ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಿ.ಎಚ್. ಖಾದರ್ ರಿಗೆ ಜಮೀಯ್ಯತುಲ್ ಫಲಾಹ್ ವತಿಯಿಂದ ಸನ್ಮಾನ

ಬಂಟ್ವಾಳ : ಹಿರಿಯ ಸಾಮಾಜಿಕ ರಾಜಕೀಯ ಮುಂದಾಳು ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಹಾಜಿ ಬಿ.ಎಚ್ ಖಾದರ್ ಅವರು ಈ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾಗಿದ್ದು ಅವರನ್ನು ಜಮೀಯ್ಯತುಲ್ ಫಲಾಹ್ ಬಂಟ್ವಾಳ ಘಟಕದ ವತಿಯಿಂದ ಬಂಟ್ವಾಳದ ಬಿ.ಎಚ್ ಖಾದರ್ ಅವರ ನಿವಾಸದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಅಭಿನಂದಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಅಭಿನಂದನಾ ಭಾಷಣ ಮಾಡಿದ ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ, ಬಂಟ್ವಾಳ ಹಮ್ಮಬ್ಬ ಖಾದರ್ ಅವರು ತಮ್ಮ ತಂದೆಯಿಂದ ಬಳುವಳಿಯಾಗಿ ಬಂದ ವ್ಯವಹಾರವನ್ನು ಮುನ್ನಡೆಸುತ್ತಾ ಬದುಕು ಕಟ್ಟಿಕೊಂಡವರು, 1974 ರಲ್ಲಿ ನೇತ್ರಾವತಿಯಲ್ಲಿ ಬಂದ ದೊಡ್ಡ ಪ್ರವಾಹದ ನಂತರ ತನ್ನ ವ್ಯವಹಾರವನ್ನು ಕಳೆದುಕೊಂಡು ಸಾಮಾಜಿಕ, ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು. ಹಿರಿಯ ರಾಜಕಾರಣಿ ಶಿವರಾಮ ಶೆಟ್ಟರ ಪ್ರಭಾವದಿಂದ ರಾಜಕೀಯ ಪ್ರವೇಶಿಸಿ ವಿವಿಧ ಹುದ್ದೆಗಳನ್ನು ಅಲಂಕರಿಸಿದರು. ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿವಿಧ ಮಂಡಳಿ, ಸಮಿತಿ , ನಿಗಮಗಳ ಜವಾಬ್ದಾರಿಯುತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿರುತ್ತಾರೆ. ಶೈಕ್ಷಣಿಕ , ಸಾಮಾಜಿಕ ಸುಧಾರಣೆಗಳಿಗೆ ಪ್ರೇರಣಾದಾಯಕರಾಗಿ ಸೇವೆಗೈದ ನಿರಾಡಂಬರದ ಬಿ.ಎಚ್.ಖಾದರ್ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಬಂದಿರುವುದು ಹೆಮ್ಮೆಯ ವಿಚಾರ ಎಂದು ಹೇಳಿದರು.
ಸನ್ಮಾನವನ್ನು ಸ್ವೀಕರಿಸಿದ ಬಿ.ಎಚ್.ಖಾದರ್ ಮಾತನಾಡಿ, ಬದುಕಿನ ಬೇರೆ ಬೇರೆ ಮಜಲುಗಳಲ್ಲಿ ಕಾರ್ಯಾ ನಿರ್ವಹಿಸುವ ಅವಕಾಶ ಸಿಕ್ಕಿದಾಗ ಜನರಿಗೆ ಪ್ರಾಮಣಿಕ ಸೇವೆ ಸಲ್ಲಿಸಿದ ಪ್ರತೀಕವಾಗಿ ಈ ಪ್ರಶಸ್ತಿ ಬಂದಿದ್ದು ಜಮೀಯ್ಯತುಲ್ ಫಲಾಹ್ ಸಂಸ್ಥೆಯ ಪ್ರೀತಿ ಗೌರವಾದರಗಳಿಗೆ ಋಣಿಯಾಗಿದ್ದೇನೆ ಎಂದರು.
ಜಮೀಯ್ಯತುಲ್ ಫಲಾಹ್ ಬಂಟ್ವಾಳ ಘಟಕಾಧ್ಯಕ್ಷ ಬಿ.ಎಂ.ಅಬ್ಬಾಸ್ ಅಲಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಜಿಲ್ಲಾಧ್ಯಕ್ಷ ಮೊಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು ಶುಭ ಹಾರೈಸಿದರು.
ಸಂಸ್ಥೆಯ ಕಾರ್ಯಕಾರಿ ಸಮಿತಿ ಸದಸ್ಯರಾದ ಶೇಕ್ ರಹ್ಮತುಲ್ಲಾ ಕಾವಳಕಟ್ಟೆ, ಪಿ.ಮೊಹಮ್ಮದ್ ಪಾಣೆಮಂಗಳೂರು, ಎನ್. ಮೊಹಮ್ಮದ್ ನಾರಂಗೋಡಿ, ಮೊಹಮ್ಮದ್ ಸಾಗರ್ ಮಿತ್ತಬೈಲ್, ಪ್ರಮುಖರಾದ ಹಾರೂನ್ ರಶೀದ್ ಬಂಟ್ವಾಳ, ಸವಾಝ್ ಬಂಟ್ವಾಳ, ಇಫಾಝ್ ಬಂಟ್ವಾಳ, ಅನ್ವರ್ ಕರೋಪಾಡಿ, ಎ.ಕೆ.ಮಹಮ್ಮದ್, ರಿಯಾಝ್ ಕೆ, ಅಹ್ಮದ್ ಶಾಫಿ, ಅಬ್ಬಾಸ್ ಹಾಗೂ ಬಿ.ಎಚ್ ಖಾದರ್ ಅವರ ಕುಟುಂಬಸ್ಥರು ಉಪಸ್ಥಿತರಿದ್ದರು.
ಸಂಸ್ಥೆಯ ಕೋಶಾಧಿಕಾರಿ ಲತೀಫ್ ನೇರಳಕಟ್ಟೆ ಸ್ವಾಗತಿಸಿ ಕಾರ್ಯದರ್ಶಿ ಅಬ್ದುಲ್ ಹಕೀಂ ಕಲಾಯಿ ವಂದಿಸಿದರು.







