ಶ್ರೀಕೃಷ್ಣದೇವರಾಯ ವಿವಿಯ ಪಠ್ಯಕ್ಕೆ ಅಮಿರ್ ಬನ್ನೂರು ಕವನ ಆಯ್ಕೆ

ಅಮಿರ್ ಬನ್ನೂರು
ಮಂಗಳೂರು: ಯುವ ಕವಿ ಅಮಿರ್ ಬನ್ನೂರು ಅವರ ‘ಕಣ್ಣೀರಿಗೆ ಊರು ತುಂಬದಿರಲಿ’ ಎಂಬ ಕವನ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಬಿಕಾಂ/ಬಿಬಿಎ/ಐಎಂಬಿ ನಾಲ್ಕನೇ ಸೆಮಿಸ್ಟರ್ ಕನ್ನಡ ಪಠ್ಯ ಪುಸ್ತಕದಲ್ಲಿ ಮುದ್ರಣಗೊಂಡಿದೆ.
ಪುತ್ತೂರು ತಾಲೂಕಿನ ಬನ್ನೂರು ನಿವಾಸಿ ಕೆಎಚ್ ಅಬ್ದುಲ್ಲ ಮುಸ್ಲಿಯಾರ್ ಹಾಗೂ ಖತೀಜಾ ದಂಪತಿಯ ಪುತ್ರನಾಗಿರುವ ಕೆಎ ಅಮಿರ್ ಪ್ರೌಢ ಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾರಾಡಿಯಲ್ಲಿ ಮುಗಿಸಿ ಉನ್ನತ ವಿದ್ಯಾಭ್ಯಾಸವನ್ನು ಕಲ್ಲಿಕೋಟೆಯ ಕುಟ್ಯಾಡಿಯಲ್ಲಿರುವ ಸಿರಾಜುಲ್ ಹುದಾದಲ್ಲಿ ಅರಬಿಕ್ ಭಾಷೆಯಲ್ಲಿ ಆರಂಭಿಸಿದರು. ಬಂಟ್ವಾಳ ತಾಲೂಕಿನ ಸುರಿಬೈಲಿನ ದಾರುಲ್ ಅಶ್ ಅರಿಯ್ಯದಲ್ಲಿ ‘ಹನೀಫಿ ಅಲ್ ಅಶ್ಅರಿ’ ಪದವಿಯನ್ನು ಪಡೆದಿದ್ದಾರೆ. ಸದ್ಯ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮುಧೋಳ ಗ್ರಾಮದಲ್ಲಿ ಧಾರ್ಮಿಕ ಶಿಕ್ಷಕರಾಗಿದ್ದಾರೆ.
Next Story





