ಎಸ್.ಕೆ. ಎಸ್. ಎಮ್ ಮಂಗಳೂರು ವತಿಯಿಂದ ಧಾರ್ಮಿಕ ಪ್ರವಚನ ಕಾರ್ಯಕ್ರಮ
ಉಳ್ಳಾಲ: ಎಸ್.ಕೆ. ಎಸ್. ಎಮ್ ಮಂಗಳೂರು ಇದರ ಅಧೀನ ಸಂಸ್ಥೆಗಳಾದ SEB, SGM, SGM, SKSM YOUTH, KSF, MGM RIYADH ವತಿಯಿಂದ ಲರ್ನ್ ದಿ ಕುರ್'ಆನ್ 14ನೇ ಹಂತದ ಪರೀಕ್ಷಾ ವಿಜೇತರಿಗೆ ಬಹುಮಾನ ವಿತರಣೆ, ಪುಸ್ತಕ ಬಿಡುಗಡೆ ಮತ್ತು ಧಾರ್ಮಿಕ ಪ್ರವಚನ ಕಾರ್ಯಕ್ರಮ ಇಂದು ಸಂಜೆ ಉಳ್ಳಾಲ ಸಲ್‌ಸಬೀಲ್ ಮಸ್ಜಿದ್ ಗ್ರೌಂಡ್ ನಲ್ಲಿ ನಡೆಯಲಿದೆ.
ಸಾಯಂಕಾಲ 4:30 ರಿಂದ ಮಹಿಳಾ ಸಮಾವೇಶ ನಡೆಯಲಿದ್ದು, ಉಮ್ಮು ಅರ್ಶದ್ ರಿಯಾದ್, ಮುಝಾಹಿದಾ ಕಣ್ಣೂರ್, ಆಯಿಶಾ ನಈಮಃ ಅಸ್ಸಲ್ಮಿಯಾ ಚೊಕ್ಕಬೆಟ್ಟು ಇವರು ಪ್ರವಚನ ನೀಡಲಿದ್ದಾರೆ.
ಮಗ್ರಿಬ್ ನಮಾಝಿನ ಬಳಿಕ ಧಾರ್ಮಿಕ ಪ್ರವಚನ ಕಾರ್ಯಕ್ರಮ ನಡೆಯಲಿದ್ದು, ಅನ್ಸಾರ್ ನನ್ಮಂಡ (ಮಲಯಾಳ), ಮೌಲವಿ ಮುಸ್ತಫ ದಾರಿಮಿ, ರಫೀಕ್ ಮದನಿ ಸಾಸ್ತಾನ್, ಅಬೂ ಬಿಲಾಲ್ ಎಸ್. ಎಮ್, ಆತೀಶ್ ಕಣ್ಣೂರ್ ಬ್ಯಾರಿ ಭಾಷೆಯಲ್ಲಿ ಪ್ರವಚನ ನೀಡಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್. ಕೆ .ಎಸ್ .ಎಮ್.ಕೇಂದ್ರ ಸಮಿತಿಯ ಅಧ್ಯಕ್ಷರಾದ ಜನಾಬ್ ಬಶೀರ್ ಅಹ್ಮದ್ ಶಾಲಿಮಾರ್ ರವರು ವಹಿಸಲಿದ್ದಾರೆ ಕಾರ್ಯಕ್ರಮಕ್ಕೆ ಇತರ ಗಣ್ಯರು ಆಗಮಿಸಲಿದ್ದಾರೆ ಎಂದು ಆಯೋಜಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.







