ಸೀನಿಯರ್, ಅಂಡರ್-19 ವಿಭಾಗದ ರಾಜ್ಯ ರ್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿ: ಬೆಂಗಳೂರು ನಗರ ಆಟಗಾರರ ಮೇಲುಗೈ

ಮಂಗಳೂರು: ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆಯ ಸಹಯೋಗದಲ್ಲಿ ದಕ್ಷಿಣ ಕನ್ನಡ ಬ್ಯಾಡ್ಮಿಂಟನ್ ಸಂಸ್ಥೆ ಆಶ್ರಯದಲ್ಲಿ ನಗರದ ಉರ್ವ ಕ್ರೀಡಾ ಸಂಕೀರ್ಣದಲ್ಲಿ ನಡೆಯುತ್ತಿರುವ ಸೀನಿಯರ್ ಮತ್ತು ಅಂಡರ್-19 ವಿಭಾಗದ ರಾಜ್ಯ ರ್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಯ ಅರ್ಹತಾ ಸುತ್ತಿನ ಪಂದ್ಯಗಳ ಎರಡನೇ ದಿನವಾಗಿರುವ ಸೋಮವಾರ ನಡೆದ ಪಂದ್ಯಗಳ ವಿವರ ಇಂತಿವೆ.
ಪುರುಷರ ಸಿಂಗಲ್ಸ್ ವಿಭಾಗ: ಬೆಂಗಳೂರು ನಗರದ ವರುಣ್ ಶ್ರೀರಾಮ್ ಅವರು ಲಕ್ಷ್ಮೀಕಾಂತ್ ಎಂ ಗೌಡ ವಿರುದ್ಧ 15-12, 15-5ರಲ್ಲಿ , ನಿಖಿಲ್ ಪಿಎಂ ಅವರು ಗೌರವ್ ಗಡಿಯಾ ವಿರುದ್ಧ 15-12, 16-14 ರಲ್ಲಿ ಜಯ ಗಳಿಸಿದರು. ಮೈಸೂರಿನ ಗೌರವ್ ಆರ್ ಅವರು ದಕ್ಷಿಣ ಕನ್ನಡದ ಪ್ರಮೋದ್ ಕೆ.ಎಂ ವಿರುದ್ಧ ( 15-13 15-9 ) ಜಯ ಸಾಧಿಸಿದರು.
ಬೆಂಗಳೂರು ನಗರದ ಪ್ರದ್ಯುಮ್ ವಸಿಷ್ಠ ಅವರು ಬೆಂಗಳೂರು ಗ್ರಾಮಾಂತರದ ಅದ್ನಾನ್ ಅಹ್ಮದ್ ವಿರುದ್ಧ( 15-13 9-15 15-13), ಬೆಂಗಳೂರು ನಗರದ ಆಟಗಾರರಾದ ಪ್ರಣವ್ ಬಿ ಅವರು ಮುಹಮ್ಮದ್ ಸುಹಾನ್ ವಿರುದ್ಧ ( 15-6 15-4) , ಅರ್ಜುನ್ ಆರ್ ಕೌಂಡಿನ್ಯ ಅವರು ಆಕರ್ಷ್ ಡಿಎಸ್ ವಿರುದ್ಧ (14-16 15-6 15-9 ) ಜಯ ಸಾಧಿಸಿದರು.
ದಕ್ಷಿಣ ಕನ್ನಡದ ಗ್ಲಾನಿಶ್ ಪಿಂಟೊ ಅವರು ಬೆಂಗಳೂರು ನಗರದ ಸಾತ್ವಿಕ್ ಭಟ್ ವಿರುದ್ಧ ( 15-5 15-2) ಜಯ ಗಳಿಸಿದರು.
ಮೈಸೂರಿನ ವಿಶಾಲ್ ಪಿವಿ ಅವರು ಬೆಂಗಳೂರು ಗ್ರಾಮಾಂತರದ ರಿಶನ್ ಜೆರಿನ್ ಕೆ ವಿರುದ್ಧ (15-12 13-15 16-14), ಬೆಂಗಳೂರು ನಗರದ ಥ್ರಿಶ್ ವಿಟ್ಟಲ್ ಅವರು ಶಶಾಂಕ್ ಎನ್ ಅಮೀನ್ ವಿರುದ್ಧ( 15-9 17-15 ), ಅತೀಕ್ಷ್ ಜಥಾರ್ ಅವರು ಮೈಸೂರಿನ ಆದಿತ್ಯ ಬಿಜೆ, ವಿರುದ್ಧ ( 15-5 15-7) ಜಯ ಗಳಿಸಿದರು.
ಬೆಂಗಳೂರು ನಗರದ ತಿಲಕ್ ಬಿ ಶೆಟ್ಟಿ ಅವರು ವಿಸ್ಮಯ್ ರಾಜ್ ಎಸ್ ವಿರುದ್ಧ ( 15-10 15-4 ), ರೋಹನ್ ಶ್ರೀಸಾಯಿ ಕರವಾಡಿ ಅವರು ಚಿದಾನಂದ ಡಿಎಂ ವಿರುದ್ಧ (15-9 15-9), ನರೇನ್ ಎ.ಜಿ ಅವರು ಕಣ್ವ ಗೌಡ ವಿರುದ್ಧ (15-5 15-8 ), ಶ್ಯಾಮ್ ಬಿಂಡಿಗನವಿಲೆ ಅವರು ತನ್ಮಯ್ ಚಿವುಕುಲ ವಿರುದ್ಧ ( 15-11 15-7), ಶಮಂತ್ ರಾವ್ ಕಿದಿಯೋರ್, ಅವರು ಭಾವೇಶ್ ಕುಂಚೆ ವುರುದ್ಧ( 9-15 15-13 15-13 ) ಗೆಲುವಿನ ನಗೆ ಬೀರಿದರು.
ಬೆಂಗಳೂರು ನಗರದ ಸ್ವರೂಪ್ ಪಾಲಾಕ್ಷಯ್ಯ ಅವರು ಮೈಸೂರಿನ ಸಮರ್ಥ್ ಕೆಬಿ ವಿರುದ್ಧ ( 15-4 15-2) ಗೆಲುವು ಸಾಧಿಸಿದರು.
ಬೆಳಗಾವಿಯ ಮಾಹಿಮ್ ಗಾಡವಿ ಅವರು ಬೆಂಗಳೂರು ಗ್ರಾಮಾಂತರದ ಶೋಬಿತ್ ಆರ್ ಗೌಡ ವಿರುದ್ಧ (15-8 ,15-13) ಜಯ ಗಳಿಸಿದರು.
ಮೈಸೂರಿನ ಭುವನ್ ಎನ್ ಅವರು ಬೆಂಗಳೂರು ನಗರದ ಕರಣ್ ದಿನೇಶ್ ವಿರುದ್ಧ (15-9, 15-6 ), ಬೆಂಗಳೂರು ನಗರದ ವರುಣ್ ಜಿಪಿ ಅವರು ಅಭಿನವ್ ಬೆಟವಾರ ವಿರುದ್ಧ ( 15-8, 15-12), ತೋಶನ್ ನಾಯಕ್ ಅವರು ಹಿತೇನ್ ಕರ್ಕೇರ ವಿರುದ್ಧ ( 15-13, 15-13 ) , ಯುವರಾಜ್ ಎಸ್ ಅವರು ಕರಂಶ್ ನಾಯ್ಡು, ವಿರುದ್ಧ (15-13, 15-10 ) ಜಯಿಸಿದರು.
ಬೆಂಗಳೂರು ನಗರದ ರಾಘವೇಂದ್ರ ಪಿಎಂ ಅವರು ಮೈಸೂರಿನ ಮನೋಜ್ ಎವಿ ವಿರುದ್ಧ (15-6, 15-4), ಸ್ವಯಂ ಬೆಳ್ಳೂಡಿ ಅವರು ಶಶಾಂಕ್ ಎಸ್ ವಿರುದ್ಧ ( 15-6 , 15-6), ಕೌಶಿಕ್ ರೆಡ್ಡಿ ವೀರಂ ರೆಡ್ಡಿ, ಅವರು ಆದಿತ್ಯ ಪ್ರದೀಪ್( 15-9, 15-3 ), ಸುಬುಧ್ ಸೇಥಿ ಅವರು ಆಯುಷ್ ಬಾಯಾರಿ ವಿರುದ್ಧ (15-17, 15-9 ,17-15 ) ಜಯ ಗಳಿಸಿದರು.
ದಕ್ಷಿಣ ಕನ್ನಡದ ಸಹರ್ಷ್ ಎಸ್ ಪ್ರಭು ಅವರು ಬೆಂಗಳೂರು ಗ್ರಾಮಾಂತರದ ನಿಲೇಶ್ ಜಯರಾಜ್ ವಿರುದ್ಧ ( 15-9 15-13 ), ಬೆಂಗಳೂರು ನಗರದ ಹಾರ್ಧಿಕ್ ಮೊಹಂತಿ ಅವರು ಸೌಮ್ಯಾ ಪಟೇಲ್ ವಿರುದ್ಧ 15-5 15-13ರಲ್ಲಿ ಜಯ ಗಳಿಸಿದರು.
ಬೆಂಗಳೂರು ಗ್ರಾಮಾಂತರದ ಪವನಗೌಡ ಅವರು ಬೆಂಗಳೂರು ನಗರದ ಆರನ್ ಸುರೇಶ್ ವಿರುದ್ಧ ವಾಕ್ ಓವರ್ ಪಡೆದರು.
ಬೆಂಗಳೂರು ನಗರದ ಮೌರ್ಯ ಕೆವಿ ಅವರು ಕಾರ್ತಿಕ್ ಕುಮಾರ್ ವಿರುದ್ಧ 15-4, 10-15, 15-13 ರಲ್ಲಿ, ಕೊಡಗಿನ ಝೈದ್ ಅವರು ಬೆಂಗಳೂರು ನಗರದ ಸೃಜನ್ ಸಿ ಶೆಟ್ಟಿ ವಿರುದ್ಧ 15-7 ,15-7, ಬೆಂಗಳೂರು ನಗರದ ಪ್ರತೀಶ್ ಪದ್ಮರಾಜು ಅವರು ಥಮನ್ ಶ್ರೀಧರ್ ವಿರುದ್ಧ 15-13, 13-15 , 15-6 ರಲ್ಲಿ, ಬೆಂಗಳೂರು ಗ್ರಾಮಾಂತರದ ವಂಶಿಲ್ ಮೆಹ್ತಾ ಅವರು ಮೈಸೂರಿನ ಮನೀಶ್ ಗೌಡ ವಿರುದ್ಧ 8-15, 15-13, 17-15 ಅಂತರದಲ್ಲಿ ಜಯ ಗಳಿಸಿದರು.
*ಮೂರನೇ ಸುತ್ತು: ಬೆಂಗಳೂರು ನಗರದ ವರುಣ್ ಶ್ರೀರಾಮ್ (1), ಅವರು ನಿಕಿಲ್ ಪಿ.ಎಂ ವಿರುದ್ಧ 15-4, 15-8ರಲ್ಲಿ ಜಯ ಸಾಧಿಸಿದರು.
ಮೈಸೂರಿನ ಗೌರವ್ ಆರ್ ಅವರು ಬೆಂಗಳೂರು ನಗರದ ಪ್ರದ್ಯುಮ್ ವಸಿಷ್ಟ ವಿರುದ್ಧ 15-12, 15-13 ಅಂತರದಲ್ಲಿ , ಬೆಂಗಳೂರು ನಗರದ ಪ್ರಣವ್ ಬಿ ಅರ್ಜುನ್ ಅವರು ಆರ್ ಕೌಂಡಿನ್ಯ ವಿರುದ್ಧ 15-10, 15-11ರಲ್ಲಿ ಜಯ ಗಳಿಸಿದರು.
ಮೈಸೂರಿನ ವಿಶಾಲ್ ಪಿವಿ ಅವರು ದಕ್ಷಿಣ ಕನ್ನಡದ ಗ್ಲಾನಿಶ್ ಪಿಂಟೊ ವಿರುದ್ಧ 9-15, 15-12, 1-0 ರಲ್ಲಿ ಜಯ ಗಳಿಸಿದರು.
ಬೆಂಗಳೂರು ನಗರದ ಅತೀಕ್ಷ್ ಜಥಾರ್ ಅವರು ತ್ರಿಶ್ ವಿಟ್ಟಲ್ ವಿರುದ್ಧ 15-7 ,19-17 ಅಂತರದಲ್ಲಿ, ಬೆಂಗಳೂರು ನಗರದ ತಿಲಕ್ ಬಿ ಶೆಟ್ಟಿ, ಅವರು ರೋಹನ್ ಶ್ರೀಸಾಯಿ ಕರವಾಡಿ ವಿರುದ್ಧ 15-11, 15-12 ಅಂತರದಲ್ಲಿ ಜಯಿಸಿದರು.
ಬೆಂಗಳೂರು ನಗರದ ಶ್ಯಾಮ್ ಬಿಂಡಿಗನವಿಲೆ ಅವರು ನರೇನ್ ಎ.ಜಿ ವಿರುದ್ಧ 15-8, 15-6 ರಲ್ಲಿ, ಶಮಂತ್ ರಾವ್ ಕಿದಿಯೋರ್ ಅವರು ಸ್ವರೂಪ್ ಪಾಲಕ್ಷಯ್ಯ ವಿರುದ್ಧ 11-15 15-9 15-7 ರಲ್ಲಿ ಜಯ ಸಾಧಿಸಿದರು.
ಮೈಸೂರಿನ ಭುವನ್ ಎನ್ ಅವರು ಬೆಳಗಾವಿಯ ಮಾಹಿಮ್ ಗಾಡವಿ ವಿರುದ್ಧ 15-8, 15-11 ಅಂತರದಲ್ಲಿ, ಬೆಂಗಳೂರು ನಗರದ ವರುಣ್ ಜಿಪಿ ಅವರು ತೋಶನ್ ನಾಯಕ್ ವಿರುದ್ಧ 8-15, 15-11, 15-12 ಅಂತರದಲ್ಲಿ , ರಾಘವೇಂದ್ರ ಪಿಎಂ ಅವರು ಯುವರಾಜ್ ಎಸ್ ವಿರುದ್ಧ 15-9, 15-8 ವಿರುದ್ಧ, ಕೌಶಿಕ್ ರೆಡ್ಡಿ ವೀರಂ ರೆಡ್ಡಿ, ಅವರು ಸ್ವಯಂ ಬೆಳ್ಳೂಡಿ ವಿರುದ್ಧ 15-6, 15-9 ವಿರುದ್ಧ ಗೆಲುವು ದಾಖಲಿಸಿದರು.
ದಕ್ಷಿಣ ಕನ್ನಡದ ಸಹರ್ಷ್ ಎಸ್ ಪ್ರಭು ಅವರು ಬೆಂಗಳೂರು ನಗರದ ಸುಬುಧ್ ಸೇಥಿ ವಿರುದ್ಧ 14-16, 15-6, 15-10 ಅಂತರದಲ್ಲಿ, ಬೆಂಗಳೂರು ನಗರದ ಹಾರ್ಧಿಕ್ ಮೊಹಂತಿ ಅವರು ಬೆಂಗಳೂರು ಗ್ರಾಮಾಂತರದ ಪವನ್ ಗೌಡ ವಿರುದ್ಧ 15-9, 15-4 ರಲ್ಲಿ, ಕೊಡಗಿನ ಝೈದ್ ಅವರು ಬೆಂಗಳೂರು ನಗರದ ಮೌರ್ಯ ಕೆವಿ, ವಿರುದ್ಧ 15-13, 15-11ರಲ್ಲಿ , ಬೆಂಗಳೂರು ನಗರದ ಪ್ರತೀಶ್ ಪದ್ಮರಾಜು, ಅವರು ಬೆಂಗಳೂರು ಗ್ರಾಮಾಂತರದ ವಂಶಿಲ್ ಮೆಹ್ತಾ ವಿರುದ್ಧ 15-3, 15-4 ರಲ್ಲಿ ಜಯ ಗಳಿಸಿದರು.
*ಮಹಿಳೆಯರ ಸಿಂಗಲ್ಸ್: ಮೊದಲ ಸುತ್ತಿನಲ್ಲಿ ಬೆಂಗಳೂರು ನಗರದ ಹೇಮಿತಾ ಶ್ರೀನಿವಾಸ್‌ಅವರು ಹಾವೇರಿಯ ಐಶ್ವರ್ಯಾ ಅಗಡಿ, ವಿರುದ್ಧ 15-9, 15-5 ಅಂತರದಲ್ಲಿ ಜಯ ಸಾಧಿಸಿದರು. ಬೆಂಗಳೂರು ನಗರದ ಸತ್ಯಶ್ರೀ ಗಿಂಕಾ ಅವರು ಬೆಳಗಾವಿಯ ವೈಷ್ಣವಿ ವೆರ್ಲೇಕರ್ ವಿರುದ್ಧ ವಾಕ್ ಓವರ್ ಪಡೆದರು.
ಉಡುಪಿ ಬಿಂದುಶ್ರೀ ಎಸ್ ಅವರ ವಿರುದ್ಧ ಬೆಂಗಳೂರು ನಗರದ ನಂದಿನಿ ವೇದಮೂರ್ತಿ ಮೊದಲ ಸೆಟ್‌ನಲ್ಲಿ 9-11 ಆಡುತ್ತಿದ್ದಾಗ ಗಾಯಗೊಂಡು ನಿವೃತ್ತರಾಗಿ ಹೊರ ನಡೆದರು.
*ಎರಡನೇ ಸುತ್ತು: ಬೆಂಗಳೂರು ನಗರದ ಬನಶ್ರೀ ಸಿ ಪಾಟೀಲ್ (1), ಅವರು ಸಾನ್ವಿ ಬ್ಯಾನರ್ಜಿ ವಿರುದ್ಧ 15-7, 15-9 ರಲ್ಲಿ , ಖುಷಿ ಎಎಂ ಅವರು ಉಡುಪಿಯ ನಿಧಿ ವರ್ಮಾ ವಿರುದ್ಧ 15-5, 15-5 ರಲ್ಲಿ, ಬೆ.ನಗರದ ಕೀರ್ತನಾ ಮುರಳಿ ಕೃಷ್ಣ ಅವರು ರಕ್ಷಾ ಸುನಿಲ್ ವಿರುದ್ಧ 15-4 ,15-5ರಲ್ಲಿ, ದಕ್ಷಿಣ ಕನ್ನಡದ ಅದಿತಿ ಆಚಾರ್ಯ ಅವರು ಬೆಂಗಳೂರು ನಗರದ ವಿದ್ಯಾಶ್ರೀ ಎಪಿ ವಿರುದ್ಧ 15-3, 15-7 ರಲ್ಲಿ ಬೆಂಗಳೂರು ನಗರದ ವಿಭಾ ಎಂ ಎನ್ ಅವರು ಬೆಂಗಳೂರು ಗ್ರಾಮಾಂತರದ ನಿತ್ಯ ಅವಸ್ಥಿ ವಿರುದ್ಧ 20-21, 15-6, 15-5 ರಲ್ಲಿ, ಅನ್ವಿತಾ ಶೇಖರ್ ಅವರು ಸುಪ್ರೀತಾ ದೀಪಕ್ ವಿರುದ್ಧ 16-14, 2-15 15-12ರಲ್ಲಿ , ಗೀತಾಂಜಲಿ ಹರಿ ಮೆನನ್ ಅವರು ರುತ್ವಾ ಯತೀಶ್ ಕಂಬಳ ವಿರುದ್ಧ 15-10, 12-15, 15-5ರಲ್ಲಿ ಜಯ ಸಾಧಿಸಿದರು. ಹೇಮಿತಾ ಶ್ರೀನಿವಾಸ್ ಅವರು ವಿಭಾ ರಾಜೀವ ವಿರುದ್ಧ ವಾಕ್ ಓವರ್ ಪಡೆದರು. ರೀನಾ ಪಿರೇರಾ ಅವರು ಸತ್ಯಶ್ರೀ ಗಿಂಕಾ ವಿರುದ್ಧ 15-5, 15-5 ರಲ್ಲಿ, ಉಡುಪಿಯ ಪ್ರಾಪ್ತಿ ಕುಮಾರ್‌ಅವರು ಬೆಂಗಳೂರು ನಗರದ ನವ್ಯ ಕೊಲ್ಲುರಿ ವಿರುದ್ಧ 15-13, 15-6 ಅಂತರದಲ್ಲಿ ಜಯ ಗಳಿಸಿದರು.
ಬೆಂಗಳೂರು ನಗರದ ಸನಿಹಾ ಚೇತನ್ ಅವರು ಶಿವಮೊಗ್ಗದ ಸೈನಾ ಪ್ರೀತಂ ವಿರುದ್ಧ 15-9 , 15-8ರಲ್ಲಿ, ಕಲಂಡಿಕ ಅರುಣಕುಮಾರ್ ಅವರು ಪ್ರಿಯಾಂಕಾ ಪರ್ಮಾರ್ ವಿರುದ್ಧ 15-5, 15-4 ರಲ್ಲಿ, ಉಡುಪಿಯ ಬಿಂದುಶ್ರೀ ಎಸ್ ಅವರು ಬೆಂಗಳೂರು ನಗರದ ಅನುಷಾ ಆರ್‌ಎಂ ವಿರುದ್ಧ 15-10, 15-6 ಅಂತರದಲ್ಲಿ, ನಮಿತಾ ಎನ್‌ಯು ಅವರು ಆರಾಧನಾ ಪರ್ಮಾರ್‌ರಲ್ಲಿ 15-12, 15-10 ಅಂತರದಲ್ಲಿ, ಸಾನ್ವಿ ರಾತ್ ಅವರು ಆಂಚಲ್ ಎಸ್ ನಾಯರ್ ವಿರುದ್ಧ 15-11, 5-15, 15-8ರಲ್ಲಿ, ಬೆಂಗಳೂರು ಗ್ರಾಮಾಂತರದ ದೀಪಿಕಾ ಸಾಲಿಬಿಲ್ಲಾ ವಿರುದ್ಧ ಬೆಂಗಳೂರು ಗ್ರಾಮಾಂತರದ ಲೀಲಾ ಲಕ್ಷ್ಮೀ ಅವರು 0-8 ಅಂತರದಲ್ಲಿ ಹಿನ್ನಡೆಯಲ್ಲಿದಾಗ ನಿವೃತ್ತರಾಗಿ ಹೊರ ನಡೆದರು.
*ಅಂಡರ್ -19: ಬೆಂಗಳೂರು ನಗರದ ಇಂದ್ರಜ್ ವಿನೋದ್ (1) ಅವರು ಬೆಂಗಳೂರು ಗ್ರಾಮಾಂತರದ ಹರ್ಷಿಲ್ ಅಯ್ಯಪ್ಪ ಪಿಎ ವಿರುದ್ಧ 15-10, 15-11 ಅಂತರದಲ್ಲಿ, ತಿಲಕ್ ಬಿ ಶೆಟ್ಟಿ, ಅವರು ಆದಿತ್ಯ ಕುರು ವಿಲ್ಲ ವಿರುದ್ಧ 15-8 , 15-11 ಅಂತರದಲ್ಲಿ, ಕೊಂಟನೂರು ಶಿವರಾಜ್ ಅವರು ಶ್ಯಾಮಚರಣ್ ಕಂಪಲ್ಲಿ ವಿರುದ್ಧ 15-11, 15-9ರಲ್ಲಿ, ಅಧಿತ್ ಶೆಟ್ಟಿ ಅವರು ಪ್ರೀತಂ ಕುಮಾರ್ ಬಿ, ವಿರುದ್ಧ 15-6, 10-15, 15-13 ರಲ್ಲಿ ಜಯಿಸಿದರು.
ವರುಣ್ ಜಿಪಿ ಅವರು ತೇಜಸ್ ಮಣಿ ಕಣ್ಣನ್ ವಿರುದ್ಧ 15-10, 15-10 ಅಂತರದಲ್ಲಿ, ಉಡುಪಿಯ ಕಾನಿಷ್ಕ್ ಬೆಂಗ್ರೆ ಅವರು ವಾಕ್ ಓವರ್ ಪಡೆದರು. ಮಾಹಿಮ್ ಗಡಾವಿ ಅವರು ದಕ್ಷಿಣ ಕನ್ನಡದ ಸಾತ್ವಿಕ್ ಎಸ್ ಪ್ರಭು (5) ವಿರುದ್ದ 15-11, 15-11 ಅಂತರದಲ್ಲಿ ಜಯಿಸಿದರು.
ಬೆಂಗಳೂರು ನಗರದ ತೋಶನ್ ನಾಯಕ್ ಅವರು ತನ್ಮಯ್ ಚಿವುಕುಲ ವಿರುದ್ಧ 17-15, 12-15, 15-10 ರಲ್ಲಿ, ಬೆಂಗಳೂರು ನಗರದ ವಿಸ್ಮಯ್ ರಾಜ್ ಎಸ್, ಅವರು ಬೆ.ಗ್ರಾ ವಂಶಿಲ್ ಮೆಹ್ತಾ ವಿರುದ್ಧ 9-15, 15-13, 15-12 ರಲ್ಲಿ, ಬೆ.ನಗರದ ಸ್ವಯಂ ಬೆಳ್ಳೂಡಿ ಅವರು ಸುಜೀತ್ ಜೆ ಎಸ್ ವಿರುದ್ಧ 15-8, 13-15, 15-12 ರಲ್ಲಿ, ಹಾರ್ಧಿಕ್ ಮೊಹಂತಿ ಅವರು ಗಣೇಶ್ ಬಾಬು ವಿರುದ್ಧ 15-9, 15-5 ಅಂತರದಲ್ಲಿ, ಸ್ವರೂಪ್ ಪಾಲಕ್ಷಯ್ಯಅವರು ಮುಹಮ್ಮದ್ ಸುಹಾನ್ ವಿರುದ್ಧ 15-6, 15-10 ರಲ್ಲಿ ಕರಂಶ್ ನಾಯ್ಡು ಅವರು ರಾಘವ್ ಶರ್ಮಾ ವಿರುದ್ಧ 15-12 , 15-4 ರಲ್ಲಿ, ಶ್ರೇಯಸ್ ಚಂದ್ರಶೇಖರ್ ಅವರು ಅಭಿನವ್ ಬೆಟವಾರ ವಿರುದ್ಧ 15-7, 15-8ರಲ್ಲಿ, ದಕ್ಷಿಣ ಕನ್ನಡದ ನಿಕೇತನ್ ಅಮೀನ್ ಅವರು ಬೆ.ನಗರದ ವಿಭು ಪ್ರವೀಣ್ ಗೋಪಿನಾಥ್ ವಿರುದ್ಧ 15-7, 15-7 ರಲ್ಲಿ ಮತ್ತು ಬೆಂಗಳೂರು ಗ್ರಾ. ನಿಲೇಶ್ ಜಯರಾಜ್, ಅವರು ಬೆ.ನಗರದ ವೀರ ದಿಡ್ಡಿ 15-9, 15-8 ಅಂತರದಲ್ಲಿ ಜಯ ಗಳಿಸಿದರು.







