ಮರ್ಕಝುಲ್ ಹುದಾ ಗಲ್ಫ್ ಸಂಚಾಲಕರಾಗಿ ಶಂಸುದ್ದೀನ್ ಬೈರಿಕಟ್ಟೆ ಆಯ್ಕೆ

ಪುತ್ತೂರು: ಮರ್ಕಝುಲ್ ಹುದಾ ಕರ್ನಾಟಕ ಇದರ ಜಿ.ಸಿ.ಸಿ ಸಮಿತಿಗಳ ನೂತನ ಗಲ್ಫ್ ಸಂಚಾಲಕರಾಗಿ ಶಂಸುದ್ದೀನ್ ಬೈರಿಕಟ್ಟೆ ಆಯ್ಕೆಯಾಗಿದ್ದಾರೆ. ಮರ್ಕಝ್ ಕೇಂದ್ರ ಆಡಳಿತ ಸಮಿತಿಯು ಅವರನ್ನು ಆಯ್ಕೆ ಮಾಡಿದೆ.
ಮರ್ಕಝುಲ್ ಹುದಾ ಕರ್ನಾಟಕ ಕೇಂದ್ರ ಸಮಿತಿಯ ಸದಸ್ಯರಾದ ಇವರು ಮಂಗಳೂರಿನ ಮಸ್ನವಿ ಖುರಾನಿಕ್ ಸೆಂಟರ್ ಇದರ ಪ್ರ.ಕಾರ್ಯದರ್ಶಿ,ಮತ್ತು ಎಸ್ಎನ್ ಬಿ ಗ್ರೂಪ್ ಇದರ ನಿರ್ದೇಶಕರಲ್ಲಿ ಓರ್ವರಾಗಿರುತ್ತಾರೆ.
ಎಂಎಚ್ ಕೆ ಸೌದಿ ಅರೇಬಿಯಾ ಇದರ ರಾಷ್ಟ್ರೀಯ ಸಮಿತಿಯ ಪ್ರಮುಖ ಮುಂದಾಳುವಾಗಿ ಸೇವೆ ಸಲ್ಲಿಸುತ್ತಿರುವ ಇವರು ಅನಿವಾಸಿ ಕನ್ನಡಿಗಾರಾಗಿದ್ದಾರೆ.
Next Story





