Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ಪುತ್ತೂರು ತಾಲ್ಲೂಕು ಪಂಚಾಯತ್...

ಪುತ್ತೂರು ತಾಲ್ಲೂಕು ಪಂಚಾಯತ್ ಸಿಬ್ಬಂದಿಗೆ ಆನ್‌ಲೈನ್‌ ವಂಚನೆ: ದೂರು ದಾಖಲು

ವಾರ್ತಾಭಾರತಿವಾರ್ತಾಭಾರತಿ4 Sept 2024 10:08 PM IST
share
ಪುತ್ತೂರು ತಾಲ್ಲೂಕು ಪಂಚಾಯತ್ ಸಿಬ್ಬಂದಿಗೆ ಆನ್‌ಲೈನ್‌ ವಂಚನೆ: ದೂರು ದಾಖಲು

ಪುತ್ತೂರು: ಫೇಸ್‌ಬುಕ್‌ವೊಂದರಲ್ಲಿ ತನ್ನ ಸಂಬಂಧಿಕರ ಹೆಸರಿನಲ್ಲಿ ಬಂದ ಸಂದೇಶ ಅಸಲಿಯೆಂದು ನಂಬಿ ವ್ಯವಹಾರ ಮುಂದುವರಿಸಿದ ಪುತ್ತೂರು ತಾ.ಪಂ. ಸಿಬ್ಬಂದಿ ಭರತ್‌ರಾಜ್‌ 10 ಸಾವಿರ ರೂ. ಕಳೆದುಕೊಂಡಿರುವ ಬಗ್ಗೆ ವರದಿಯಾಗಿದೆ.

ಪೆರ್ಲಂಪಾಡಿ ನಿವಾಸಿ ಭರತ್‌ ರಾಜ್‌ ಅವರಿಗೆ ಕೆಲವು ದಿನಗಳ ಹಿಂದೆ ರಾಧಾಕೃಷ್ಣ ಎಂಬ ಹೆಸರಿನಲ್ಲಿ ಫೇಸ್‌ಬುಕ್ ರಿಕ್ವೆಸ್ಟ್ ಬಂದಿತ್ತು. ಫೇಸ್‌ಬುಕ್ ಪ್ರೊಫೈಲ್‌ನಲ್ಲಿದ್ದ ಫೋಟೊ ರಾಧಾಕೃಷ್ಣ ಅವರು ದೂರದ ಸಂಬಂಧಿ ಆಗಿದ್ದ ಕಾರಣ ಫ್ರೆಂಡ್ ರಿಕ್ವೆಸ್ಟ್‌ಗೆ ಒಪ್ಪಿಗೆ ಸೂಚಿಸಿದ್ದರು. ಆ.31ರಂದು ರಾಧಾಕೃಷ್ಣ ಅವರು ಮೆಸೇಂಜ‌ರ್ ಮೂಲಕ ಭರತ್‌ರಾಜ್‌ಗೆ ಬೆಂಗಳೂರಿನಲ್ಲಿ ಸಿಆರ್‌ಪಿ ಯೋಧನಾಗಿರುವ ನನ್ನ ಮಿತ್ರನಿಗೆ ಜಮ್ಮು ಕಾಶ್ಮೀರಕ್ಕೆ ವರ್ಗಾವಣೆ ಆಗಿದೆ. ಅವರ ಮನೆಯಲ್ಲಿರುವ ಗೃಹಯೋಪಯೋಗಿ ವಸ್ತುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂದು ಆಂಗ್ಲ ಭಾಷೆಯಲ್ಲಿ ಸಂದೇಶ ಕಳುಹಿಸಿದ್ದರು. ಇದಕ್ಕೆ ಒಕೆ ಎಂದಿದ್ದಕ್ಕೆ ನಿಮ್ಮ ನಂಬ‌ರ್ ಕಳುಹಿಸುವಂತೆ ಸೂಚಿಸಿದ್ದರು. ಭರತ್‌ರಾಜ್ ತನ್ನ ನಂಬರ್ ಕಳುಹಿಸಿದ್ದರು. ಸೆ.1ರಂದು ಅಪರಿಚಿತ ಕರೆ ಬಂದಾಗ ಅದನ್ನು ಸ್ವೀಕರಿಸದ ಭರತ್‌ರಾಜ್ ಅವರಿಗೆ ವಾಟ್ಸಪ್ ಸಂದೇಶದ ಮೂಲಕ ತಾನು ಯೋಧ ಸಂತೋಷ್ ಎಂದು ಪರಿಚಯಿಸಿದಲ್ಲದೆ ರಾಧಾಕೃಷ್ಣ ಅವರು ನಂಬರ್‌ ಕೊಟ್ಟಿದ್ದಾರೆ ಎಂದಿದ್ದರು. ಬಳಿಕ ಕರೆ ಮಾಡಿ ಇನ್‌ವರ್ಟರ್, ಡೈನಿಂಗ್ ಟೇಬಲ್, ಮಂಚ, ಎ.ಸಿ., ಟಿ.ವಿ., ಪ್ರಿಡ್ಜ್, ವಾಶಿಂಗ್‌ಮಿಶನ್ ಮೊದಲಾದ ವಸ್ತುಗಳಿದ್ದು ರೂ.95 ಸಾವಿರಕ್ಕೆ ನೀಡುವುದಾಗಿ ತಿಳಿಸಿದ್ದು, ಜತೆಗೆ ಸಾಮಗ್ರಿಗಳ ಫೋಟೋ ಅನ್ನು ಕಳುಹಿಸಿದ್ದರು. ಇದನ್ನು ನಂಬಿದ ಭರತ್‌ರಾಜ್ ಅವರು ಖರೀದಿಸಲು ಸಮ್ಮತಿ ಸೂಚಿಸುತ್ತಾರೆ.

ಸಂತೋಷ್ ಎಂದು ಪರಿಚಯಿಸಿದ ವ್ಯಕ್ತಿ ರೂ. 95ಸಾವಿರ ಕಳುಹಿಸುವಂತೆ ಕರೆ ಮಾಡುತ್ತಾರೆ. ಆದರೆ ಅಷ್ಟು ಹಣ ಇಲ್ಲ ಎಂದು ರೂ. 10 ಸಾವಿರ ಕಳುಹಿಸುವೆ ಎಂದು ಭರತ್ ಹೇಳುತ್ತಾರೆ. ಫೋನ್ ಪೇ ಅಥವಾ ಗೂಗಲ್ ಪೇ ಯಾವುದು ಎಂದು ಸಂತೋಷ್ ವಿಚಾರಿಸಿದ್ದಾನೆ. ಆಗ ಭರತ್ ಫೋನ್ ಪೇ ಎಂದಿದ್ದಾರೆ. ತತ್‌ಕ್ಷಣ ಅತ್ತ ಕಡೆಯಿಂದ ಹಣ ಕಳುಹಿಸಬೇಕಾದ ದೂರವಾಣಿ ಸಂಖ್ಯೆಯನ್ನು ಹೇಳಿದ್ದು, ಈ ನಂಬರ್‌ನಲ್ಲಿ ಬಾಬುಲಾಲ್ ಎಂಬ ಹೆಸರು ಡಿಸ್‌ಪ್ಲೇ ಆಗುತ್ತಿದ್ದು, ಭರತ್‌ರಾಜ್ ಅವರು ತನ್ನ ಅಕೌಂಟ್‌ನಲ್ಲಿ ಹಣ ಇಲ್ಲದ ಕಾರಣ ತಂದೆ ಬಾಲಕೃಷ್ಣ ಅವರ ಬ್ಯಾಂಕ್ ಖಾತೆಯಿಂದ ರೂ.10 ಸಾವಿರ ಕಳುಹಿಸಿದ್ದಾರೆ. ಹಣ ಸಂದಾಯದ ಬಳಿಕ ಸ್ಟ್ರೀನ್ ಶಾಟ್ ಕಳುಹಿಸುವಂತೆ ಆತ ಹೇಳಿದಂತೆ ಎಲ್ಲ ಪ್ರಕ್ರಿಯೆ ಆಗಿ ಬಾಬು ಲಾಲ್ ಹೆಸರಿಗೆ ಹಣ ಸಂದಾಯ ಆಗಿರುವುದನ್ನು ಖಚಿತ ಪಡಿಸಿದ ಬಳಿಕ ಸಂತೋಷ್ ಕರೆ ಕಟ್ ಮಾಡುತ್ತಾರೆ.

ಇದಾದ ಹತ್ತೇ ನಿಮಿಷದಲ್ಲಿ ಸಿಆರ್‌ಪಿ ಇಲಾಖೆಯ ವಾಹನದಲ್ಲೇ ಗೃಹೋಪಯೋಗಿ ವಸ್ತುಗಳನ್ನು ಕಳುಹಿಸಲಾಗುತ್ತಿದೆ ಎಂದು ಸಂತೋಷ್ ಫೋಟೋ ಸಹಿತ ಸಂದೇಶ ಕಳುಹಿಸುತ್ತಾನೆ. ಫೋಟೋ ನೋಡುವಾಗ ಭರತ್‌ಗೆ ಅನುಮಾನ ಮೂಡುತ್ತದೆ. ಇದಾದ ಕೆಲವು ನಿಮಿಷಗಳಲ್ಲಿ ಪದೇಪದೆ ಕರೆ ಮಾಡಿ ಉಳಿದ ಹಣ ಯಾವಾಗ ಹಾಕುತ್ತೀರಿ ಎಂದು ಆತ ಪ್ರಶ್ನೆ ಮಾಡುತ್ತಾನೆ. ಪೇಟೆಗೆ ಹೋಗಿ ಹಾಕುವೆ ಎಂದಾಗ ಮತ್ತೆ ಮತ್ತೆ ಕರೆ ಮಾಡುತ್ತಿರುತ್ತಾನೆ. ಈ ವೇಳೆ ಇದು ಮೋಸದ ಜಾಲ ಎನ್ನುವ ಸಂಶಯ ಭರತ್‌ರಾಜ್ ಗೆ ಮೂಡಿದೆ.

ತನಗೆ ಮೆಸೇಂಜರ್‌ನಲ್ಲಿ ಸಂದೇಶ ಕಳುಹಿಸಿದ ರಾಧಾಕೃಷ್ಣ ಖಾತೆಯನ್ನು ಪರಿಶೀಲಿಸಿ ಬಳಿಕ ತನ್ನ ಸಂಬಂಧಿಕರ ಮೂಲಕ ಭರತ್‌ರಾಜ್‌ ಅವರು ರಾಧಾಕೃಷ್ಣ ಅವರ ನಂಬ‌ರ್ ಪಡೆದು. ರಾಧಾಕೃಷ್ಣ ಅವರಿಗೆ ಕರೆ ಮಾಡಿದ ಸಂದರ್ಭ ಇದು ನಕಲಿ ಫೇಸ್‌ಬುಕ್ ಖಾತೆ ಅನ್ನುವ ಅಂಶ ತಿಳಿದು ಬರುತ್ತದೆ. ಕೆಲವು ದಿನಗಳಿಂದ ತನ್ನ ಹೆಸರಿನಲ್ಲಿ ನಕಲಿ ಸೃಷ್ಟಿಯಾಗಿದ್ದು, ಈ ಬಗ್ಗೆ ಬೆಂಗಳೂರಿನಲ್ಲಿ ದೂರು ನೀಡಿರುವ ಬಗ್ಗೆ ಅವರು ಹೇಳುತ್ತಾರೆ. ಹೀಗಾಗಿ ಭರತ್‌ರಾಜ್ ತಾನು ಮೋಸ ಹೋದದ್ದು ಅರಿವಿಗೆ ಬಂದು ಸೈಬ‌ರ್ ಕ್ರೈಂನಲ್ಲಿ ದೂರು ನೀಡಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X