ಜೆಇಇ ಮೈನ್, ಬಿ.ಆರ್ಕ್, ಕೆಸಿಇಟಿ ಪರೀಕ್ಷೆಯಲ್ಲಿ ಶಕ್ತಿ ಪ.ಪೂ. ಕಾಲೇಜಿನ ವಿದ್ಯಾರ್ಥಿಗಳಿಗೆ ರ‍್ಯಾಂಕ್

ಮಂಗಳೂರು ,ಮೇ 24: 2025ನೇ ಸಾಲಿನ ಎನ್ ಟಿ ಎ ಅಖಿಲ ಭಾರತ ಮಟ್ಟದಲ್ಲಿ ನಡೆಸಿರುವ ಜೆಇಇ ಮೈನ್ -2025 ಬಿ.ಆರ್ಕ್ ಪರೀಕ್ಷೆಯಲ್ಲಿ ಶಕ್ತಿ ಪದವಿ ಪ ಪೂ ಕಾಲೇಜಿನ ಅಭಿನ್ ಕೃಷ್ಣ ಪಿ.ಎಸ್. 2316 ರ್ಯಾಂಕ್ ಮತ್ತು ಹರ್ಷೆಂದ್ರ ದಿಗಂಬರ ನಾಕ್ 4085 ರ್ಯಾಂಕ್ ನೊಂದಿಗೆ ಅತ್ಯುತ್ತಮ ಫಲಿತಾಂಶವನ್ನು ಪಡೆದು ಅಖಿಲ ಭಾರತ ಮಟ್ಟದ ಪ್ರತಿಷ್ಟಿತ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಆರ್ಕಿಟೆಕ್ಚರ್ ಸೀಟಿಗೆ ಅರ್ಹತೆಯನ್ನು ಪಡೆದಿದ್ದಾರೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಕೆಸಿಇಟಿ (ಸಿಇಟಿ)-2025ರ ಪರೀಕ್ಷೆಯಲ್ಲಿ ರಾಜ್ಯದ ಒಟ್ಟು ಪರೀಕ್ಷೆ ಬರೆದಿರುವ 3,11,000 ವಿದ್ಯಾರ್ಥಿಗಳಲ್ಲಿ ಶಕ್ತಿ ಪದವಿ ಪೂರ್ವ ಕಾಲೇಜಿನ 13 ವಿದ್ಯಾರ್ಥಿಗಳು 8900 ಒಳಗಡೆಯ ರ್ಯಾಂಕ್‌ನ್ನು ಮತ್ತು 25 ವಿದ್ಯಾರ್ಥಿಗಳು 20,000 ಒಳಗಡೆಯ ರ್ಯಾಂಕನ್ನು ಪಡೆಯುವುದರ ಮೂಲಕ ಉತ್ತಮ ಸಾಧನೆಯನ್ನು ಮಾಡಿದ್ದಾರೆ.
ಶಕ್ತಿ ಪಪೂ ಕಾಲೇಜಿನ ವಿಜ್ಞಾನ ವಿಭಾಗದ ಅನುರಾಗ್ ಆರ್. ನಾಕ್ ಪಶು ವೈದ್ಯಕೀಯದಲ್ಲಿ ರಾಜ್ಯಕ್ಕೆ 236 ನೇ ರ್ಯಾಂಕ್ , ಅಶ್ವಥ್ ಅಜಿತ್ ಪೈ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನದಲ್ಲಿ 1408 ನೇ ರ್ಯಾಂಕ್,ಆದಿತ್ಯ ಬಿ.ಫಾರ್ಮ ದಲ್ಲಿ 3352ನೇ ರ್ಯಾಂಕ್, ಸಮುದ್ಯತಾ ಪಶು ವೈದ್ಯಕೀಯದಲ್ಲಿ 3713 ನೇ ರ್ಯಾಂಕ್, ತನುಜ್ ಇಂಜಿನಿಯರಿಂಗ್ ವಿಭಾಗದ ಸಿಇಟಿಯಲ್ಲಿ 4,416ನೇ ರ್ಯಾಂಕ್, ಅಭಿಜ್ಞಾ ಬಿ.ಎಸ್ಸಿ. ಕೃಷಿ ವಿಜ್ಞಾನ ವಿಭಾಗದಲ್ಲಿ 4,458ನೇ ರ್ಯಾಂಕ್, ಕರುಣ ವಿ ಹಿರೇಗೌಡರ್ ಪಶು ವೈದ್ಯಕೀಯದಲ್ಲಿ 4479 ನೇ ರ್ಯಾಂಕ್, ಅರ್ಪಿತಾ ಸಂತೋಷ್ ಕುಬಕಡ್ಡಿ ಬಿ.ಎಸ್ಸಿ. ಕೃಷಿ ವಿಜ್ಞಾನ ವಿಭಾಗದಲ್ಲಿ 4,701ನೇ ರ್ಯಾಂಕ್, ಹೃತ್ವಿಕ್ ಗೌಡ ಪಶು ವೈದ್ಯಕೀಯದಲ್ಲಿ 5714 ನೇ ರ್ಯಾಂಕ್, ನಾಗಾವರ್ಷಿನಿ ಕೆ.ಆರ್. ಬಿ.ಎಸ್ಸಿ. ಕೃಷಿ ವಿಜ್ಞಾನ ವಿಭಾಗದಲ್ಲಿ 7372ನೇ ರ್ಯಾಂಕ್,ಕಿಶನ್ ಗೌಡ ಇಂಜಿನಿಯರಿಂಗ್ ನಲ್ಲಿ 7751ನೇ ರ್ಯಾಂಕ್,ಮನ್ವಿತ್ ಕಾಂಚನ್ ಕೃಷಿ ವಿಜ್ಞಾನ ವಿಭಾಗದಲ್ಲಿ 8446ನೇ ರ್ಯಾಂಕ್, ರಕ್ಷಿತಾ ಎಲ್ ಪೈ ಇಂಜಿನಿಯರಿಂಗ್ ವಿಭಾಗದಲ್ಲಿ 8823ನೇ ರ್ಯಾಂಕ್ ಪಡೆದಿರುತ್ತಾರೆ.
ರ್ಯಾಂಕ್ ಗಳಿಸಿರುವ ಎಲ್ಲಾ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿಯ ಆಡಳಿತಾಧಿಕಾರಿ ಡಾ.ಕೆ.ಸಿ. ನಾಕ್, ಕಾರ್ಯದರ್ಶಿ ಸಂಜೀತ್ ನಾಕ್, ಪ್ರಧಾನ ಸಲಹೆಗಾರ ರಮೇಶ ಕೆ., ಶಕ್ತಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ವೆಂಕಟೇಶ ಮೂರ್ತಿ, ಶಕ್ತಿ ರೆಸಿಡೆನ್ಶಿಯಲ್ ಶಾಲೆ ಪ್ರಾಂಶುಪಾಲೆ ಬಬಿತಾ ಸೂರಜ್ ಅಭಿನಂದಿಸಿರುವುದಾಗಿ ಸಂಸ್ಥೆಯ ಪ್ರಕಟನೆ ತಿಳಿಸಿದೆ







