ಯುನಿವೆಫ್ - ಬೋಳಾರ ಶಾದಿಮಹಲ್‌ನಲ್ಲಿ ಸೀರತ್ ಸಮಾವೇಶ

ಮಂಗಳೂರು: ಯುನಿವೆಫ್ ಕರ್ನಾಟಕ 19 ಸೆಪ್ಟೆಂಬರ್ 2025 ರಿಂದ 2 ಜನವರಿ 2026 ರ ವರೆಗೆ ‘‘ಶೋಷಿತ ಸಮಾಜ ಹಾಗೂ ಮಾನವ ಘನತೆ ಮತ್ತು ಪ್ರವಾದಿ ಮುಹಮ್ಮದ್ (ಸ)’’ ಎಂಬ ಕೇಂದ್ರೀಯ ವಿಷಯದಲ್ಲಿ 100 ದಿನಗಳ ಕಾಲ ಹಮ್ಮಿಕೊಂಡಿರುವ 20 ನೇ ವರ್ಷದ ‘ಅರಿಯಿರಿ ಮನುಕುಲದ ಪ್ರವಾದಿಯನ್ನು’ ಅಭಿಯಾನದ ಸೀರತ್ ಸಮಾವೇಶವು ಬೋಳಾರ ಶಾದಿಮಹಲ್ ನಲ್ಲಿ ಶನಿವಾರ ನಡೆಯಿತು.
ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಅವರು ‘‘ಶೋಷಣೆಯ ವಿರುದ್ಧ ಪ್ರವಾದಿ (ಸ) ಯ ನಡೆ’’ ಎಂಬ ವಿಷಯದಲ್ಲಿ ಪ್ರಮುಖ ಭಾಷಣ ಮಾಡಿದರು.
ಅಭಿಯಾನ ಸಂಚಾಲಕ ಯು.ಕೆ. ಖಾಲಿದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಾಶಿಮ್ ಅಬ್ದುಲ್ ಹಮೀದ್ ಕಿರಾಅತ್ ಪಠಿಸಿದರು. ಮಂಗಳೂರು ಶಾಖಾಧ್ಯಕ್ಷ ಉಬೈದುಲ್ಲಾ ಬಂಟ್ವಾಳ್ ಮತ್ತು ಹಿರಿಯ ಸದಸ್ಯ ಅಬ್ದುಲ್ ಹಮೀದ್ ಅರ್ಕುಳ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹಫೀಝ್ ಶೇಖ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
Next Story





