ಸುನ್ನಿ ಕೋ ಆರ್ಡಿನೇಶನ್‌ನಿಂದ ಪ್ರೊ ಆ್ಯಕ್ಟಿಫ್ ಪ್ರತಿನಿಧಿ ಸಮಾವೇಶ

ಮಂಗಳೂರು,ಜು.17:ಕರ್ನಾಟಕ ಮುಸ್ಲಿಂ ಜಮಾಅತ್, ಎಸ್‌ವೈಎಸ್, ಎಸೆಸ್ಸೆಫ್ ಸಂಘಟನೆಗಳನ್ನು ಒಳಗೊಂಡ ಸುನ್ನಿ ಕೋ ಆರ್ಡಿನೇಷನ್ ಮಂಗಳೂರು ರೆನ್ ಸಮಿತಿಯಿಂದ ರವಿವಾರ ಅಡ್ಯಾರ್ ಕಣ್ಣೂರಿನ ಅಲ್ ಮರ್ಕಝುಲ್ ಇಸ್ಲಾಮಿಯಲ್ಲಿ ಪ್ರೊ ಆ್ಯಕ್ಟಿಫ್ -2023 ಪ್ರತಿನಿಧಿ ಸಮಾವೇಶ ಜರಗಿತು.
ಸಮಿತಿಯ ಅಧ್ಯಕ್ಷ ಹಾಫಿಳ್ ಯಾಕೂಬ್ ಸಅದಿ ನಾವೂರು ಅಧ್ಯಕ್ಷತೆ ವಹಿಸಿದ್ದರು. ಸೈಯದ್ ಇಸಾಕ್ ತಂಳ್ ಕಣ್ಣೂರು ದುಆಗೈದರು. ಕರ್ನಾಟಕ ಮುಸ್ಲಿಂ ಜಮಾಅತ್ ಮಂಗಳೂರು ರೆನ್ ಅಧ್ಯಕ್ಷ ವಿಎ ಮುಹಮ್ಮದ್ ಸಖಾಫಿ ವಳವೂರು ಉದ್ಘಾಟಿಸಿದರು.
‘ಸಂಘ ಶಕ್ತಿ’ ವಿಷಯದಲ್ಲಿ ಬಶೀರ್ ಮದನಿ ಅಲ್ ಕಾಮಿಲ್ ಕುಳೂರು, ‘ನಮ್ಮ ಮುಂದಿನ ಹೆಜ್ಜೆ’ ವಿಷಯದಲ್ಲಿ ಯಾಕೀಬ್ ಸಅದಿ ಅಲ್ ಅಫ್ಳಲಿ, ‘ ಸಂಘಟನೆ ಮತ್ತು ಆರ್ಥಿಕತೆ’ ವಿಷಯದಲ್ಲಿ ಸಿಎಚ್ ಮುಹಮ್ಮದಲಿ ಸಖಾಫಿ ಅಶ್ಹರಿಯ್ಯಾ ತರಗತಿ ನಡೆಸಿದರು.
ಸುನ್ನಿ ಸಂಘಟನೆಗಳ ಪದಾಧಿಕಾರಿಗಳಾದ ಸತ್ತಾರ್ ಸಖಾಫಿ ಅಡ್ಯಾರ್ ಪದವು, ಮುಹಮ್ಮದ್ ಅಶ್ರಫ್ ಫಾಳಿಲಿ ಅಮ್ಮೆಮ್ಮಾರ್, ಅಬ್ದುಲ್ ರಹಿಮಾನ್, ಬಿಎ ಅಬ್ದುಲ್ ಸಲೀಂ ಅಡ್ಯಾರ್, ಎಪಿ ಇಸ್ಮಾಯಿಲ್ ಅಡ್ಯಾರ್ ಪದವು ಮಾತನಾಡಿದರು.
ಕೆಎಚ್‌ಕೆ ಕರೀಂ ಹಾಜಿ ಅಡ್ಯಾರ್, ನವಾಝ್ ಸಖಾಫಿ ಅಡ್ಯಾರ್ ಪದವು, ಮನ್ಸೂರ್ ಮದನಿ ವಳವೂರು, ಅಹ್ಮದ್ ಬಶೀರ್ ಪಂಜಿಮೊಗರು, ಅಬ್ಬಾಸ್ ಹಾಜಿ ಬಿಜೈ, ಕೆಎಚ್ ಬಾವಾ ಕಾವೂರು, ಇಕ್ಬಾಲ್ ವಳವೂರು, ಖಲಂದರ್ ಪಾಂಡೇಶ್ವರ, ಅಬ್ದುಲ್ ಹಮೀದ್ ಬೆಂಗರೆ, ಆದಂ ಸಲಾಂ ತುಂಬೆ, ಅಬ್ಬುಲ್ ಖಾದರ್ ಕಾವೂರು, ಉನೈಸ್ ಪೆರಿಮಾರ್, ಹಸನ್ ಪಾಂಡೇಶ್ವರ, ಜಬ್ಬಾರ್ ಕಣ್ಣೂರು, ಕೆಸಿ ಸುಲೈಮಾನ್ ಮುಸ್ಲಿಯಾರ್ ಉಪಸ್ಥಿತರಿದ್ದರು.
ಕೋ ಆರ್ಡಿನೇಶನ್ ಪ್ರಧಾನ ಕಾರ್ಯದರ್ಶಿ ಅಶ್ರಫ್ ಕಿನಾರ ಮಂಗಳೂರು ಸ್ವಾಗತಿಸಿದರು. ನಝೀರ್ ಲುಲು ವಳವೂರು ವಂದಿಸಿದರು.