ಪುತ್ತೂರು: ಉದ್ಯಮಿ ಅಬ್ದುಲ್ಲಾ ಹಾಜಿ ನಿಧನ

ಪುತ್ತೂರು: ನಗರದ ಎಪಿಎಂಸ ಸಮೀಪದ ನಿವಾಸಿ, ಹೆಸರಾಂತ ಅಡಿಕೆ ವ್ಯಾಪಾರಿ ಯು.ಅಬ್ದುಲ್ಲಾ ಹಾಜಿ (ಅದ್ದು ಹಾಜಿ) ಶನಿವಾರ ಮಂಗಳೂರಿನ ಪಡೀಲ್ ನಲ್ಲಿರುವ ತನ್ನ ಮನೆಯಲ್ಲಿ ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು. ಅವರಿಗೆ 72 ವರ್ಷ ವಯಸ್ಸಾಗಿತ್ತು.
ಅವರು ಪುತ್ತೂರಿನ ಕೇಂದ್ರ ಜುಮಾ ಮಸೀದಿಯ ಅನ್ಸಾರುದ್ದೀನ್ ಜಮಾಅತ್ ಕಮಿಟಿಯ ಸದಸ್ಯರಾಗಿ, ಮೌಂಟನ್ ವೀವ್ ಶಾಲೆಯ ಸಂಚಾಲಕರಾಗಿ, ಸಾಲ್ಮರ ಸೈಯದ್ ಮಲೆ ಜುಮಾ ಮಸೀದಿಯ ಅಧ್ಯಕ್ಷರಾಗಿಯೂ, ಮಸ್ಟಿದುಲ್ ಮಜೀದ್ ಮಸೀದಿಯ ಗೌರವಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ಮೃತರು ಇಬ್ಬರು ಪುತ್ರರು, ಮೂವರು ಪುತ್ರಿಯರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
Next Story





