ಒಕ್ಕೆತ್ತೂರು ಮಸೀದಿ, ಮದರಸ ವತಿಯಿಂದ ಮಾದಕ ದ್ರವ್ಯದ ವಿರುದ್ಧ ಜನಜಾಗೃತಿ ಜಾಥಾ

ವಿಟ್ಲ : ವಿಟ್ಲ ಸಮೀಪದ ಒಕ್ಕೆತ್ತೂರು ಬದ್ರಿಯಾ ಜುಮಾ ಮಸೀದಿ ಹಾಗೂ ನೂರುಲ್ ಇಸ್ಲಾಂ ಸೆಕೆಂಡರಿ ಮದರಸ ಇದರ ವತಿಯಿಂದ ಮಾದಕ ದ್ರವ್ಯದ ವಿರುದ್ಧ ಜನಜಾಗೃತಿ ಜಾಥಾ ಹಾಗೂ ಸಭೆ ನಡೆಯಿತು. ಈ ಸಂದರ್ಭ ಒಕ್ಕೆತ್ತೂರು ಮಸೀದಿ ಆವರಣದಿಂದ ಮೆರವಣಿಗೆ ಹೊರಟು ಒಕ್ಕೆತ್ತೂರು ಜಂಕ್ಷನ್ ನಲ್ಲಿ ಸಮಾರೋಪ ಸಮಾರಂಭ ನಡೆಯಿತು.
ಮುಖ್ಯ ಭಾಷಣಗಾರಾದ ಮಹಮ್ಮದ್ ಶಹೀರ್ ಸಖಾಫಿ ಸಾಲೆತ್ತೂರು ಅವರು ಮಾದಕ ದ್ರವ್ಯಗಳ ಬಳಕೆಯ ದುಷ್ಪರಿಣಾಮಗಳ ಬಗ್ಗೆ ವಿವರಿಸಿ ಮಾದಕ ದ್ರವ್ಯ ಮುಕ್ತ ಸಮಾಜಕ್ಕಾಗಿ ಎಲ್ಲರೂ ಪಣತೊಡಬೇಕೆಂದು ಹೇಳಿದರು.
ಒಕ್ಕೆತ್ತೂರು ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಹಾಜಿ ವಿ.ಎಂ. ಅಶ್ರಫ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಖತೀಬ್ ಮಹಮ್ಮದ್ ರಫೀಕ್ ಅಹ್ಸನಿ ಉದ್ಘಾಟಿಸಿದರು. ವಿಟ್ಲ ಡಿ" ಗ್ರೂಪ್ ಸಂಘಟನೆಯ ಅಧ್ಯಕ್ಷ ಶಾಕಿರ್ ಅಳಕೆಮಜಲು ಹಾಗೂ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಅಬೂಬಕರ್ ಅನಿಲಕಟ್ಟೆ, ವಿಟ್ಲ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ನಾಗರಾಜ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಇದೇ ಸಂದರ್ಭ ಸುನ್ನೀ ಜಮೀಯತುಲ್ ಮುಅಲ್ಲಿಮೀನ್ ರಾಜ್ಯ ಸಮಿತಿ ನಿರ್ದೇಶನದಂತೆ ಮದರಸ ವಿದ್ಯಾರ್ಥಿಗಳಿಂದ ಏಕದಿನ ವಿದ್ಯಾರ್ಥಿ ಸಂಗಮ "ಮುಲ್ತಖತ್ತುಲಬ' ನಡೆಯಿತು.
ಸ್ವಾದಿಕ್ ಸಖಾಫಿ ಸದರ್ ಉಸ್ತಾದ್ ಸ್ವಾದಿಕ್ ಸಖಾಫಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.







