ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ತ್ವರಿತ ನೀರಿನ ವ್ಯವಸ್ಥೆ

ಮಂಗಳೂರು, ನ.13: ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ತ್ವರಿತವಾಗಿ ನೀರು ಪೂರೈಕೆ ನಿಟ್ಟಿನಲ್ಲಿ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಈ ಮೊದಲು ಮಂಗಳೂರು ಜಂಕ್ಷನ್ ನಿಲ್ದಾಣದಲ್ಲಿ ಹಾದುಹೋಗುವ ರೈಲುಗಳ ಕೋಚ್‌ಗಳಿಗೆ ಕೇವಲ 8- 10 ನಿಮಿಷಗಳಲ್ಲಿ ನೀರು ತುಂಬಬಹುದಾಗಿದೆ.
ಹಿಂದೆ ಸರಿಸುಮಾರು 15 ರಿಂದ 20 ನಿಮಿಷಗಳನ್ನು ತೆಗೆದುಕೊಳ್ಳುತ್ತಿತ್ತು, ಆದರೆ ರೈಲುಗಳು ಕೇವಲ 8 ರಿಂದ 10 ನಿಮಿಷಗಳ ನಿಗದಿತ ನಿಲುಗಡೆ ಸಮಯವನ್ನು ಹೊಂದಿದ್ದವು. ಇದರಿಂದಾಗಿ ರೈಲಿನಲ್ಲಿ ನೀರಿನ ಅಲಭ್ಯತೆಯ ಬಗ್ಗೆ ಹಲ ವಾರು ದೂರುಗಳು ಬಂದವು.
ಯೋಜನೆಯ ಬಗ್ಗೆ : ನೀರು ಪೂರೈಕೆ ಸಮಸ್ಯೆಯನ್ನು ಬಗೆಹರಿಸಲು, ಸಂಶೋಧನೆ ಮತ್ತು ವಿನ್ಯಾಸ ಗುಣಮಟ್ಟ ಸಂಸ್ಥೆ (ಆರ್‌ಡಿಎಸ್‌ಒ ) ಸಿಎಎಂಟಿಇಸಿಎಚ್ (ಸೆಂಟರ್ ಫಾರ್ ಅಡ್ವಾನ್ಸ್‌ಡ್ ಮೆಂಟೆನೆನ್ಸ್ ಟೆಕ್ನಾಲಜಿ) ಇದರ ಗ್ವಾಲಿಯರ್ ಘಟ ಕವು ಕ್ವಿಕ್ ವಾಟರ್ರಿಂಗ್ ಸಿಸ್ಟಮ್‌ನ್ನು ಪರಿಚಯಿಸಿತು. ಸೆ. 20 ನೇ 2023 ರಂದು ಸ್ಥಾಪಿಸಲಾಯಿತು. ಈ ನೂತನ ವ್ಯವಸ್ಥೆ ಯಲ್ಲಿ ಸಾಂಪ್ರದಾಯಿಕ ನಾಲ್ಕು ಇಂಚಿನ ಪೈಪ್‌ಗಳ ಬದಲಿಗೆ ಆರು ಇಂಚು ವ್ಯಾಸದ ಪೈಪ್‌ಗಳು. ಶಕ್ತಿ ಶಾಲಿ ಯಾದ ಮೋಟಾರುಗಳು, ನೀರಿನ ಸರಬರಾಜನ್ನು ಸಮರ್ಥವಾಗಿ ನಿರ್ವಹಿಸಲು ಸೂಪರ್‌ವೈಸರಿ ಕಂಟ್ರೋಲ್ ಮತ್ತು ಡೇಟಾ ಅಕ್ವಿಸಿಷನ್ (ಎಸ್‌ಸಿಎಡಿಎ) ಗಣಕೀಕೃತ ವ್ಯವಸ್ಥೆ ಇರುತ್ತದೆ.
ಹೊಸ ವ್ಯವಸ್ಥೆಯ ಅನುಕೂಲಗಳು: ತ್ವರಿತ ನೀರಿನ ವ್ಯವಸ್ಥೆಯು ಸಾಂಪ್ರದಾಯಿಕ ವ್ಯವಸ್ಥೆಗಿಂತ ಉತ್ತಮವಾಗಿದ್ದು, ಕೇವಲ 8-10 ನಿಮಿಷಗಳಲ್ಲಿ ರೆಲಿನ ಎಲ್ಲಾಕೋಚ್‌ಗಳನ್ನು ನೀರಿನಿಂದ ತುಂಬಿಸಬಹುದು, ಈ ಹಿಂದೆ ನೀರು ತುಂಬಿಸಲು 15 ರಿಂದ 20 ನಿಮಿಷ ಕಾಯಬೇಕಾಗಿತ್ತು. ಇದೀಗ ಗಮನಾರ್ಹ ಸುಧಾರಣೆಯಾಗಿದೆ. ಇದು ನೀರಿನ ಒತ್ತಡ ಅಥವಾ ನಿಗದಿತ ಸಮಯಕ್ಕೆ ಧಕ್ಕೆಯಾಗದಂತೆ ಏಕಕಾಲದಲ್ಲಿ ರೈಲುಗಳಿಗೆ ನೀರನ್ನು ಒದಗಿಸಲಾಗುತ್ತದೆ ಎಂದು ಪ್ರಕಟನೆ ತಿಳಿಸಿದೆ.







