ಬಂಟ್ವಾಳ | ತೌಹೀದ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗಣರಾಜ್ಯೋತ್ಸವ ಆಚರಣೆ

ಬಂಟ್ವಾಳ : ಇಲ್ಲಿನ ತೌಹೀದ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಆಡಳಿತ ಮಂಡಳಿ ಸದಸ್ಯ ಹಾರೂನ್ ರಶೀದ್ ಧ್ವಜಾರೋಹಣೆಗೈದು ಶಾಲಾ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಗಣರಾಜ್ಯೋತ್ಸವದ ಮಹತ್ವವನ್ನು ತಿಳಿಸಿಕೊಟ್ಟರು.
ಶಾಲಾ ಮುಖ್ಯ ಶಿಕ್ಷಕ ಸಲೀಂ ಪಿ. ಹಾಗೂ ಮದ್ರಸ ಮುಖ್ಯ ಶಿಕ್ಷಕ ಮಜೀದ್ ಫೈಝಿ, ಶಾಲಾಡಳಿತ ಮಂಡಳಿ ಸದಸ್ಯ ಉಬೈದುಲ್ಲಾ ಬಂಟ್ವಾಳ, ಸಹ ಶಿಕ್ಷಕಿಯರಾದ ನಾಗವೇಣಿ, ಅಶ್ವಿತಾ ಮತ್ತು ಬೋಧಕ ಹಾಗೂ ಬೋಧಕೇತರ ವೃಂದ ಹಾಗೂ ಪೋಷಕರು ಭಾಗವಹಿಸಿದ್ದರು.
ಆಯಿಷಾ ಸಿದ್ದೀಕ್ ಸ್ವಾಗತಿಸಿದರು, ಫಾತಿಮಾ ಶೈಮಾ ವಂದಿಸಿದರು. ಶಾನಿಫ ನಿರೂಪಿಸಿದರು
Next Story







