ಕೆಥೋಲಿಕ್ ಶಿಕ್ಷಣ ಮಂಡಳಿಯ ಶಾಲಾ ಮುಖ್ಯಸ್ಥರಿಗೆ ‘ಸೇ ನೋ ಟು ಡ್ರಗ್ಸ್’ ಕಾರ್ಯಾಗಾರ

ಮಂಗಳೂರು, ಸೆ.12 : ಕೆಥೋಲಿಕ್ ಶಿಕ್ಷಣ ಮಂಡಳಿಯ ಅನುದಾನರಹಿತ ವಿದ್ಯಾ ಸಂಸ್ಥೆಗಳ ಮುಖ್ಯಸ್ಥರಿಗೆ ಮಂಗಳೂರಿನ ಶಾಂತಿ ಕಿರಣ್, ಬಜ್ಜೋಡಿಯಲ್ಲಿ ಮಂಗಳವಾರ ‘ಸೇ ನೋ ಟು ಡ್ರಗ್ಸ್’ ಕುರಿತು ಕಾರ್ಯಾಗಾರವನ್ನು ನಡೆಸಲಾಯಿತು
ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು, ಮಂಗಳೂರು ಇಲ್ಲಿನ ಸಹ ಪ್ರಾಧ್ಯಾಪಕ ಡಾ. ಕರೆನ್ ಪಿ ಕ್ಯಾಸ್ಟೆಲಿನೊ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಡ್ರಗ್ ದುರುಪಯೋಗ, ವ್ಯಸನ, ಲಕ್ಷಣಗಳು ಮತ್ತಿತರ ವಿಶಯಗಳ ಮೇಲೆ ಬೆಳಕು ಚೆಲ್ಲಿದರು.
ಇನ್ನೋರ್ವ ಸಂಪನ್ಮೂಲ ವ್ಯಕ್ತಿ, ಬಜಾಲ್ ಲಿಂಕ್ ಇಂಟಿಗ್ರೇಟೆಡ್ ಪುನರ್ವಸತಿ ಕೇಂದ್ರದ, ನಿರ್ವಾಹಕರಾದ ಲಿಡಿಯಾ ಲೋಬೋ ಅವರು ಅಪ್ರಾಪ್ತ ಮಕ್ಕಳನ್ನು ಡ್ರಗ್ ಸಮಸ್ಯೆಯಿಂದ ದೂರವಿಡುವಲ್ಲಿ ಶಾಲಾ ಶಿಕ್ಷಕರ ಪಾತ್ರವನ್ನು ವಿವರಿಸಿದರು.
ಕಥೋಲಿಕ್ ಶಿಕ್ಷಣ ಮಂಡಳಿಯ ಕಾರ್ಯದರ್ಶಿ ವಂದನೀಯ ಆಂಟೋನಿ ಶೇರಾ ಸ್ವಾಗತಿಸಿ, ವಂದಿಸಿದರು
Next Story





