ಪುತ್ತೂರು: ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ಶೋರೂಂನಲ್ಲಿ ವ್ರಜಾಭರಣ ಪ್ರದರ್ಶನ

ಪುತ್ತೂರು: ಆಭರಣಗಳ ಉತ್ತಮ ಸಂಗ್ರಹವನ್ನು ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ಹೊಂದಿದೆ. ಡೈಮಂಡ್ಸ್ ಸಂಗ್ರಹ ಮೈನವಿರೇಳಿಸುವಂತೆ ಮಾಡುತ್ತದೆ. ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ಲಭಿಸುವಂತಾಗಲಿ ಎಂದು ತುಳು ಚಿತ್ರ ನಟಿ ಧನ್ಯಾ ಪೂಜಾರಿ ಹೇಳಿದರು.
ಪುತ್ತೂರು ಏಳ್ಮುಡಿಯ ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ಶೋರೂಂನಲ್ಲಿ ದಕ್ಷಿಣ ಭಾರತದ ಪ್ರೀಮಿಯರ್ ವ್ರಜಾಭರಣ ಪ್ರದರ್ಶನ ವಿಶ್ವ ವಜ್ರ ಡೈಮಂಡ್ ಎಕ್ಸಿಬ್ಯುಷನ್ ಉದ್ಘಾಟಿಸಿ, ವಿವಿಧ ನಮೂನೆಯ ಆಭರಣಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.
ಹೆಲ್ತ್ ಆ್ಯಂಡ್ ಸ್ಯಾನಿಟರಿ ಇನ್ಪೆಕ್ಟರ್ ಆಯಿಶಾ ಪೆರ್ನೆ ಮಾತನಾಡಿ ಹೊಸ ಹೊಸ ಆಭರಣಗಳನ್ನು ಸುಲ್ತಾನ್ ಪರಿಚಯಿಸುತ್ತಿದೆ. ನಿತ್ಯ ಬಳಕೆಯ ಸಂಗ್ರಹವನ್ನು ಗ್ರಾಹಕರಿಗೆ ನೀಡುತ್ತಿದೆ. ಮೊದಲು ಸುಲ್ತಾನ್ ಗಾಗಿ ಮಂಗಳೂರಿಗೆ ಹೋಗಬೇಕಾಗಿದ್ದು, ಈಗ ಪುತ್ತೂರಿನಲ್ಲಿರುವುದು ಸಂತಸದ ವಿಚಾರ ಎಂದರು.
ಮುಸ್ಲಿಂ ಸಂಯುಕ್ತ ಜನರಲ್ ಸೆಕ್ರೆಟರಿ ಎಲ್. ಟಿ. ರಝಾಕ್ ಹಾಜಿ, ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯೆ ಸಾರಾ ಪರ್ಲಡ್ಕ, ದರ್ಬೆ ಗ್ಲಾಮ್ ಸ್ಟುಡಿಯೋದ ದಿವ್ಯಾ ಸಂತೋಷ್ ರೈ, ಲಸ್ರಾದೋ ಮೆಟಲ್ ಮಾರ್ಟ್ ಜಸಿಂತಾ ಫೆರ್ನಾಂಡೀಸ್, ಬ್ರ್ಯಾಂಚ್ ಮ್ಯಾನೇಜರ್ ಬಾಬು, ಮ್ಯಾನೇಜರ್ ರಹಾವತ್, ಮಾರ್ಕೆಟಿಂಗ್ ಮ್ಯಾನೇಜರ್ ಹಮ್ರಾಝ್, ಮ್ಯಾನೇಜರ್ ಸಾಧಿಕ್ ಉಪಸ್ಥಿತರಿದ್ದರು. ಶ್ರೀಮಾ ಕಾರ್ಯಕ್ರಮ ನಿರೂಪಿಸಿದರು.
ವಜ್ರ ಆಭರಣದ ಸಂಗ್ರಹ
ವಿಶ್ವ ವಜ್ರ ಕಾರ್ಯಕ್ರಮದಲ್ಲಿ ಯು.ಎಸ್., ಬೆಲ್ಜಿಯಂ, ಟ್ರೆಡಿಷನಲ್, ಟರ್ಕಿ, ಮಿಡಲ್ ಈಸ್ಟ್, ಪ್ರೆಂಚ್, ಇಟಲಿ, ಪ್ರಾನ್ಸ್, ಸಿಂಗಾಪುರ ದ ಪ್ರಮಾಣೀಕೃತ ವಜ್ರದ ಆಭರಣ ಸಂಗ್ರಹಗಳನ್ನು ಪ್ರದರ್ಶಿಸಲಾಗುತ್ತಿದೆ. ಸೆ.5ರವರೆಗೆ ಡೈಮಂಡ್ ಕ್ಯಾರೆಂಟ್ ಗೆ ಪ್ಲಾಟ್ 8ಸಾವಿರ ರಿಯಾಯಿತಿಯನ್ನು ಪಡೆಯಬಹುದಾಗಿದೆ.
ವಿವಿಧ ವಿನ್ಯಾಸ:
ಸಾಲಿಟೇರ್ ಕಲೆಕ್ಷನ್, ಸಾಂಪ್ರದಾಯಿಕ ಕ್ಲೋಸ್ ಸೆಟ್ಟಿಂಗ್ ಸಂಗ್ರಹ, ತನ್ಮಾನಿಯಾ ಸಂಗ್ರಹಗಳು, ವಧುವಿನ ವಜ್ರ ಆಭರಣ ಸಂಗ್ರಹಗಳು, ಕತ್ತರಿಸದ ವಜ್ರಗಳು ಮತ್ತು ರೂಬಿ ಎಮರಾಲ್ಡ್ ರತ್ನದ ಸಂಗ್ರಹಗಳಿದೆ. ಕೈಗೆಟಕುವ ದೈನಂದಿನ ಉಡುಗೆ ವಜ್ರದ ಸಂಗ್ರಹವನ್ನು ಹೊಂದಿದೆ. ಲೈಟ್ ವೈಟ್ ಡೈಮಂಡ್ ನೆಕ್ಲೇಸ್ ಗಳು, ಲೈಟ್ ವೇಟ್ ಡೈಮಂಡ್ ಬ್ಯಾಂಗಲ್, ಡೈಮಂಡ್ ರಿಂಗ್ ಗಳು ಲೈಟ್ ವೇಟ್ ಸಂಗ್ರಹಗಳಲ್ಲಿ ಲಭ್ಯವಿದೆ.







