿಸಿದರು.







