ಸೌಜನ್ಯ ಕೊಲೆ ಪ್ರಕರಣ: ಮರು ತನಿಖೆ ಆಗ್ರಹಿಸಿ ಮುಖ್ಯಮಂತ್ರಿಗೆ ಮನವಿ

ಬೆಳ್ತಂಗಡಿಯಲ್ಲಿ ನಡೆದ ಸೌಜನ್ಯ ಕೊಲೆ ಪ್ರಕರಣವನ್ನು ಮರು ತನಿಖೆ ನಡೆಸಬೇಕು, ನೈಜ ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿ ಸುಳ್ಯ ತಾಲೂಕು ಗೌಡರ ಯುವ ಸೇವಾ ಸಂಘದ ವತಿಯಿಂದ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.
ಸಂಘದ ಪದಾಧಿಕಾರಿಗಳು ವಾಹನ ಜಾಥಾದಲ್ಲಿ ಬಂದು ಮನವಿ ಸಲ್ಲಿಸಿದರು.ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಚಂದ್ರ ಕೋಲ್ಚಾರ್ ಮಾತನಾಡಿ ‘ಸೌಜನ್ಯ ಕೊಲೆ ಪ್ರಕರಣದ ಮರು ತನಿಖೆ ನಡೆಸಿ ನೈಜ ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು. ಆರು ತಿಂಗಳಲ್ಲಿ ತನಿಖೆ ಪೂರ್ತಿ ಮಾಡಿ ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದರು. ಡಾ.ಎನ್.ಎ.ಜ್ಞಾನೇಶ್ ಮನವಿಯನ್ನು ವಾಚಿಸಿದರು.
ಗೌಡರ ಯುವ ಸೇವಾ ಸಂಘದ ಕಾರ್ಯದರ್ಶಿ ಬೆಳ್ಯಪ್ಪ ಗೌಡ ಬಳ್ಳಡ್ಕ, ಉಪಾಧ್ಯಕ್ಷ ಕೂಸಪ್ಪ ಗೌಡ ಮುಗುಪ್ಪು, ಪ್ರಮುಖರಾದ ಪಿ.ಸಿ.ಜಯರಾಮ, ಕೆ.ಆರ್.ಗಂಗಾಧರ, ದಿನೇಶ್ ಮಡಪ್ಪಾಡಿ, ದೊಡ್ಡಣ್ಣ ಬರೆಮೇಲು, ಎ.ವಿ.ತೀರ್ಥರಾಮ, ಸದಾನಂದ ಮಾವಜಿ, ಮೋಹನ್ ರಾಮ್ ಸುಳ್ಳಿ, ಪಿ.ಎಸ್.ಗಂಗಾಧರ ರಾಕೇಶ್ ಕುಂಠಿಕಾನ, ಕೆ.ಆರ್.ಪದ್ಮನಾಭ, ದಾಮೋದರ ನಾರ್ಕೋಡು, ಕೆ.ಟಿ.ವಿಶ್ವನಾಥ, ಕಿರಣ್ ಬುಡ್ಲೆಗುತ್ತು, ಶ್ರೀಕಾಂತ್ ಮಾವಿನಕಟ್ಟೆ, ಪುಷ್ಪಾವತಿ ಮಾಣಿಬೆಟ್ಟು, ಪುಷ್ಪಾ ಮೇದಪ್ಪ, ಗೀತಾ ಶೇಖರ್, ಲತಾ ಕುದ್ಪಾಜೆ, ವಿನುತಾ ಪಾತಿಕಲ್ಲು, ವಾರಿಜಾ ಕುರುಂಜಿ, ಎಸ್.ಆರ್.ಸೂರಯ್ಯ, ದಿನೇಶ್ ಮಡ್ತಿಲ, ಡಿ.ಎಸ್.ಗಿರೀಶ್, ಐ.ಬಿ.ಚಂದ್ರಶೇಖರ, ಅನಿಲ್ ಬಳ್ಳಡ್ಕ, ಸುರೇಶ್ ಎಂ.ಎಚ್ ಮತ್ತಿತರರು ಉಪಸ್ಥಿತರಿದ್ದರು.