ಸೀನಿಯರ್, ಅಂಡರ್-19 ರಾಜ್ಯ ರ‍್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಗೆ ಚಾಲನೆ: ಸಾತ್ವಿಕ್ , ಕನಿಷ್ಕ್‌ಗೆ ಗೆಲುವು

ಮಂಗಳೂರು, ಜು.27: ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆಯ ಸಹಯೋಗದಲ್ಲಿ ದಕ್ಷಿಣ ಕನ್ನಡ ಬ್ಯಾಡ್ಮಿಂಟನ್ ಸಂಸ್ಥೆ ಆಶ್ರಯದಲ್ಲಿ ಉರ್ವ ಕ್ರೀಡಾ ಸಂಕೀರ್ಣದಲ್ಲಿ ರವಿವಾರ ಆರಂಭಗೊಂಡ ಸೀನಿಯರ್ ಮತ್ತು ಅಂಡರ್-19 ವಿಭಾಗದ ರಾಜ್ಯ ರ‍್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಯ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿಯ ಆಟಗಾರರು ಮೇಲುಗೈ ಸಾಧಿಸಿದ್ದಾರೆ.
ಎರಡನೇ ಸುತ್ತಿನ ಪಂದ್ಯಗಳ ಫಲಿತಾಂಶಗಳು: ಬೆಂಗಳೂರಿನ ಇಂದ್ರಜ್ ವಿನೋದ್‌ಗೆ ಬೆಂಗಳೂರಿನ ಧನಯ್ ರಾಣಾ ವಿರುದ್ಧ 15-12, 15-13ರಲ್ಲಿ ಜಯ ಗಳಿಸಿದರು.
ಬೆಂಗಳೂರಿನ ಹರ್ಷಿಲ್ ಅಯ್ಯಪ್ಪ ಅವರು ದಕ್ಷಿಣ ಕನ್ನಡದ ಹರ್ಷವರ್ಧನ್ ವಿರುದ್ಧ 7-15, 15-13, 15-11ರಲ್ಲಿ ಜಯ ಸಾಧಿಸಿದರು. ಬೆಂಗಳೂರಿನ ತಿಲಕ್ ಬಿ.ಶೆಟ್ಟಿ ಅವರು ಬೆಂಗಳೂರಿನ ಜಶನ್ ಗೌಡ ವಿರುದ್ಧ 15-3, 15-4ರಲ್ಲಿ, ಬೆಂಗಳೂರಿನ ಆದಿತ್ಯ ಕುರುವಿಳಗೆ ಬೆಂಗಳೂರಿನ ಪ್ರಥಮ್ ಹಲಗೂರು ವಿರುದ್ಧ 15-4, 15-8ರಲ್ಲಿ, ಬೆಂಗಳೂರಿನ ಶ್ಯಾಮ್‌ಚರಣ್ ಅವರು ಬೆಂಗಳೂರಿನ ಆಕರ್ಷ್ ವಿರುದ್ಧ 9-15, 15-12, 15-13, ಬೆಂಗಳೂರಿನ ಪ್ರೀತಂ ಕುಮಾರ್ ಅವರು ಬೆಂಗಳೂರಿನ ವೈಭವ್ ವಿರುದ್ಧ 17-15, 15-13, ಬೆಂಗಳೂರಿನ ವರುಣ್‌ಗೆ ಬೆಂಗಳೂರಿನ ಆಯುಷ್ ಗೌಡ ವಿರುದ್ಧ 15-4, 15-4ರಲ್ಲಿ, ಬೆಂಗಳೂರಿನ ತೇಜಸ್‌ಗೆ ಬೆಂಗಳೂರಿನ ಪ್ರಣವ್ ವಿರುದ್ಧ 15-6, 15-9 ಅಂತರದಲ್ಲಿ, ಉಡುಪಿಯ ಕನಿಷ್ಕ್ ಬೆಂಗರೆ ಅವರು ಬೆಂಗಳೂರಿನ ಹರೀಶ್ ವಿರುದ್ಧ 15-4, 15-5ರಲ್ಲಿ, ದಕ್ಷಿಣ ಕನ್ನಡದ ಸಾತ್ವಿಕ್ ಪ್ರಭು ಅವರು ಬೆಂಗಳೂರಿನ ರಿತ್ವಿಕ್ ರಾಜ್ ವಿರುದ್ಧ 15-8, 15-4ರಲ್ಲಿ, ಬೆಂಗಳೂರಿನ ತನ್ಮಯ್‌ಗೆ ಬೆಂಗಳೂರಿನ ಸನ್ಮಿತ್ ವಿರುದ್ಧ 15-3, 15-6ರಲ್ಲಿ ಜಯ ಗಳಿಸಿದರು. ಬೆಂಗಳೂರಿನ ವಿಸ್ಮಯ್ ರಾಜ್ ಅವರು ಬೆಂಗಳೂರಿನ ಶ್ರೀಸಾಯ್ ವಿರುದ್ಧ 15-13, 15-3ರಲ್ಲಿ ಗೆಲು ದಾಖಲಿಸಿದರು.
ಬೆಂಗಳೂರು ಗ್ರಾಮಾಂತರದ ವನ್ಶಿಲ್ ಮೆಹತಾಗೆ ಬೆಂಗಳೂರಿನ ಮುರಳಿ ಕೃಷ್ಣ ವಿರುದ್ಧ 15-4, 15-12ರಲ್ಲಿ, ಬೆಂಗಳೂರಿನ ಸುಜಿತ್ ಅವರು ಬೆಂಗಳೂರಿನ ಕರಣ್ ದಿನೇಶ್ ವಿರುದ್ಧ 15-13, 16-14ರಲ್ಲಿ, ಬೆಂಗಳೂರಿನ ಹಾರ್ದಿಕ್‌ಗೆ ಬೆಂಗಳೂರಿನ ವಿವಾನ್ ವಿರುದ್ಧ 15-1, 15-1ರಲ್ಲಿ, ಬೆಂಗಳೂರಿನ ಮಹಮ್ಮದ್ ಸುಹಾನ್ ಅವರು ದಕ್ಷಿಣ ಕನ್ನಡದ ಅಶ್ವಿಜ್ ಕಾಮತ್ ವಿರುದ್ಧ 15-11, 15-12ರಲ್ಲಿ, ಬೆಂಗಳೂರಿನ ಕರನ್ಶ್‌ಗೆ ಬೆಂಗಳೂರಿನ ವಿಹಾನ್ ಅರೋರ ವಿರುದ್ಧ 15-7, 15-6 ಅಂತರದಲ್ಲಿ, ಬೆಂಗಳೂರಿನ ರಾಘವ ಶರ್ಮ ಅವರು ಉಡುಪಿಯ ಅಶ್ವಿನ್ ಶೆಟ್ಟಿ ವಿರುದ್ಧ 15-9, 15-6ರಲ್ಲಿ, ಬೆಂಗಳೂರಿನ ಶ್ರೇಯಸ್ ಚಂದ್ರಶೇಖರ್ ಅವರು ಬೆಂಗಳೂರಿನ ಹಿತೇನ್ ಕರ್ಕೇರ ವಿರುದ್ಧ 15-9, 15-7ರಲ್ಲಿ, ಬೆಂಗಳೂರಿನ ವೀರ್ ದಿಡ್ಡಿ ಅವರು ಬೆಂಗಳೂರಿನ ಸುಹಾಸ್ ರೆಡ್ಡಿ ವಿರುದ್ಧ 15-12, 15-10ರಲ್ಲಿ ಹಾಗೂ ಬೆಂಗಳೂರು ಗ್ರಾಮಾಂತರದ ನೀಲೇಶ್‌ಗೆ ಬೆಂಗಳೂರಿನ ತಮನ್ ವಿರುದ್ಧ 15-10, 15-13ರಲ್ಲಿ ಗೆಲುವು ದಾಖಲಿಸಿದರು.
*8 ಮಂದಿಗೆ ವಾಕ್ ಓವರ್: ಬೆಂಗಳೂರಿನ ಶಿವರಾಜ್ ಕೊಂಟನೂರ್, ಅದಿತ್ ಶೆಟ್ಟಿ, ಸ್ವಯಂ, ಸ್ವರೂಪ್ ಪಾಲಾಕ್ಷಯ್ಯ, ಅಭಿನವ್, ವಿಭು ಪ್ರವೀಣ್, ದಕ್ಷಿಣ ಕನ್ನಡದ ನಿಕೇತನ್ ಅಮೀನ್ ಮತ್ತು ಬೆಳಗಾವಿಯ ಮಹಿಮ್ ಅವರು ವಾಕ್ ಓವರ್ ಪಡೆದು ಮೂರನೇ ಸುತ್ತು ತಲುಪಿದರು.
ಸೀನಿಯರ್ ವಿಭಾಗದ ಮೊದಲ ಸುತ್ತಿನಲ್ಲಿ 58 ಮಂದಿ ಮುಂದಿನ ಸುತ್ತು ಪ್ರವೇಶಿಸಿದರು. ಇವರ ಪೈಕಿ 44 ಆಟಗಾರರು ಬೆಂಗಳೂರಿವರು. 7 ಮಂದಿ ಮೈಸೂರಿನವರು, ತಲಾ ಮೂವರು ದಕ್ಷಿಣ ಕನ್ನಡ ಮತ್ತು ಬೆಂಗಳೂರು ಗ್ರಾಮಾಂತರ, ತಲಾ ಒಬ್ಬರು ಕೊಡಗು ಮತ್ತು ಬೆಳಗಾವಿಯ ಆಟಗಾರರು.
*ಉದ್ಘಾಟನೆ: ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ ಅವರು ಬ್ಯಾಡ್ಮಿಂಟನ್ ಟೂರ್ನಿಯನ್ನು ಉದ್ಘಾಟಿಸಿದರು. ರಾಜ್ಯ ಮಾಜಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ.ಆತೀಕ್, ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ ಪ್ರದೀಪ್ ಡಿ ಸೋಜ, ಯೆನೆಪೋಯ ವಿವಿ ಪ್ರೊಚಾನ್ಸ್‌ಲರ್ ಎಂ. ಫರಾದ್ , ಮಂಗಳೂರು ಸ್ಮಾರ್ಟ್ ಸಿಟಿಯ ಜನರಲ್ ಮ್ಯಾನೇಜರ್ ಅರುಣ್ ಪ್ರಭಾ, ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆಯ ಅಧ್ಯಕ್ಷ ಮನೋಜ್ ಕುಮಾರ್, ಜಿಲ್ಲಾ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಸುಪ್ರೀತ್ ಆಳ್ವ, ಜೊತೆ ಕಾರ್ಯದರ್ಶಿ ದೀಪಕ್ ಕುಮಾರ್, ಮತ್ತಿತರರು ಉಪಸ್ಥಿತರಿದ್ದರು.







