ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಾತ್ಮಕ ವೀಡಿಯೊ ವೈರಲ್: ಯುವಕನ ವಿರುದ್ಧ FIR

ಬೆಳ್ತಂಗಡಿ: ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದನಾತ್ಮಕ ವೀಡಿಯೋ ಹರಿಯಬಿಟ್ಟ ಆರೋಪದಲ್ಲಿ ಯುವಕನೋರ್ವನ ವಿರುದ್ಧ ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿ ನಿವಾಸಿ ಧನುಷ್ ಸಿ. ಪಕ್ಕಳ ಎಂಬಾತ ಆರೋಪಿ.
ಧನುಷ್, ಸಮುದಾಯಗಳ ನಡುವೆ ಕೋಮುದ್ವೇಷ ಉಂಟಾಗಿ, ಕಾನೂನು ಸುವ್ಯವಸ್ಥೆ ಗೆ ಧಕ್ಕೆಯಾಗುವಂತಹ ಪ್ರಚೋದನಾತ್ಮಕ ವೀಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಆರೋಪದಲ್ಲಿ ಆತನ ವಿರುದ್ಧ ಅ.ಕ್ರ 30/2025 ಕಲಂ: 196(1) (A), 353(1)(C) BNS-2023 3 ರಂತೆ ಪ್ರಕರಣ ದಾಖಲಾಗಿದೆ ಎಂದು ಪುಂಜಾಲಕಟ್ಟೆ ಠಾಣೆಯ ಪೊಲೀಸರು ತಿಳಿಸಿದ್ದಾರೆ.
Next Story





